ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್ ಇಂಡಿಯಾ ಎಂದು ತಿಳಿಯಲಾಗಿದ್ದ ಪ್ರದೇಶದ ಅಧಿಕಾರಯುತ ಇತಿಹಾಸವನ್ನು ಸ್ಥೂಲವಾಗಿ ನಿರೂಪಿಸುತ್ತದೆ. ಕೃತಿಯ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ. ಇತಿಹಾಸದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿಯ ಪರಿಷ್ಕರಣ ಮತ್ತು ವ್ಯಾಖ್ಯಾನವನ್ನು ಪ್ರಶ್ನಿಸುವಲ್ಲಿ ಈ ಕೃತಿಯು ರಾಜಕೀಯ ನಿರೂಪಣೆಯಿಂದ ದೂರ ಸರಿದು, ಆಧುನಿಕ ಭಾರತದ ಸಾಮಾಜಿಕ, ಆರ್ಥಿಕ ಮತು ಧಾರ್ಮಿಕ ಇತಿಹಾಸದತ್ತ ಸರಿದಿದೆ. ಭಾರತದಲ್ಲಿ 18ನೇ ಶತಮಾನದಲ್ಲಿದ್ದ ಪರಿಸ್ಥಿತಿಯು ಹೇಗೆ ಈಸ್ಟ್ ಇಂಡಿಯಾ ಕಂಪೆನಿಯು ಭಾರತದಲ್ಲಿ ಆಳ್ವಿಕೆಯನ್ನು ಸ್ಥಾಪಿಸಲು ನೆರವಾಯಿತು ಎಂಬ ಬಗ್ಗೆ ಈ ಕೃತಿಯು ವಿವರಿಸುತ್ತದೆ. Read more