shabd-logo

ಮಹಡಿ ರಹಸ್ಯ

2 June 2023

6 ವೀಕ್ಷಿಸಲಾಗಿದೆ 6

ಅದೊಂದು ನಿರ್ಜನ ಪ್ರದೇಶದಲ್ಲಿದ್ದ ಎರಡು ಮಹಡಿಯಿದ್ದ ಒಂಟಿ ಮನೆ ಅದರ ಮಾಲೀಕರು ಆ ಮನೆಯನ್ನು ಬಿಟ್ಟು ಹೋಗಿ ವರ್ಷದ ಮೇಲಾಯ್ತು


ಪ್ರಣತಿ ಮತ್ತು ಆಕೆಯ ಗಂಡ ಪ್ರಸಾದ್ ಈಗ ಆ ಮನೆಯನ್ನು ಖರೀದಿ ಮಾಡುವ ಯೋಚನೆಯಲ್ಲಿದ್ದಾರೆ.

ಆ ಮನೆ  ನಿರ್ಜನ ಒಂಟಿ ಮನೆ ಎಂಬುದನ್ನು ಬಿಟ್ಟರೆ
ಸುತ್ತಲೂ ಹಿತ ನೀಡುವ ಪರಿಸರ ಇದೆ.


ಅಂತೂ ಮನೆಯ ಮಾಲೀಕನನ್ನು ಹುಡುಕಿ ಅವನ ಬಳಿ ಹೋಗಿ ಪ್ರಸಾದ್ ಮನೆಯ ಬಗ್ಗೆ ವಿಚಾರಿಸುವನು.

ಬೇಡ ಪ್ರಸಾದ್ ಆ ಮನೆ ಸರಿ ಇಲ್ಲ ನಮಗೆ ನೆಮ್ಮದಿ ಇಲ್ಲದೆ ಆ ಮನೆಯನ್ನು ಬಿಟ್ಟು ಬಂದಿದ್ದೇವೆ.
ಅಲ್ಲದೆ... ಅಷ್ಟು ಹೇಳುವಾಗಲೇ ಮಾಲೀಕ ಬೆವರಿ ಹೋಗಿದ್ದ.

ಯಾಕೆ ಸರ್ ಏನಾಯ್ತು?

ನೋಡಪ್ಪ ಹೇಳಿದೆ ಅಲ್ವಾ ಆ ಮನೆ ತೊಗೊಂಡು ತೊಂದ್ರೆ ಆದ್ರೆ ಅದಕ್ಕೆ ನಾನೆ ಹೊಣೆ ಆಗಬೇಕು ಅದಕ್ಕೆ ಬೇಡ ಅಂತಿರೋದು.

ಯಾಕೆ ಸರ್ ಆ ಮನೆಯಲ್ಲಿ ಅಂಥದ್ದು ಏನಿದೆ ಅದನ್ನಾದರೂ ಹೇಳಿ ನಮಗಂತೂ ಮನೆ ತುಂಬಾ ಇಷ್ಟ ಆಗಿದೆ.
ಅಕ್ಕಪಕ್ಕದವರ ಕಿರಿ ಕಿರಿ ಇಲ್ಲದೆ ನೆಮ್ಮದಿಯಾಗಿ ಇರಬಹುದು ಪ್ಲೀಸ್ ಸರ್ ಎಷ್ಟೇ ಹಣ ಹೇಳಿದರು ಕೊಡೋಕೆ ಸಿದ್ದ ಆದರೆ ಮನೆ ಕೊಡೋಲ್ಲ ಅಂತಾ ಮಾತ್ರ ಹೇಳಬೇಡಿ.

ಮಾಲೀಕನ ಮಾತನ್ನು ತಿರಸ್ಕರಿಸಿ ಕೊನೆಗೂ ಪ್ರಸಾದ್ ಆ ಮನೆಯ ಕೀ ಪಡೆದು ಅಲ್ಲಿಂದ ಹೊರಡುವನು.



ಹಗಲು ಹೊತ್ತಿನಲ್ಲಿ ನೋಡೋಕೆ ಸುಂದರವಾಗಿ ಕಾಣುತಿತ್ತು. ಆದರೆ ರಾತ್ರಿಯಾದರೆ ಸಾಕು ಭಯ ಪಡುವಂತೆ ಇತ್ತು.

ಪ್ರಣತಿ ಮತ್ತು ಪ್ರಸಾದ್ ಈ ಮೊದಲು ಬಾಡಿಗೆ ಮನೆಯೊಂದರಲ್ಲಿ ವಾಸಿಸುತಿದ್ದರು.
ಮದುವೆಯಾಗಿ ಮೂರು ವರ್ಷವಾದರೂ ಇವರಿಗೆ ಮಕ್ಕಳಾಗಿರಲಿಲ್ಲ  ಅಕ್ಕಪಕ್ಕದವರ ಕಟು ನುಡಿಗಳನ್ನು ಕೇಳಿ ಇಬ್ಬರು ಬೇಸತ್ತು ಹೋಗಿ ಈಗ ಒಂಟಿ ಮನೆಗಾಗಿ ಹುಡುಕುತಿದ್ದರು.




ಕೀ ಪಡೆದ ಮಾರನೇ ದಿನ ಮನೆಯ ಸಾಮಾನುಗಳೊಂದಿಗೆ ಮನೆಗೆ ಬಂದರು.

ಎರಡು ಮೂರು ಬಾರಿ ಮನೆ ನೋಡಿದ್ದರು ಆದರೆ ಒಳಗೆ ಹೋಗುತ್ತಿರುವುದು ಮೊದಲ ಬಾರಿ

ಕೀ ತೆಗೆದು ಒಳಗೆ ನುಗ್ಗಿದರು.
ಸುತ್ತಲು ಕತ್ತಲು ಆಗಿತ್ತು. ಸ್ವಿಚ್ ಆನ್ ಮಾಡಿ ನೋಡಿದರು ದೂಳು ಹಿಡಿದ ಮನೆ ನೋಡಿ ಕೆಲಸದವರಿಗೆ ಮನೆ ಕ್ಲೀನ್ ಮಾಡೋಕೆ ಹೇಳಿ ಮನೆಯಿಂದ ಹೊರಬಿದ್ದರು.

ಮನೆಗೆ ಬೇಕಾದ ಕೆಲವು ಸಾಮಾನುಗನ್ನು ತರಲು ಹೋಗಿ ಬಂದರು
ಅಷ್ಟರಲ್ಲಿ ಮನೆಯು ಕ್ಲೀನ್ ಆಗಿತ್ತು.
ಕೆಲಸಗಾರರಿಗೆ ದುಡ್ಡು ಕೊಟ್ಟು ಕಳಿಸಿದ
ಮದ್ಯಾಹ್ನದ ಹೊತ್ತಾಗಿತ್ತು.


ಪ್ರಣತಿ ಸಣ್ಣಗೆ ಅಡುಗೆ ಮುಗಿಸಿದಳು ಇಬ್ಬರು ಊಟ ಮುಗಿಸಿ ಮನೆಯ ಸಾಮಾನುಗಳನ್ನು ಇಡಲು ಹೋದರು ದೊಡ್ಡ ಮನೆ ಆದರೆ ಇಬ್ಬರೇ ಆದರಿಂದ ಕೆಳಗಿನ ಮಹಡಿಯಲ್ಲೇ ಇದ್ದರು.

ಮನೆ ಕೊಡುವಾಗ ಮಾಲೀಕ ಮೇಲಿನ ಮಹಡಿಗೆ ಹೋಗಬೇಡಿ ಎಂದಿದ್ದರೂ ಆದರೆ ಕೀ ಮಾತ್ರ ಪ್ರಸಾದ್ ನ ಬಳಿ ಇತ್ತು.



ಸಾಮಾನುಗಳೆಲ್ಲ ಇಟ್ಟು ಕೆಳಗೆ ಇದ್ದ ರೂಮಿನಲ್ಲಿ ಇಬ್ಬರು ಸ್ವಲ್ಪ ಹೊತ್ತು ರೆಸ್ಟ್ ಮಾಡಲು ಹೋದರು.

ಸುಸ್ತು ಆಗಿದ್ದರಿಂದ ಮಲಗಿದ ತಕ್ಷಣ ನಿದ್ದೆ ಆವರಿಸಿತು.

ಗಂಟೆಯ ಬಳಿಕ.....
ಪ್ರಣತಿಗೆ  ಗೆಜ್ಜೆ ಶಬ್ದ ಕೇಳಿತು
ಒಮ್ಮೆಲೇ ಎದ್ದಳು ಕನಸಿರಬೇಕೆಂದುಕೊಂಡಳು.

ಸಮಯ ನಾಲ್ಕರ ಸಮೀಪ ಇತ್ತು ಸಂಜೆಗೆ ಏನಾದರೂ ಮಾಡೋಣ ಎಂದು ಎದ್ದು ಅಡುಗೆ ಮನೆಗೆ ಹೋಗಿ ಕಾಫಿಗೆ ಹಾಲು ಕಾಯಲು ಇಟ್ಟು,
ಹೊರಬಂದಳು ಸಂಜೆಯ ಸಮಯದಲ್ಲಿ ಬಾಲ್ಕನಿಗೆ ಹೋಗಬೇಕೆಂದೇನಿಸಿತು ಆದರೆ ಅಲ್ಲಿ ಹೋದಾಗ ಬೀಗ ಹಾಕಿದ್ದರಿಂದ ಅನುಮಾನದಲ್ಲಿಯೇ ಕೆಳಗೆ ಬಂದು ಕಾಫಿ ಮಾಡಿ ಕಪ್ಪಿಗೆ ಸುರಿದುಕೊಂಡು ಪ್ರಸಾದ್ ನನ್ನು ಎಬ್ಬಿಸಿ ಈ ಬಗ್ಗೆ ವಿಚಾರಿಸಿದಳು.

ಅವನು ಮಾಲೀಕ ಹೇಳಿದಂತೆ ಹೇಳಿದ
ಆದರೂ ಅವಳ ಮನಸ್ಸು ಮೇಲಿನ ಮಹಡಿಯಲ್ಲೆ ಇತ್ತು.

ರಾತ್ರಿ ಊಟ ಮುಗಿಸಿ ಇಬ್ಬರು ಟಿವಿ ನೋಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ

ಸಮಯ ಸುಮಾರು 11ರ ಹೊತ್ತಿಗೆ ಇಬ್ಬರು ಮಲಗಲು ಹೋದರು.

ಪ್ರಣತಿ ಅಂತೂ ಮೇಲೆ ಮಹಡಿಗೆ ಹೋಗುವ ಬಗ್ಗೆ ಯೋಚಿಸಿ ಹೇಗೋ ಪ್ರಸಾದ್ ಮಲಗಿದ ನಂತರ ಕೀ ಹುಡುಕಿ ಕಳ್ಳ ಹೆಜ್ಜೆಗಳನ್ನಿಡುತ್ತ ಮೇಲಿನ ಮಹಡಿಗೆ ಬಂದಳು ಕೀ ತೆಗೆದು ಒಳಗೆ ಹೋದಳು.


ಇಲ್ಲೇಕೆ ಸ್ವಚ್ಛ ಮಾಡಿಲ್ಲ ಎಂದುಕೊಂಡಳು ನಾಳೆ ಪ್ರಸಾದ್ ಆಫೀಸಿಗೆ ಹೋದ ಮೇಲೆ ನಾನೆ ಇದನ್ನೆಲ್ಲ ಕ್ಲೀನ್ ಮಾಡಬೇಕು ಎಂದೇಳಿ
ಬಾಲ್ಕನಿಯಿಂದೊಮ್ಮೆ ಇಣುಕಿ
ಹೋಗುವ ಮೊದಲು ಅವಳಿಗೊಂದು ಪುಸ್ತಕ ಕಂಡಿತು.


ಸಮಯ ಕಳೆಯಲು ಓದೋಣ ಎಂದು ಜೊತೆಯಲ್ಲಿ ಪುಸ್ತಕ ಹಿಡಿದು ಅಲ್ಲಿಂದ ಹೊರಬಿದ್ದಳು.

ಕೀ ಅನ್ನು ಇದ್ದ ಸ್ಥಳದಲ್ಲಿಯೇ ಇಟ್ಟು ಮಲಗಿದಳು.

ಮರುದಿನ ಪ್ರಸಾದ್ ತಿಂಡಿ ಮುಗಿಸಿ ಪ್ರಣತಿಗೆ ಹೇಳಿ ಆಫಿಸ್ ಕಡೆ ಹೊರಟ
ಈಗ ಆ ದೊಡ್ಡ ಬಂಗಲೆಯಲ್ಲಿ ಅವಳೊಬ್ಬಳೆ
ಆದರೆ ಅವಳಿಗೆ ಭಯವಿಲ್ಲ ಈ ದೆವ್ವ ಗಳನ್ನೆಲ್ಲ ಅವಳು ನಂಬೋದೇ ಇಲ್ಲ.


ಪ್ರಸಾದ್ ಹೋದ ಮೇಲೆ ಸಮಯ ಕಳೆಯಲು ರೂಮ್ ಕ್ಲೀನ್ ಮಾಡಲೆಂದು ಮಹಡಿಗೆ ಹೋಗುವಳು.

ಹಳೆಯ ಫೋಟೋಗಳು ಇದ್ದವು ಅದನ್ನೆಲ್ಲ ಏನು ಮಾಡೋದೆಂದು ಯೋಚಿಸುತ್ತ ಹಾಗೆ ಒಂದು ಚೀಲದಲ್ಲಿ ತುಂಬಿಸಿ ಇಟ್ಟಳು.

ಒಂದು ಕೊಣೆ ಕ್ಲೀನ್ ಮಾಡುವಷ್ಟರಲ್ಲಿ ಅವಳಿಗೂ ಸಾಕಾಯಿತು.
ಕೆಳಗೆ ಬಂದು ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇದ್ದಳು ಆಗವಳಿಗೆ ನೆನ್ನೆಯ ಪುಸ್ತಕ ನೆನಪಿಗೆ ಬಂದು ಅದನ್ನು ಓದಲು ಕುಳಿತಳು.

ಪುಸ್ತಕದ ಮೊದಲ ಪುಟ ತಿರುವಿದಳು ಅದೊಂದು ಕೈ ಬರಹದ ಪುಸ್ತಕವಾಗಿತ್ತು.
ಮೊದಲ ಪುಟದಲ್ಲಿ ಅದೇ ಮನೆಯ ಚಿತ್ರವೊಂದಿತ್ತು.
ಆಶ್ಚರ್ಯದಲ್ಲೇ ಓದಲು ಕುಳಿತಳು.


ನಾನು  ಅಮೋಘ ಈ ಮನೆಯ ಸೊಸೆಯಾಗಿ ಕಾಲಿಟ್ಟೆ ಮೊದಮೊದಲು ಎಲ್ಲ ಸರಿಯಾಗಿಯೇ ಇತ್ತು ಸುಮಾರು ಒಂದು ವರ್ಷಗಳವರೆಗೂ ನಾನು ನನ್ನ ಗಂಡ ಅನ್ಯೋನದಿಂದ ಇದ್ದೆವು.
ಅದೊಂದು ದಿನ ಈ ಮನೆಯ ಮೇಲೆ ಯಾರಿಗೆ ದ್ವೇಷವಿತ್ತೋ ಏನೋ ದುಷ್ಟರು ಸೇರಿ ನನ್ನ ಅತ್ತೆ ಮಾವನನ್ನು ಜೀವ ಸಹಿತ ಕೊಂದುಬಿಟ್ಟರು ಅನಾಥೆಯಾಗಿದ್ದ ನನಗೆ ತಂದೆ ತಾಯಿ ಪ್ರೀತಿ ನೀಡಿದ ಅವರಿಬ್ಬರೂ ಇಲ್ಲವಾದರೂ ಅವರು ಸತ್ತಿದ್ದು ಅಮಾವಾಸ್ಯೆಯ ರಾತ್ರಿ ಅಂದಿನಿಂದ ಈ ಮನೆಯಲ್ಲಿ ನೆಮ್ಮದಿ ಇಲ್ಲವಾಗಿ ಹೋಯಿತು.

ದಿನಾಂಕ-**-**-**** ಇಂದು ನಾವಿಬ್ಬರು ಈ ಮನೆ ಬಿಟ್ಟು ಹೋಗುತಿದ್ದೇವೆ.

ಇದಿಷ್ಟು ಬರೆದಿತ್ತು.

ಅವರು ಮನೆಬಿಟ್ಟು ಹೋದ ದಿನವೂ ಅಮಾವಾಸ್ಯ ರಾತ್ರಿ ಅದೇ ದಿನ ಯಾಕೆ ಹೋಗಿರಬಹುದು.
ಬಹುಷಃ ಮಹಡಿಯಲ್ಲಿದ್ದ ಫೋಟೋ ಅವರದ್ದೇ ಇರಬೇಕು ಎಂದುಕೊಂಡಳು.
ಅದೇ ಯೋಚನೆಯಲ್ಲಿದ್ದವಳಿಗೆ ಬಾಗಿಲು ಬಡಿಯುವ ಸದ್ದು ಕೇಳಿತು.
ಒಮ್ಮೆಲೇ ಬೆಚ್ಚಿದಳು ಈಗಷ್ಟೇ ಕತೆ ಓದಿದಳಲ್ಲ

ಯಾರು..... ಒಳಗಿನಿಂದ ಕೂಗಿದಳು.
.........................?
ಮತ್ತೆ ಬಾಗಿಲು ಬಡಿಯುವ ಸದ್ದು
☠️☠️☠️☠️
ಮೋಡ ಕವಿದ ವಾತಾವರಣ
ಮದ್ಯಾಹ್ನದ ಹೊತ್ತಲ್ಲೂ ಕತ್ತಲಾವರಿಸಿತು
ಅವಳು ಓದಿದ ದೆವ್ವದ ಕಥೆಗಳೆಲ್ಲವೂ ತಲೆಯಲ್ಲಿ ಓಡಾಡುತಿದ್ದವು.


ಭಯದಲ್ಲೇ ಬಾಗಿಲ ಬಳಿ ಬಂದು ಬಾಗಿಲು ತೆರೆದಳು
☠️.......
ಉಹೂ ಯಾರಿರಲಿಲ್ಲ
ಒಮ್ಮೆ ಭ್ರಮೆಇರಬೇಕು ಎಂದುಕೊಂಡಳು.
ಬಾಗಿಲು ಹಾಕಿ ತಿರುಗಿದಳಷ್ಟೇ ಮತ್ತೆ ಬಡಿಯುವ ಸದ್ದು

ಬಾಗಿಲು ತೆರೆಯಲು ಧೈರ್ಯ ಸಾಲದೇ ರೂಮಿಗೆ ಬಂದು ಪ್ರಸಾದನಿಗೆ ಕರೆ ಹಚ್ಚಿದಳು. ಕಾಲ್ ಕನೆಕ್ಟ್ ಆಗುತ್ತಿರಲಿಲ್ಲ.
ಅಷ್ಟರಲ್ಲಿ ಶಬ್ದವು ನಿಂತಿತು.


ಭಯದಲ್ಲಿ ಬೆವರಿ ಹೋಗಿದ್ದಳು.
ಸುಸ್ತಿಗೆ ಹಾಗೆ ನಿದ್ದೆಗೆ ಜಾರಿದಳು, ಮತ್ತೆ ಎಚ್ಚರವಾಗಿದ್ದು ಫೋನ್ ರಿಂಗಿಗೆ.
ಪ್ರಸಾದ್ ಕಾಲ್ ಮಾಡಿದ್ದ  "ಯಾಕೆ ಡೋರ್ ಓಪನ್ ಮಾಡು ಎಲ್ಲೋಗಿದ್ದೀಯ "

"ಹ ಬಂದೆ "ಎಂದು ಕರೆ ತುಂಡರಿಸಿದೆ ಸುಮಾರು ಹತ್ತು ಮಿಸ್ ಕಾಲ್ ಬಂದಿದ್ದವು.

ಬಾಗಿಲು ತೆಗೆದಾಗ ಪ್ರಸಾದ್ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದ.
ಮಲಗಿದ್ದೆ ಅನ್ನುವ ಉತ್ತರ ಕೊಟ್ಟೆ.
ಅಷ್ಟರಲ್ಲಿ ಕಣ್ಣು ಕತ್ತಲೆಯಾಗಿ ಅಲ್ಲೇ ಬೀಳುವಂತೆ ಆದೆ.

ಮದ್ಯಾಹ್ನ ಊಟ ಮಾಡದಿದ್ದರಿಂದ ಉಪವಾಸಕ್ಕೆ ಹೀಗಾಗಿತ್ತು.
ಪ್ರಸಾದ್ ನಿಂದ ಒಂದಷ್ಟು ಬೈಗಳು ತಿಂದು ಅವನು ನನಗಾಗಿ ತಂದಿದ್ದ ಪಾನಿಪುರಿಯನ್ನು ಹೊಟ್ಟೆಗಿಳಿಸಿದೆ.

ಹೊಟ್ಟೆ ತುಂಬಿದ ಮೇಲೆ ಮದ್ಯಾಹ್ನ ನಡೆದ ಘಟನೆ ಪ್ರಸಾದ್ ನಿಗೂ ಹೇಳಿದಾಗ ಹೊಟ್ಟೆ ಹುಣ್ಣಗುವಂತೆ ನಕ್ಕಿದ.


ಮತ್ತೆಂದೂ ಅವನ ಬಳಿ ಆ ವಿಷಯ ಮಾತಾಡಲಿಲ್ಲ ಆದರೂ ಮನದ ಮೂಲೆಯಲ್ಲಿ ಒಂದು ರೀತಿಯ ಭಯವಿತ್ತು.


ರಾತ್ರಿ ಅನ್ನ ಸಾಂಬಾರ್ ಮಾಡಿದ್ದೆ.
ಅದರಲ್ಲೇ ಊಟ ಮುಗಿಸಿ ಪ್ರಸಾದ್ ಸುಸ್ತು ಎಂದು ಬೇಗ ಮಲಗಿದ
ನಾನು ಅಡುಗೆ ಮನೆ ಕ್ಲೀನ್ ಮಾಡಿ ಹಾಲು ಬಿಸಿ ಮಾಡಿ ಕುಡಿದು ಮಲಗಲು ಹೋದೆ


ಸಮಯ ಹನ್ನೆರಡು ಐದು ಆಗಿತ್ತು.....
ಮಲಗಿದ್ದ ನನಗೆ ಕನಸಿನಲ್ಲಿ ಆ ಫೋಟೋಗಳು ಕಾಣಿಸಿತು.
ಒಮ್ಮೆಲೇ ಎದ್ದು ಕುಳಿತೆ ನೀರಿಗಾಗಿ ಹುಡುಕಿದಾಗ ನೀರು ಇಟ್ಟಿಲ್ಲ ಎನ್ನುವುದು ನೆನಪಾಗಿ ನೀರಿಗಾಗಿ ಅಡುಗೆ ಮನೆ ಕಡೆ ಹೋದೆ.

ಹೊರಗೆ ಮಳೆ ಸುರಿಯುತ್ತಿತ್ತು
ಜೀರುಂಡೆಗಳ ಸದ್ದು,ಎಲ್ಲೊ ಮೂಲೆಯಲ್ಲಿ ವಿಚಿತ್ರ ಸದ್ದು ಕೇಳುತಿತ್ತು.

ನೀರು ಕುಡಿದ ನಂತರ ನನಗರಿವಿಲ್ಲದೆ ನನ್ನ ಕಾಲುಗಳು ಮೇಲಿನ ಮಹಡಿಯತ್ತ ಹೆಜ್ಜೆ ಹಾಕಿದವು.

ನನ್ನ ಹಿಂದಿನಿಂದ ಯಾರೋ ಬಂದಂತೆ
ಭಾಸವಾಗತೊಡಗಿತು.

ಮೆಟ್ಟಿಲು ಹತ್ತುವ ಹೆಜ್ಜೆಯೂ ಪ್ರತಿಧ್ವನಿಸುತಿತ್ತು.
ನಿದಾನವಾಗಿ ಆ ಕೊಣೆಯ ಕಡೆ ಹೆಜ್ಜೆ ಹಾಕಿದೆ
ನನ್ನ ಹಿಂದೆ ಯಾವುದೋ ವ್ಯಕ್ತಿ ನಿಂತಂತೆ ನನ್ನೆದುರು ನೆರಳು ಕಾಣಿಸಿತು.

ಮೆಲ್ಲಗೆ ಹಿಂದೆ ತಿರುಗಿದೆ
ಕೆದರಿದ ಕೂದಲು ಅಟ್ಟಹಾಸದ ನಗುತ್ತ ನನ್ನೆದುರು ಪ್ರೇತವೊಂದು ನಿಂತಿತ್ತು.

ಕಿರುಚಲು ದ್ವನಿ, ಒಡಳು ಕಾಲುಗಳು ಸಹಕರಿಸುತ್ತಿಲ್ಲ
ಅಲ್ಲೇ ಕುಸಿದು ಬಿದ್ದೆ

"ಯಾರ್  ಯಾರ್ ನೀ...ನು ನನಗೆ ಯಾಕೆ ತೊಂದರೆ ಕೊಡುತಿದ್ದೀಯಾ..."  ಭಯದಲ್ಲಿ ತೊದಲಿದೆ.

"ನಾನು ನಿನಗೇನೂ ಮಾಡುವುದಿಲ್ಲ ಆದರೆ ನೀನು ನಿನ್ನ ಗಂಡ ಇಂದೇ ಈ ಮನೆ ಬಿಟ್ಟು ಹೋಗಿ ಇಲ್ಲ ಅಂದ್ರೆ ನಿಮಗೆ ಉಳಿಗಾಲ ಇಲ್ಲ " ಗಡಸು ಧ್ವನಿ ಯಲ್ಲೇ ಹೇಳಿತು.

"ಯಾಕೆ...."


"ಯಾಕೆ ಅಂದರೆ ಈ ಮನೆ ನನ್ನದು "

ಇಂದಿಗೆ ನನ್ನನ್ನು ನನ್ನ ಗಂಡನನ್ನು ಇಲ್ಲೇ ಬರ್ಬರವಾಗಿ ಕೊಂದು  ಸುಮಾರು ವರ್ಷಗಳಾಯಿತು.
ಅಲ್ಲಿಂದ ಶುರುವಾಗಿ ಇಲ್ಲಿಗೆ ಬಂದ ಜೋಡಿಗಳನ್ನು ಕೊಂದು ಆಮೇಲೆ ಅದನ್ನೆಲ್ಲ ಪ್ರೇತಗಳು ಕೊಂದಿದೆ ಎಂದು ವದಂತಿ ಹಬ್ಬಿಸುತ್ತಾರೆ.

"ನೀವೇಕೆ ಇದನ್ನೆಲ್ಲ ತಡೆಯಲಿಲ್ಲ"
ಕುತೂಹಲದಿಂದ ಪ್ರಶ್ನಿಸಿದೆ.

"ಯಾಕೆಂದ್ರೆ ಇದುವರೆಗೂ ನಾನು ಬಂಧನದಲ್ಲಿದ್ದೇ"


"ಅಂದ್ರೆ ಈಗ "

"ಈಗ ನಿನ್ನಿಂದ ಬಂಧ ಮುಕ್ತವಾಗಿದೆ. "

ನೀನು ಯಾವಾಗ ನಮ್ಮ ಫೋಟೋಗಳನ್ನು ತೆಗೆದೆಯೋ ಅಲ್ಲಿ ನಮ್ಮ ಆತ್ಮಗಳನ್ನು ಬಂಧಿಸಿ ಇಟ್ಟಿದ್ದರು ಇದುವರೆಗೂ ಯಾರು ಆ ಕೋಣೆಯೊಳಗೆ ಬಂದಿರಲಿಲ್ಲ ನೀನು ಬಂದು ನನಗೆ ಮುಕ್ತಿಯಾಯಿತು.
ಹಾಗೆ ನೆನಪಿರಲಿ ಇಂದು ಬೆಳಗ್ಗೆಯಾಗುವ ಮೊದಲು ಇಲ್ಲಿಂದ ಹೊರಟೋಗಿ ಇಲ್ಲಾಂದ್ರೆ ನಿಮಗೂ ಉಳಿಗಾಲ ಇಲ್ಲ'


"ನಿನಗೆ ಮದ್ಯಾಹ್ನ ಬಂದು ಬೆದರಿಸಿ ಹೋಗಿದ್ದಾರೆ ಅದು ಅವರೆ ರಾಕ್ಷಸರು.
ನನ್ನ ನೋಡಿದ ವಿಷಯ ಯಾರಿಗೂ ತಿಳಿಸಬೇಡ ನಿನ್ನ ಗಂಡನಿಗೂ ಕೂಡ ಅವರಿಗೆ ಗೊತ್ತಾದರೆ ಮತೊಮ್ಮೆ ಬಂಧಿಸುತ್ತಾರೆ ಅವರು ಇಲ್ಲೇ ಎಲ್ಲೊ ಮೂಲೆಯಲ್ಲಿ ಜನ ಬಿಟ್ಟಿರಲುಬಹುದು ಹುಷಾರ್ ಆಗಿರು. "


ಇಷ್ಟು ಹೇಳಿದ ಆತ್ಮ ಅಲ್ಲಿಂದ ಅದೃಶ್ಯವಾಯಿತು.


ಭಾರವಾದ ಮನಸ್ಸಿನಿಂದ ಅಲ್ಲಿಂದ ಬಂದು ಸಮಯ ನೋಡಿದೆ ಮೂರರ ಸಮೀಪ ಇತ್ತು ನನಗಂತೂ ತಲೆ ಓಡುತ್ತಿಲ್ಲ ಪ್ರಸಾದ್ ಗೆ ವಿಷಯ ತಿಳಿಸುವಂತೆಯೂ ಇಲ್ಲ
ಹೋಗೋಣ ಎಂದರೆ ಕಾರಣ ಇಲ್ಲ ಅದೇ ಯೋಚನೆ ಮಾಡುತ್ತ ನಿದ್ದೆಗೆ ಶರಣಾದೆ.

ಬೆಳಗ್ಗೆ 6ಗಂಟೆಯ ಹೊತ್ತಿಗೆ ಎಚ್ಚರಗೊಂಡೆ ನನ್ನ ದಡ್ಡತನಕ್ಕೆ ನನಗೆ ಕೋಪ ಬಂತು ಪ್ರಸಾದ್ ನನ್ನು ಎಬ್ಬಿಸಿ 'ಇಲ್ಲಿಂದ ಹೊರಡೋಣ ಎಂದೆ '

'ಯಾಕೆ ಏನಾಗಿದೆ ಈ ಮನೆಗೆ '

'ಅದು ಈ ಮನೆ ಸರಿ ಇಲ್ಲ ಪ್ಲೀಸ್ ಪ್ರಸಾದ್ ನನ್ನ ಮಾತು ಕೇಳು ಇಲ್ಲಿಂದ ಹೊರಡೋಣ ಅಷ್ಟೇ ನಾನಂತು ಈ ಮನೇಲಿ ಇರೋಲ್ಲ '

ಹೇಗೋ ಅವನನ್ನು ಒಪ್ಪಿಸಿ ಬಟ್ಟೆ ಪ್ಯಾಕ್ ಮಾಡತೊಡಗಿದೆ.

ಮನೆಗೆ ಬೀಗ ಹಾಕಿ ಲಗೇಜ್ ಕಾರಿನಲ್ಲಿ ಇಟ್ಟು ಕುಳಿತುಕೊಂಡೆ ಪ್ರಸಾದ್ ಕೂಡ ಬಂದು ಕಾರ್ ಸ್ಟಾರ್ಟ್ ಮಾಡಿದಾಗ ಕಾರ್ ಪಂಚರ್ ಆಗಿತ್ತು.

ಇದೆಲ್ಲ ಆ ರಾಕ್ಷಸರು ಮಾಡಿರಬೇಕು ಎಂದುಕೊಂಡೆ
ಅಷ್ಟರಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಕೈಯಲ್ಲಿ ಮಚ್ಚು ಹಿಡಿದುಕೊಂಡು ನಮ್ಮ ಕಡೆಗೆ ಬಂದರು

ಪ್ರಸಾದ್ ಗು ಗಾಬರಿಯಾಯಿತು.
ಏನು ಮಾಡಲಾರದ ಅಸಹಾಯಕ ಪರಿಸ್ಥಿತಿ ಎದುರಾಗಿತ್ತು. ಅವರು ಬಂದವರೇ ಕಾರಿನ ಮುಂಭಾಗಕ್ಕೆ ಹೊಡೆದರು ಗ್ಲಾಸ್ ಚೂರಾಗಿ ಅಲ್ಪ ಸ್ವಲ್ಪ ಗಾಯವಾಯಿತು.
ನಮ್ಮಿಬ್ಬರನ್ನು ಕಾರಿನಿಂದ ಎಳೆದರು.


ಇಂದೇ ನಮ್ಮ ಕೊನೆಯ ದಿನ ಎನ್ನುವಂತೆ ಭಾಸವಾಯಿತು.
ದೇವರನ್ನು ಸ್ಮರಿಸಿದೆ.

ನನ್ನ ಕುತ್ತಿಗೆಯನ್ನು ಹಿಸುಕಿದರು ಒಮ್ಮೆಗೆ ನೆನ್ನೆಯ ಆತ್ಮ ನೆನಪಾಗಿ ಅಮ್ಮ ಎಂದು ಕಿರುಚಿದೆ.
ಮುಂದೆ ಎಲ್ಲವೂ ಏನು ನೆನಪಾಗಲಿಲ್ಲ ಕಣ್ತೆರೆದಾಗ ಹಾಸ್ಪಿಟಲಿನಲ್ಲಿದ್ದೆ.
ನನ್ನ ಪಕ್ಕ ಪ್ರಸಾದ್ ಕುಳಿತಿದ್ದರು.
"ಏನಾಯ್ತು "  ಕೇಳಿದೆ.





ನಾನು ಕಿರುಚಿದಾಗ ನನ್ನ ಕೂಗಿಗೆ ಆ ಆತ್ಮ ಬಂದಿತ್ತು.

ಕೂಡಲೇ ನನ್ನ ಕುತ್ತಿಗೆ ಹಿಡಿದವನು ಆ ಆತ್ಮದ ಕೈಲಿದ್ದ ಕ್ಷಣ ಮಾತ್ರದಲ್ಲಿ ಅವನನ್ನು ಕೊಂದು ಬಿಟ್ಟಿತು.

ಅಲ್ಲಿದ್ದ ಎಲ್ಲರೂ ನರಳಿ ನರಳಿ ಕೊನೆ ಉಸಿರು ಎಳೆದಿದ್ದರು ಅವರ ದೇಹವು ಮಣ್ಣಾಗಿ ಹೋಗಿತ್ತು

ಈ ದೃಶ್ಯ ನೋಡಲಾಗದೆ ಪ್ರಸಾದ್ ಕೂಡ ಪ್ರಜ್ಞೆ ತಪ್ಪಿದ್ದರು ಎಚ್ಚರವಾದಾಗ ನಾವಿಬ್ಬರು ಹಾಸ್ಪಿಟಲ್ ನಲ್ಲಿದ್ದೆವು ಆದರೆ ಕರೆದುಕೊಂಡು ಬಂದವರು ಯಾರು ಎಂದಾಗ ಪ್ರಸಾದ್ ಗು ಅಚ್ಚರಿ

ಕೂಡಲೇ ಅಲ್ಲಿಂದ ಎದ್ದು ಹೊರಬಂದೆ.
ನಾನು ನೆನ್ನೆ ನೋಡಿದ ಆ ಆತ್ಮವು ನಮ್ಮನ್ನು ಬದುಕಿ ಉಳಿಸಿದ್ದು ಕ್ಷಣಮಾತ್ರದಲ್ಲಿ ಆ ಆತ್ಮ ಅದೃಶ್ಯವಾಯಿತು
ನಂಬಲಾಗದ ಒಂದು ಘಟನೆ ಎದುರಗಿತ್ತು.


ಮತ್ತೆ ನಾವು ಅದೇ ಮನೆಯಲ್ಲಿ ಮೂರು ವರುಷಗಳಿಂದ ವಾಸಿಸುತಿದ್ದೇವೆ ಇದುವರೆಗೂ ಯಾವುದೇ ತೊಂದರೆ ಎದುರಾಗಿಲ್ಲ

ನನ್ನ ಎರಡು ವರ್ಷದ ಮಗಳು ಮಡಿಲಲ್ಲಿದ್ದಾಳೆ.
ನಮ್ಮ ಸುತ್ತಮುತ್ತಲು ಹಲವರು ಮನೆ ಮಾಡಿಕೊಂಡಿದ್ದಾರೆ.

ಆ ಆತ್ಮವು ನಮ್ಮ ರಕ್ಷಣೆಗಿದೆ!!
    

Vidyashree ಅವರಿಂದ ಇನ್ನಷ್ಟು ಪುಸ್ತಕಗಳು

ಪುಸ್ತಕವನ್ನು ಓದಿ