ಬಾಲ್ಯವೆಂಬುದು ನೆನಪುಗಳ ಬುತ್ತಿ. ವ್ಯಕ್ತಿಯೊಬ್ಬ ತನ್ನ ಗತದಿನಗಳ ಸವಿನೆನಪುಗಳನ್ನು ಸ್ಮರಿಸಿಕೊಳ್ಳುವುದನ್ನು ನಾಸ್ಟಾಲ್ಜಿಯಾ ಎನ್ನುತ್ತಾರೆ. ಅಂಥ ಹಲವು ಸಿಹಿನೆನಪುಗಳ ಪ್ರಬಂಧಮಾಲೆಯೇ "ಮಾನಸೋಲ್ಲಾಸ". ಇಲ್ಲಿ ಲೇಖಕರು ತಮ್ಮ ಹಳ್ಳಿಯ ಮನೆಯ ಅಟ್ಟದ ಬಗ್ಗೆ, ಬಾಲ್ಯಕಾಲದಲ್ಲಿ ಬೇಸಗೆ ರಜೆಯ ಸಂಜೆಗಳಲ್ಲಿ ಆಡುತ್ತಿದ್ದ ಆಟಗಳ ಬಗ್ಗೆ ವಿಸ್ತೃತವಾಗಿ ತಮ್ಮ ನೆನಪುಗಳನ್ನು ಹಂಚಿಕೊoಡಿದ್ದಾರೆ. ಹಿಂದೆಲ್ಲ ಮನೆಗಳ ದೇವರ ಪಟಗಳ ಹಿಂದಿನ ಜಾಗದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಆದರೆ ಈಗ ಆ ಹಕ್ಕಿಗಳು ಕಾಣುವುದೇ ದುರ್ಲಭವಾಗಿದೆ ಎಂಬ ವಿಷಾದ ಒಂದು ಪ್ರಬಂಧದಲ್ಲಿದೆ. ಜೂನ್ ಒಂದರoದು ಶಾಲೆಯ ಪುನರರಾಂಭ ಆದಾಗ ಮಕ್ಕಳು ಪಡುತ್ತಿದ್ದ ಪಡಿಪಾಟಲು, ಮಳೆಗಾಲದ ಮಿತ್ರನಾದ ಕೊಡೆ, ಕೊಡೆಯ ಇತಿಹಾಸ, ಮೊದಲ ಮಳೆಯಲ್ಲಿ ಅಂಗಳದಲ್ಲಿ ಕಾಣಿಸಿಕೊಳ್ಳುವ ಕೆಂಪು ಬಣ್ಣದ ವೆಲ್ವೆಟ್ ಗುಬ್ಬಿ ಇತ್ಯಾದಿಗಳ ಬಗ್ಗೆ ಇಲ್ಲಿ ಆಪ್ತವೆನ್ನಿಸುವ ಬರಹಗಳಿವೆ. ಹಾಗೆಯೇ ರಮಾನಂದ ಸಾಗರ ಅವರ ರಾಮಾಯಣ, ಸಿದ್ಧಾರ್ಥ್ ಕಾಖ್ ಅವರ ಸುರಭಿ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಇದೆ. ಕೇವಲ ಮೂವತ್ತು ವರ್ಷಗಳ ಅವಧಿಯಲ್ಲೇ ಕಣ್ಮರೆಯಾಗಿಹೋಗಿರುವ ರೇಡಿಯೋ ಟ್ರಾನ್ಸಿಸ್ಟರ್, ಕಪ್ಪು ಬಿಳಿ ಟಿವಿ, ಫ್ಲಾಪಿ ಡಿಸ್ಕ್ಗಳು, ಸಿಡಿ ರಾಮ್‌ಗಳು, ಪೇಜರ್, ಟೈಪ್ ರೈಟರ್, ಟೆಲಿಗ್ರಾಫ್ ಮುಂತಾದ ಹತ್ತುಹಲವು ತಂತ್ರಜ್ಞಾನಗಳ ಮಧುರ ನೆನಪುಗಳು ಈ ಕೃತಿಯಲ್ಲಿ ತುಂಬಿಕೊoಡಿವೆ. Read more