shabd-logo

ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು

27 June 2023

0 ವೀಕ್ಷಿಸಲಾಗಿದೆ 0

 ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು 

  

ಯುನಿವರ್ಸಿಟಿಯ ಆ ದಿನಗಳು 

ಒಂದಾನೊಂದು ಕಾಲದಲ್ಲಿ ತತ್ವಶಾಸ್ತ್ರವನ್ನು ಓದುವುದು ಒಂದು ಪ್ರತಿಷ್ಟೆಯ ವಿಷಯವೆಂದು ಭಾವಿಸಲಾಗಿತ್ತು ದಿನಗಳು ಉರುಳಿದಂತೇ ಜೀವನ ನಿರ್ವಹಣೆಗೆ ಉಪಯೋಗವಾಗದ ವಿಷಯಗಳನ್ನು ಓದುವುದು ವೇಸ್ಟ್ ಎಂಬಂತೆ ಜನಾಭಿಪ್ರಾಯಗಳು ಬದಲಾದವು .. 

ಆದರೂ ಸಹಾ ವ್ಯಾಸಂಗವು ಜೀವನ ನಿರ್ವಹಣೆಗಲ್ಲಾ ಜ್ಣಾನಾರ್ಜನೆಗೆ ಎಂಬ ಮನೋಭಾವಹೊಂದಿರುವವರುಈಗಲೂ ಸಹಾ ತಾವು ಇಷ್ಟಪಟ್ಟ ವಿಷಯವನ್ನೇ ಮನ ತಣಿಸುವವರೆಗೂ ಓದುವಂತಹಾ ಅಥವಾ ವ್ಯಾಸಂಗ ಮಾಡುವಂತಹಾ ಮನೋದೋರಣೆಯನ್ನು ಉಳಿಸಿಕೊಂಡಿದ್ದಾರೆ ಹಾಗೂ ಅಲ್ಲಿನ ತರ್ಖ ಹಾಗು ಸಿದ್ದಾಂತಗಳಿಂದ ಆಕರ್ಷಿತರಾಗಿರುವವರೂ ಇದ್ದಾರೆ 

ವಿಶ್ವವಿಧ್ಯಾಲಯಗಳಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ವಿದ್ಯಾರ್ಥಿಗಳಲ್ಲಿ ಈತರಹದ ಮನೋಧೋರಣೆ ಹೊಂದಿರುವವರನ್ನು ಕಾಣಬಹುದು..... 

ಉಧ್ಯಮಿಗಳ ಮಕ್ಕಳು.ಉನ್ನತ ದರ್ಜೆಯಲ್ಲಿರುವ ಅಧಿಕಾರಿಗಳ ಮಕ್ಕಳು.ಹೆಸರಾಂತ ಸೆಲಬ್ರೆಟಿಗಳು ಹಾಗೂ ಅವರ ಮಕ್ಕಳಗಳಲ್ಲಿ ಕೆಲವರೂ ಮತ್ತು 

ಉದ್ದೇಶ ಪೂರ್ವಕವಾಗಿ ಮನಃಶಾಂತಿಯನ್ನು ಬಯಸುವವರು ತತ್ವಶಾಸ್ತ್ರದ ಬಗೆಗಿನ ಆಸಕ್ತಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ..ಅಷ್ಟೇ ಏಕೇ ಬೇರೊಂದು ವಿಷಯವನ್ನು ಓದಿ ಅದರಿಂದ ಉಧ್ಯೋಗ ಪಡೆದು ನಂತರ ತಮ್ಮ ಆಸಕ್ತಿಯನ್ನು ತಣಿಸಿಕೊಳ್ಳಲು ತತ್ವಶಾಸ್ತ್ರದಿಂದ ಸೆಳೆಯಲ್ಪಟ್ಟಿದ್ದಾರೆ.. 

ವಿಶ್ವವಿಧ್ಯಾಲಯದಲ್ಲಿ ಓದುತ್ತಿದ್ದಾಗ ತತ್ವಶಾಸ್ತ್ರವಿಭಾಗದಲ್ಲಿ ಓದುತ್ತಿದ್ದ ಒಬ್ಬನ ಪರಿಚಯವಾಯಿತು.. ಅವನ ಹೆಸರು ಸದಾನಂದ 

ಅವನಾದರೂ ಒಬ್ಬ ದೊಡ್ಡ ಉಧ್ಯಮಿಯ ಮಗ ಆದರೂ ಸಹಾ ಸರಳತೆ ಮತ್ತು ಸಜ್ಜನಿಕೆಗಳನ್ನು ಮೈಗೂಡಿಸಿಕೊಂಡಿದ್ದ ಅವನು ವ್ಯಾಸಂಗಮಾಡಿ ಜೀವನೋಪಾಯಕ್ಕೆ ಕೆಲಸ ಹುಡುಕುವ ಅಥವಾ ಬೇರಾವುದೇ ಕೆಲಸಕ್ಕೆ ಹೋಗುವ ಅಗತ್ಯವು ಅವನಿಗಿರಲಿಲ್ಲ, 

ಅವನು ಮೊದಲಿನಿಂದಲೂ ಪ್ರತಿಷ್ಟಿತ ಸ್ಕೂಲ್ ಗಳಲ್ಲೇ ಓದಿಕೊಂಡು ಬಂದಿದ್ದವನು ಓದಿನಲ್ಲೂ ಅಷ್ಟೇ ಮೊದಲಶ್ರೇಣಿಯೂ ಅವನೀಗೆ ಮೀಸಲೆಂಬಂತೆ ..ಪಡೆಯುತ್ತಿದ್ದ.. 

ಹೀಗೆ ಪರಿಚಿತನಾದ ಸದಾನಂದ ದಿನಕಳೆದಂತೆ ನಮಗೇ ಒಬ್ಬ ಆತ್ಮೀಯ ಸ್ನೇಹಿತನಾದ ಜಗಧ್ವಿಖ್ಯಾತ ತತ್ವಶಾಸ್ತ್ರಜ್ಣರ ವಿಚಾರ ಲಹರಿಗಳನ್ನು ತುಂಬಾ ಸೊಗಸಾಗಿ ನಮ್ಮೊಡನೇ ವಿವರಿಸುತ್ತಿದ್ದ.. 

  

ಜೀವನದ ಗುರಿ.ಸೃಷ್ಟಿಯ ಉದ್ದೇಶ.ದೇವರು.ಆತ್ಮ.ಪರಮಾತ್ಮ.ಮುಂತಾದ ವಿಷಯಗಳ ಬಗ್ಗೆ ಅತ್ಯಂತ ವೈಜ್ಣಾನಿಕವಾಗಿ .ವಿವರಿಸುತ್ತಾ ನಮ್ಮಗಳ ತಲೆ ಕೊರೆಯುತ್ತಿದ್ದ..ಆಕ್ಚೂಲಿ ಅವನು ಹೇಳುವ ವಿಷವನ್ನು ಕೇಳುವಷ್ಟು ಸಹನೆ ತಾಳ್ಮೆಗಳು ನಮಗಿರಲಿಲ್ಲ . 

ಏಕೆಂದರೇ ನಮ್ಮದೇ ಆದಂತಹಾ ಸಮಸ್ಯೆಗಳು .ಓದಿನ ಹಾಗೂ ಅಭ್ಯಾಸ ಮಾಡುವ ಕೆಲಸ. ಅಸೈಮೆಂಟ್ ಗಳೂ..ಪ್ರಾಜೆಕ್ಟ್ ಕೆಲಸಗಳು ..ಹೀಗೇ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿರಬೇಕಿತ್ತು.. ಆದರೂ ಕೂಡ ಸದಾನಂದನ ಬಗ್ಗೆ ನಮಗೇ ದೊಡ್ಡ ಗೌರವವಿತ್ತು ..ಅವನಂತಹಾ ಉದ್ಯಮಿಗಳ ಮಕ್ಕಳು ಇಂದು ಮಾದಕ ವ್ಯಸನಿಗಳಾಗಿದ್ದಾರೆ. 

ಹಲವಾರೂ ದುರಭ್ಯಾಸಗಳನ್ನು ಮೈಗೂಡಿಸಿಕೊಂಡು ಕ್ಯಾಂಪಸ್ ತುಂಬಾ ದಾಂಧಲೆ ಮಾಡುತ್ತಿದ್ದಾರೆ .. ಇವನು ಅವರೆಲ್ಲರಿಗಿಂತ ಹೆಚ್ಚಿನ ಶೋಕಿ ಮಾಡಬಹುದಾಗಿತ್ತು .ಆದರೇ ಇವನ ಮನಸ್ಸು .ಜಗತ್ತಿನ .ಸೃಷ್ಟಿಯ ಸತ್ಯವನ್ನು ತಿಳಿಯುವತ್ತ ವಾಲಿದೆ ... 

ಹೌದೂ ..ವಿಚಾರಗಳು ಯಾರೊಬ್ಬರ ಸ್ವತ್ತಲ್ಲ .ಯಾರಲ್ಲಿ ಹೇಗೇ ¨ಬೇಕಾದರೂ ಅವುಗಳು ವ್ಯಕ್ತವಾಗಬಹುದು ಹಾಗೂ ಯಾರನ್ನಾದರೂ ಹೇಗೆ ಬೇಕಾದರೂ ಆಕರ್ಷಿಸಬಹುದು…ಹೀಗಾಗೀ ಅವನು ವ್ಯಾಸಂಗದ ಕೊನೆಯವರೆಗೂ ಒಳ್ಳೆಯಸ್ನೇಹಿತನಾಗಿಯೇ ಉಳಿದುಕೊಂಡ.. ವಿಶ್ವವಿದ್ಯಾಲಯದಲ್ಲಿನ ಎರಡು ವರ್ಷಗಳ ವ್ಯಾಸಂಗವು ಮುಗಿದ . 

ನಂತರ ನಮ್ಮ ನಮ್ಮ ಮನೆಗಳಿಗೆ ಮರಳಿದೆವು .. 

  

#ಮನೆ ಮಠ.ಸಂಸಾರ. 

ಜೀವನ ನಿರ್ವಹಣೆಗೊಂದು ಕೆಲಸ ..ಮದುವೆ.ಹೆಂಡತಿ,ಮಕ್ಕಳು.ಸಂಸಾರ.ಮನೆ ..ಹೀಗೇ .ಗಮನ ನೀಡಿದ್ದಾಯ್ತು. ಹೀಗೇ ಸುಮಾರು ಹತ್ತಾರು ವರ್ಷ ಕಳೆದವು 

  

  

  

#ನಮ್ಮ ಊರ ಹತ್ತಿರವೇ ನೆಡೆದ ಅಘೋರಿಗಳ ಶಿಭಿರ 

ಕಳೆದೆರಡು ವರ್ಷಗಳ ಹಿಂದೇ (ಈ ಲೇಖನವನ್ನು ಬರೆದಿರುವ ದಿನಾಂಕಕ್ಕೆ ಸರಿಹೊಂದುವಂತೆ) ಹಾಸನ ಜಿಲ್ಲೇ ಅರಸೀಕೆರೆ ತಾಲ್ಲೋಕಿನಲ್ಲಿ ಅಘೋರಿಗಳಿಂದಾ ಒಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು 

ಅದರ ಬಗ್ಗೆ ರಾಜ್ಯಮಟ್ಟದಲ್ಲಿ ದೊಡ್ಡ ಪ್ರಚಾರವನ್ನೂ ಮಾಡಲಾಗಿತ್ತು ಈ ವಿಶೇಷ ಕಾರ್ಯಕ್ರಮವನ್ನು ನೋಡಲು ಕುತೂಹಲದಿಂದಾ ಕೆಲವು ಸ್ನೇಹಿತರೊಂದಿಗೇ ಹೋಗಿದ್ದವು .. 

ಹೋಗುವ ದಾರಿಯಲ್ಲಿ ನಮ್ಮಗಳ ಕುತೂಹಲವನ್ನು ಹೆಚ್ಚಿಸುವ ಅಘೋರಿಗಳ ಭಯಾನಕ ಪೋಟೋಗಳ ಪ್ಲೆಕ್ಸ್ ಗಳು .ಬ್ಯಾನರ್ ಗಳು ನಮ್ಮನ್ನ ಆಕರ್ಷಿಸಿದ್ದವು ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರೂ ಅಘೋರಿಗಳನ್ನು ಕಂಡು 

ಅವರೆಲ್ಲಾ ಯಾರೂ ..? ಏತಕ್ಕಾಗಿ ಹೀಗೆ ಭೂದಿಬಡುಕ ಅಘೋರಿಗಳಾಗುತ್ತಾರೆ .? 

ಅವರ ಜೀವನ ಶೈಲಿ .ಹೇಗಿರುತ್ತದೆ..? . 

ಅವರಲ್ಲಿರುವ ವಿಶೇಷವಾದಂತಹಾ ಶಕ್ತಿಯಾದರೂ ಏನೆಂಬ ಹಲವು ಪ್ರಶ್ನೆಗಳು ಮನದಲ್ಲಿ ಕಾಡಿದವು..ಆದರೂ ಅವುಗಳಿಗೆಲ್ಲಾ ಸಮರ್ಪಕ ಉತ್ತರವನ್ನು ನೀಡುವಂತಹ ಪರಿಚಿತರೂ ಯಾರೂ ಇಲ್ಲದ್ದರಿಂದ ..ಸರಳವಾಗಿ ಲಭ್ಯವಿದ್ದ ಕೆಲವು ಪುಸ್ಥಕಗಳನ್ನು .ಓದಿ .ಸ್ವಲ್ಪ ವಿಷಯ ಮನನಮಾಡಿಕೊಳ್ಳಲಾಯ್ತು ..ನಂತರಾ ಮನದಾಳದಲ್ಲಿ ಹಾಗೆಯೇ ಮಡುಗಟ್ಟದ್ದ ಆಸೆಯನ್ನು ಯು ಟೂಬ್ ನಲ್ಲಿ ಅಘೋರಿಗಳಿಗೆ ಸಂಬಂದಿಸಿದ ಕೆಲವು ವಿಡಿಯೋಗಳನ್ನು ನೋಡಿ ಪೂರೈಸಿಕೊಳ್ಳ ಪ್ರಯತ್ನಿಸಿದೆ. ಆದರೇ ಇವೆಲ್ಲವುಗಳಿಂದ ಕುತೂಹಲ ಹೆಚ್ಚಾಯ್ತೇ ವಿನಃ ಕಡಿಮೆಯಾಗಲೇ ಇಲ್ಲ… 

  

#ಹದಿನೈದು ವರ್ಷಗಳ ನಂತರ 

ಸದಾನಂದನ. ಬೇಟಿ 

ಹೀಗಿರುವಾಗ ಕಳೆದ ವರ್ಷ ನೆಡೆದ ರಾಷ್ಟ್ರಮಟ್ಟದ ಮನೋವಿಜ್ಣಾನ ಸಮಾವೇಶಕ್ಕೆ ಹೋಗಿದ್ದಾಗ .. 

ಸಮಾವೇಶದಲ್ಲಿ ನೂರಾರು ಜನ .ವಿದ್ಯಾರ್ಥಿಳು .ಸಂಶೋಧಕರು.-ಮನೋವಿಜ್ಣಾನ.. ತತ್ವಶಾಸ್ತ್ರ.ಮಾನವಶಾಸ್ತ್ರ   .ಧರ್ಮಶಾಸ್ತ್ರ.ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದನೂರಾರು ಜನರು ಭಾಗವಹಿಸಿದ್ದರು- 

ಹೀಗೆ ಬಾಗವಹಿಸಿದ್ದ ಸಹೃದಯಿಗಳ ನಡುವೆ ಜೀನ್ಸ್ ಪ್ಯಾಂಟ್ .ಖಾದೀ ಜುಬ್ಬ ದರಿಸಿ ಉದ್ದವಾದ ತಲೆಕೂದಲು ಬಿಟ್ಟು ಹೆಗಲಿಗೊಂದು ಬ್ಯಾಗ್ ನೇತುಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ನೋಡಿದಾಗ ಇವರನೆಲ್ಲೋ ಹತ್ತಿರದಿಂದಲೇ ನೋಡಿದ್ದ ನೆನಪಿದೆಯಲ್ಲಾ ಅನಿಸಿತು ಗಮನವಿಟ್ಟು ನೋಡಿದರೆ .. 

ಅವನೇ ..ಅವನೇ ವಿಶ್ವವಿಧ್ಯಾಲಯದಲ್ಲಿನ ಸ್ನೇಹಿತ ಸದಾನಂದ …ಹಳೆಯ ಸ್ನೇಹಿತ ಸದಾನಂದನನ್ನು ಕಂಡು ಬಹಳ ಸಂತೋಷವಾಯ್ತು ಬರೋಬ್ಬರಿ ಹದಿನೈದು ವರ್ಷಗಳ ನಂತರ ಒಬ್ಬ ಸ್ನೇಹಿತ ಸಿಕ್ಕಿದಾಗ ಎಷ್ಟು ಪ್ರಶ್ನೆಗಳು .ಎಷ್ಟು ಮಾತುಗಳು .ಯಾವ ಮಾತುಗಳು ಹೇಗೆ ಬೆಳೆಯಬಹುದೆಂಬುದೂ ನಿಮಗೂ ಗೊತ್ತು 

ಅವನ ಮಾತುಗಳನ್ನು ಕೇಳಿ ಆಶ್ಚರ್ಯವಾಯ್ತು ಈಗಲೂ ಸಹಾ ಅವನು ಭಾರತೀಯ ತತ್ವಶಾಸ್ತ್ರದ ಬಗ್ಗೆ ಹಾಗೂ ..ಅತೀಂದ್ರೀಯ ಶಕ್ತಿಗಳ ಬಳಕೆಯ ಬಗ್ಗೆ ಅವನು ಆಸಕ್ತಿಯನ್ನು ಉಳಿಸಿಕೊಂಡೇ ಬಂದಿದ್ದಾ . 

ಅತೀಂದ್ರಿ ಶಕ್ತಿಗಳ ಅಸ್ಥಿತ್ವ.ಪವಾಡಗಳ ಹಿಂದಿರುವ ವಿಜ್ಣಾನ .ಹಠಯೋಗದ ಮಹತ್ವ ಮುಂತಾದವುಗಳ ಬಗ್ಗೆ ..ಒಂದೇ ಗಂಟೆಯಲ್ಲಿ ಸಾಕು ಸಾಕೆನುವಷ್ಟನ್ನು ವಿವರಿಸಿದ-ನಲವತ್ತು ವಸಂತಗಳನ್ನು ಕಳೆದಿದ್ದರೂ ಅವನಿನ್ನೂ ಅವಿವಾಹಿತನಾಗಿದ್ದ ಪುಸ್ತಕಗಳಿಂದ ಅವನ ಮನದ ಪ್ರಶ್ನೆಗಳಿಗೇ ಸಮರ್ಪಕ ಉತ್ತರಗಳು ದೊರೆಯದಿದ್ದಾಗ ಸಾದು ಸನ್ಯಾಸಿಗಳು .ಅಘೋರಿಗಳು.ಮಾಂತ್ರಿಕರು.ಮುಂತಾದವರೊಂದಿಗೇ ಕಾಲಕಳೆಯುತ್ತಾ ..ಹಿಮಾಲಯವನ್ನು ಸುತ್ತಿಬಂದಿದ್ದ. 

  

ಅವನ ಬಗ್ಗೆ ಹಲವಾರು ಅಘೋರಿಗಳು ಅತ್ಯತ್ತಮ ಭಾಂದವ್ಯವನ್ನು ಹೊಂದಿದ್ದರೂ ಆತ್ಮಭಲವನ್ನು ಕುರಿತಂತೇ ಹೆಚ್ಚಿನ ಜ್ಣಾನವನ್ನು ಅವನಿಗೆ ನೀಡಲು ..ತಮ್ಮ ಜೊತೆಯಲ್ಲಿ ಎಲ್ಲಾ ಚಟುವಟಿಕೆಗಳಿಗೂ ಕರೆದುಕೊಂಡು ಹೋಗುತ್ತಿದ್ದರೂ ಆತ್ಮಬಲದ ಹಿಂದಿನ ವಿಜ್ಣಾನವನ್ನು ಹುಡುಕುವುದೇ ನನ್ನ ಜೀವನದ ಧ್ಯೇಯವೆಂದು ಮನಸಾರೆ ಹೇಳಿಕೊಂಡ..ಅವನ ಮಾತುಗಳನ್ನು ಕೇಳಿ ನನಗೇ ಏನು ಹೇಳಬೇಕೆಂದು ತಿಳಿಯಲ್ಲಿಲ್ಲಾ..ಸಂತೋಷದ ವಿಷಯವೇನಂದರೇ ಸಾಮಾನ್ಯವಾಗಿ ಅವನು ಯಾರೊಂದಿಗೂ ಹೆಚ್ಚು ಮಾತುಗಳನ್ನು .ಅನಗತ್ಯವಾಗಿ ಆಡುತ್ತಿರಲಿಲ್ಲಾ ..ಅದೇಕೋ ಗೊತ್ತಿಲ್ಲ ನನ್ನ ಮೇಲೇ ಮೊದಲಿನಿಂದಲೂ ವಿಶೆಷವಾದಂತಹಾ ಒಲವಿತ್ತು.. 

ಅತ್ಯಂತ ವಯುಕ್ತಿಕವಾದಂತಹಾ ವಿಷಯಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದ.. 

ಹದಿನೈದು ವರ್ಷಗಳ ಬಳಿಕವೂ ನಾನು ಅದೇ ವಿಶ್ವಾಸ ನಂಬಿಕೆಯನ್ನು ಅವನಲ್ಲಿ ಕಂಡೇ ನನಗೂತುಂಬಾ ಹೆಮ್ಮೆಯೆನಿಸಿತು..ಹೌದೂ ಸ್ನೇಹವನ್ನು ಸುಧೀರ್ಘಕಾಲ ಉಳಿಸಿಕೊಳ್ಳುವುದು ತುಂಬಾ ಸುಲಭ … 

ನಾವು ಸ್ನೇಹಿತರಿಂದ ಏನನ್ನೂ ನಿರೀಕ್ಷಿಸಬಾರದೂ 

ಹಾಗೂ ಅವನ ಭಾವನೆಗಳನ್ನು ಗೌರವಿಸಬೇಕು .. 

ಹೇಗೆಂದರೇ ಸ್ನೇಹಿತನ ಭಾವನೆಗಳು ನಮ್ಮಲ್ಲಿ ಹೊಸ ಆಲೋಚನೆಗಳನ್ನ ಸೃಷ್ಟಿಸಬೇಕು.. 

ಅವನ ಭಾವನೆಗಳಿಗೇ ಸಾಮ್ಯತೆಯ ಭಾವನೆಗಳು ನಮ್ಮಲ್ಲೂ ಸೃಷ್ಟಿಯಾಗಬೇಕು .. 

ಹಾಗೂ ಸಂತೋಷವಾಗಬೇಕು ಇದೇ ನಿಜವಾದ ಸ್ನೇಹವು..ನನಗೇ ಅವನು ಸಿಕ್ಕಿದ್ದೂ ಒಂದೆಡೆ ಸಂತೋಷವೆನಿಸಿದರೆ.. ಮನದಾಳದಲ್ಲಿ ಅಡಗಿದ್ದ ..ಅಘೋರಿಗಳ ಬಗೆಗಿನ ಕುತೂಹಲವು ಮತ್ತೇ ಹೆಚ್ಚಾಯ್ತು ಅದನ್ನು ಅವನೊಡನೆ ಹಂಚಿಕೊಂಡೆ 

  

#ಗುರುವಾದ ಮಿತ್ರ 

  

ನನ್ನ ಕುತೂಹಲ ಕಂಡು ಅವನೂ ಖುಷಿ ಪಟ್ಟ.. 

ನನ್ನನ್ನೂ ಕೆಲವು ದಿನ ಆ ಅಘೋರಿಗಳ ಬೀಡಿಗೆ ಕರೆದುಕೊಂಡು ಹೋಗು .ಎಂದು ಕೇಳಿಕೊಂಡೆ. 

ನೀನು ಖನಿಷ್ಟ ನಾಲ್ಕೈದು ದಿನ ಮನೆ ಬಿಟ್ಟು ಬರಬೇಕು…ಬಂದಮೇಲೆ ಇಲ್ಲಿನ ಯಾವುದೇ ನೆನಪುಗಳು ನಿನ್ನನ್ನು ಕಾಡಬಾರದು . 

ಅದಕ್ಕೇ ಸಂಬಂದಿಸಿದ ಸಿದ್ದತೆ ಮಾಡಿಕೊಳ್ಳುವುದು ನಿನಗೇ ಬಿಟ್ಟಿದ್ದು .. 

ಮುಂದಿನ ಅಮವಾಸಿಯ ದಿನ ಒಂದು ವಿಶೇಷ ಕಾರ್ಯಕ್ರಮವಿದೆ ಅದರ ಹೆಸರು ಶಕ್ತಿಸ್ವಾಧಯಾಗ ಶಿಭಿರ…ಆ ಶಿಭಿರಕ್ಕೇ ಸಾಮಾನ್ಯವಾಗೀ ಜನಸಾಮಾನ್ಯರಿಗೇ ಪ್ರವೇಶವೇ ಇರುವುದಿಲ್ಲ..ನಾನು ನಮ್ಮ ಗುರುಗಳಾದ ಬಾಬಾ ಮಹಾರುಧ್ರರ ಅನುಮತಿಯನ್ನು ಪಡೆದು ನಿನ್ನನ್ನು ಆಹ್ವಾನಿಸುತ್ತೇನೆ..ಎಂದು ಹೇಳಿದ …ನನಗೇ ಮತ್ತೇ ಕೆಲವು ಪ್ರಶ್ನೆಗಳು ಮೂಡಿದವು … 

ಶಕ್ತಿಸ್ವಾಧಯಾಗ ಎಂದರೇನೆಂದು ಕೇಳಿದೆ. ಅವನು ತುಂಬಾ ಸಾವಧಾನವಾಗಿ ಹೇಳಲಾರಂಭಿಸಿದ . 

ಈ ಪ್ರಕೃತಿಯಲ್ಲಿ ಅಸಾದಾರಣವಾದಂತಹ ಶಕ್ತಿಯು ಅಡಗಿದೆ 

ಮನುಷ್ಯನು ಸೇರಿದಂತೇ ಎಲ್ಲಾ ಜೀವರಾಶಿಗಳು ತಮಗೇ ಅಗತ್ಯವಿರುವಷ್ಟು ಶಕ್ತಿಯನ್ನು ಮಾತ್ರ ಪ್ರಕೃತಿಯಿಂದ ಪಡೆದು ಜೀವಿಸುತ್ತವೆ ಆದರೇ ಪ್ರಯತ್ನದಿಂದ ಇನ್ನೂ ಹೆಚ್ಚಿನ ಶಕ್ತಿಯನ್ನು ಪ್ರಕೃತಿಯಿಂದ ಗಳಿಸಲು ಸಾಧ್ಯವಿದೆ.. 

ಇದಕ್ಕೆ ಬಲವಾದ ಆತ್ಮಬಲವು ಬೇಕು ಇಂತಹಾ ಶಕ್ತಿಯನ್ನು ಮನುಷ್ಯನು . 

ತನ್ನನ್ನೇ ತಾನು ಆತ್ಮಬಲದ ಪ್ರಯೋಗಗಳಿಗೆ ಒಳಪಡಿಸಿಕೊಂಡು ಸ್ವಾಧಿಸುತ್ತಾನೆ..ಇಂತಹಾ ಶಕ್ತಿಗಳ ಬಗ್ಗೆ ವಿಜ್ಣಾನವೂ ನಿಖರವಾಗಿ ಉತ್ತರಿಸುವುದಿಲ್ಲ ಇವುಗಳೆಲ್ಲ ತರ್ಖಕ್ಕೆ ನಿಲುಕದ ಶಕ್ತಿಗಳು..ಇಂತಹಾ ಶಕ್ತಿಯನ್ನು ಪಡೆಯುವುದರಿಂದ .ವಿಜ್ಣಾನವು ಮರುಳಾಗುವ ಪವಾಡಗಳನ್ನು ಮಾಡಬಹುದು 

ಈ ಶಕ್ತಿಯನ್ನೂ ಬೇರೆಯವರಿಗೂ ಹಂಚಲೂಬಹುದೂ. ಇದಕ್ಕೆಲ್ಲ ಹಠಯೋಗದ ಜ್ಣಾನವಿರಬೇಕಾಗುತ್ತದೆ. ಹಾಗೂ ಮನಃಶುದ್ದಿಯೂ ಇರಬೇಕು..ದೇಹಶಕ್ತಿಗಿಂತಲೂ ಆತ್ಮ ಶಕ್ತಿಯನ್ನು ಬಲಗೊಳ್ಳಿಸಿಕೊಳ್ಳ ಬೇಕಾಗುತ್ತದೆ.. 

ಎಲ್ಲಕ್ಕಿಂತ ಮುಖ್ಯವಾಗಿ ಅತಿಯಾದ ಆತ್ಮಗೌರವವೂ ಇರಬೇಕು..ಈ ಶಿಭಿರದಲ್ಲಿ ಅಂತಹಾ ಹಲವು ಪ್ರಯೋಗಗಳು ನೆಡೆಯುತ್ತವೇ ನೂರಾರು ಅಘೋರಿಗಳು ದೇಶ ವಿದೇಶಗಳಿಂದ ಈ ಶಿಭಿರದಲ್ಲಿ ಬಾಗವಹಿಸುತ್ತಾರೆ ..ಹಲವಾರು ಮಹಿಳೆಯರೂ..ಈ ಶಿಭಿರದಲ್ಲಿರುತ್ತಾರೆ. 

ಇಲ್ಲಿನ ಪ್ರಯೋಗಗಳನ್ನು ನೋಡುವುದಕ್ಕೂ ಧೈರ್ಯವಿರಬೇಕೆಂದು ಹೇಳಿ ನನ್ನ ಕುತೂಹಲವನ್ನೂ ಮತ್ತೊಷ್ಟು ಹೆಚ್ಚಿಸಿದ…ನಾನು ಮತ್ತೆ ಪ್ರಶ್ನಿಸಿದೆ … 

ನಿಮ್ಮ ಗುರುಗಳು ಎಂದೆಯಲ್ಲಾ ಬಾಬಾ ಮಹಾರುಧ್ರರು ಅವರು ಯಾರು..?. 

  

#ಮಹಾಗುರುವಿನ ಪರಿಚಯ 

  

ಅವರ ಮೂಲಹೆಸರು ಡಾ ಯಶವಂತ್ .ಅವರು ವಿಯೆನ್ನಾ ಯುನಿವರ್ಸಿಟಿಯಲ್ಲಿ ಎರಡು ಪಿ ಹೆಚ್ ಡಿ ಪದವಿ ಪಡೆದಿದ್ದಿದ್ದಾರೆ ಅದೂ ಅಲ್ಲದೇ ಕರ್ನಾಟಕ ಯುನಿವರ್ಸಿಟಿ ಸೇರಿದಂತೇ ಇಂಡಿಯಾದ ನಾಲ್ಕು ಯುನಿವರ್ಸಿಟಿಗಳಲ್ಲಿ ನಾಲ್ಕು ಸ್ನಾತಕೋತ್ತರ ಪದವಿ ಹಾಗೂ ಆಕ್ಸ್ ಪರ್ಡ್ ಯುನಿವರ್ಸಿಟಿಯಲ್ಲಿ ..ಇಂಗ್ಲೀಷ್ ಲಿಟರೇಚರ್ ಗೇ ಸಂಬಂದಿಸಿದ ಒಂದು ಪದವಿ ಪಡೆದಿದ್ದಾರೆ..ಅದೂ ಅಲ್ಲದೇ ..ವಿಯೆನ್ನಾದಲ್ಲಿ ಅವರು ಇಪ್ಪತ್ತು ವರ್ಷಗಳ ಕಾಲ ಪ್ರೊಪೇಸರ್ ಆಗಿ ಸೇವೆ ಸಲ್ಲಿಸಿದ್ದಾರೆ ಬೆಂಗಳೂರು ಸೇರಿದಂತೇ ವಿಶ್ವಾದ್ಯಂತ ನೂರಾರು ಕಾನ್ಪರೆನ್ಸ್ ಗಳಲ್ಲಿ ಸಂಫನ್ಮೂಲ ವ್ಯಕ್ತಿಯಾಗಿ ಬಾಗವಹಿಸಿದ್ದಾರೆ. 

ಅವರು ಮೂಲತಃ ಚನೈ ನವರು. ಅವರು ಸುಮಾರು ನಾಲ್ಕೈದು ಭಾಷೆಗಳನ್ನು ನಿರರ್ಗಳವಾಗಿ ಮಾತನ್ನಾಡುತ್ತಾರೆ ಜಗತ್ತಿನ ಹಲವಾರು ಕ್ರೀಡಾಪಟುಗಳಿಗೇ ಎನರ್ಜಿಪೀಡರ್ ಆಗಿ ಈಗಲೂ ಸಹಾ ಕೆಲಸ ಮಾಡುತ್ತಿದ್ದಾರೆ ,ಅವರ ತಂದೆಯೂ ತಮಿಳುನಾಡಿನ ಒಬ್ಬ ಹೆಸರಾಂತ ಉದ್ಯಮಿಯಾಗಿದ್ದರು . 

ಅವರ ಮಗ .ಕಾನ್ಪುರ್ ನ ಐ ಐ ಟಿ ಯಲ್ಲಿ ಆಸ್ಟ್ರಾ ಪಿಜಿಕ್ಸ್ ಪದವಿ ಓದುತ್ತಿದ್ದಾನೆಅವರ ಪತ್ನಿಯೂ ..ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ..    ಮಾಯನ್ನ್ ನಂಭಿಕೆಗಳ ಹಿಂದಿರುವ ವಿಜ್ಣಾನ..(ಸೈನ್ಸ್ ಬಿಹ್ಯಾಂಡ್ ದಿ ಮಾಯನ್ಸ್ ಬಿಲೀವ್ಸ್ ).. 

ಎಂಬ ವಿಷಯದ ಬಗ್ಗೆ ಈಗಲೂ ಸಂಶೋಧನೆ ನೆಡೆಸುತ್ತಿದ್ದಾರೆ 

ಅವರ ಪ್ರೊಪೈಲ್ ಕೇಳಿ ನನಗಂತೂ ತಲೆ ಗಿರ್ ಎಂದಿತು ... 

ಇಂತಹಾ ವ್ಯಕ್ತಿಗಳ ಜೊತೆ ಒಂದೆರಡು ದಿನ ಕಳೆಯುವುದೂ ನನ್ನ ಪೂರ್ವಜನ್ಮ ದ ಪುಣ್ಯವೆಂದು ಭಾವಿಸಿ ..ಆದದ್ದಾಗಲೀ ಶಿಭಿರಕ್ಕೇ ಹೋಗಲೇ ಬೇಕೆಂದು ನಿರ್ಧರಿಸಿದೆ..   ಮತ್ತೇ ಅವನೇ ಮಾತಿಗಿಳಿದ … 

ನೋಡೋ…ಸ್ನೇಹಿತ ..ಹೂವುಗಳಲ್ಲಿನ ಪರಿಮಳದಂತೇ ಹಣ್ಣುಗಳಲ್ಲಿನ ರುಚಿಯಂತೇ ಮನುಷ್ಯನಲ್ಲಿ ಅಭಿರುಚಿಗಳಿರಬೇಕು, ಅಭಿರುಚಿಗಳೇ ಇಲ್ಲದ ಮಾನವ ಅವನು ಎಷ್ಟೇ ಗಳಿಸಿದ್ದರೂ ..ಪರಿಮಳವಿಲ್ಲದ ಹೂವಿನಂತೇ..ವಿದ್ಯಾರ್ಥಿಳಾಗಿದ್ದಾಗ ಹಲವಾರು ವಿಷಯಗಳ ಬಗ್ಗೆ ಅಭಿರುಚಿ ಹೊಂದಿರುವವರಂತೆ ತೋರಿಸಿಕೊಂಡ ಹೆಚ್ಚಿನವರು ಮದುವೆಯಾಗಿ .. 

ಜೀವನ ಸರೋವರದಲ್ಲಿ ಕೊಚ್ಚಿಹೋಗಿರುತ್ತಾರೆ ತಮ್ಮ ಅಭಿರುಚಿಗಳನ್ನು ಕಳೆದುಕೊಂಡಿರುತ್ತಾರೆ. ಆಕಾಶವೇ ತಮ್ಮ ತಲೆಯ ಮೇಲೆ ಬಿದ್ದಿರುವಂತೇ ಮುಖ ಸಿಂಡರಿಸಿಕೊಂಡಿರುತ್ತಾರೆ. ಜೀವನ ಪರ್ಯಂತ ಅಭಿರುಚಿಗಳನ್ನು ಉಳಿಸಿಕೊಳ್ಳುವುದೇ ಸಾರ್ಥಕತೆಯ ಜೀವವಾಗಿರುತ್ತದೆ ಅವುಗಳನ್ನೇ ಕಳೆದುಕೊಂಡ ಮೇಲೇ ಬದುಕಿಗೇ ಅರ್ಥವೇನಿದೆ ಹೇಳು ?..ಎಂದು ಹೇಳಿದ.. 

ಆಕ್ಚೂಲೀ ಐ ಅಪ್ರಿಸಿಯೇಟ್ ಯೂ.. ನೀನು ಇನ್ನೂ ನಿನ್ನ ಕುತೂಹಲವನ್ನೂ ಹಾಗೇ ಉಳಿಸಿಕೊಂಡಿರುವೆ…ಯು ಹ್ಯಾವ್ ವೆರೀ ಗುಡ್ಡ್ ಟೇಸ್ಟ್ ಆಲ್ಸೋ… 

ವೇರೀಗುಡ್ಡ್ ಕೀಪ್ ಇಟ್ ಅಪ್ ನನ್ನನ್ನೂ ಹೊಗಳಿದ…. 

ನನಗೂ ತುಂಬಾ ಖುಷಿ ಆಯ್ತು 

ಹಲವು ಗಂಟೆಗಳ ಕಾಲದ ಮಾತುಕತೆಗಳ ನಂತರ .ಅವನ ವಿಳಾಸ ಪೋನ್ ನಂಬರ್ ಕೊಟ್ಟು .. ಮುಂದಿನ ಅಮವಾಸೆಯ ಎರಡು ದಿನ ಮುಂಚೇ ನೀನು ಈ ವಿಳಾಸಕ್ಕೇ ಬಾ ಅಲ್ಲಿ ಎರಡು ದಿನಗಳ ಪೂರ್ವ ತಯಾರಿಯ ನಂತರಾ .ಕೊನೆಯ ಮೂರುದಿನಗಳು ನಾವು ಶಿಭಿರಕ್ಕೇ ಹೋಗೋಣ. ಎಂದು ಹೇಳಿದ ಅವನನ್ನೂ ಬೀಳ್ಕೊಟ್ಟು ಅವನು ಹೇಳಿದಮಾತುಗಳನ್ನೇ ಮನದಲ್ಲಿ ಮೆಲುಕು ಹಾಕುತ್ತಾ ಮನೆಗೆ ಬಂದೆ… 

  

#ಕಾಡ ಹತ್ತಿತು ಒಳದನಿ 

  

ಸದಾನಂದ ಹೇಳಿದ ಆ ಕಾರ್ಯಕ್ರಮಕ್ಕೆ ಹೋಗಲೇ ಬೇಕೆಂದು ಮನಸು ಕಾಡಲಾರಂಬಿಸಿತು ಆದರೇ ಮನೆಯಲ್ಲಿ ಏನೆಂದುಹೇಳಿ ಹೊರಡಬೇಕು..   ವಾಟ್ ಎಬೌಟ್ ಆಪಿಸ್ .  ಲೀವ್. .ತಂದೆ ತಾಯಿ .ಹೆಂಡತಿಯು ಒಪ್ಪುವುದು ಕಷ್ಟ ಸಾಧ್ಯ 

ಸುಳ್ಳು ಹೇಳಿ ಹೋಗುವುದೇ. ಎಂಬಿತ್ಯಾದಿ ಪ್ರಶ್ನೆಗಳು ..ಕಾಡತೊಡಗಿದವೂ.. 

ಒಂದುವೇಳೆ ಹೋದರಂತೂ ಇದೊಂದು ರೋಮಾಂಚನ ಪ್ರವಾಸದ ಅನುಭವವಾಗುವುದಂತೂ ನಿಜ .. ಎಂದು ಹಗಲುಗನಸು ಕಾಣತೊಡಗಿದೆ.  ಆದುದ್ದಾಗಲೀ ಅಘೋರಿಗಳ ಮಹಾಶಕ್ತಿ ಸಿದ್ದಿಶಿಭಿರಕ್ಕೇ ಹೋಗಲೇ ಬೆಕೆಂದು ನಿರ್ಧರಿಸಿದೆ.. 

ಶೈಕ್ಷಣಿಕ ಪ್ರವಾಸವೆಂದು ಕಾರಣ ಹೇಳಿ ಮನೆಯವರ ಸಮ್ಮತಿಯನ್ನೂ ಪಡೆದೇ 

(ಆಕ್ಚೂಲಿ ನಾನು ಮನೆಯವರಿಗೆ ಹೇಳಿದ್ದೂ ಸುಳ್ಳೇನಲ್ಲಾ) 

ಐದು ದಿನಗಳ ಪ್ರವಾಸಕ್ಕೆ ರಡಿಯಾದಂತೇ ಎಲ್ಲಾರೀತಿಯ ಅಗತ್ಯಸಾಮುಗ್ರಿಗಳನ್ನು ಒಂದೇ ಬ್ಯಾಗಿನಲ್ಲಿ ಜೋಡಿಸಿಕೊಂಡೆ 

ಮನೆದೇವರನ್ನು ಸ್ಮರಿಸುತ್ತಾ ಮನೆಯಿಂದ ಹೊರಟೆ…. 

  

  

  

#ಪಯಣ 

ಬೆಳಗ್ಗೆಯಿಂದಲೂ .ಎರಡು ಬಸ್ಸುಗಳು .ಒಂದು ಟ್ರೈನ್ .ಹಾಗೂ .ಒಂದು ಆಟೋ ಮೂಲಕ ಸುಮಾರು ಮೂರುನೂರು ಕಿಲೋಮೀಟರ್ ಕ್ರಮಿಸಿ ಸಂಜೆ ಏಳರವೇಳೆಗೇ ಸ್ನೇಹಿತ ಸದಾನಂದ ಹೇಳಿದ್ದ ವಿಳಾಸಕ್ಕೆ ಹೋದೆ..ನಗರದಿಂದ ಸುಮಾರೂ ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಒಂದು ತೋಟದ ಮಧ್ಯಬಾಗದಲ್ಲಿ ಇತ್ತು ಒಂದು ವಿಶಾಲವಾದ ಬಂಗಲೆ 

ನಾನು ಬರುವ ವಿಷಯತಿಳಿದು ತೋಟದ ಗೇಟಿನಲ್ಲೇ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನನ್ನೂ ಸ್ವಾಗತಿಸಿದರೂ.ಆಟೋವನ್ನು ಗೇಟಿನಿಂದಲೇ ವಾಪಸ್ ಕಳಿಸಿ .ಅವರೊಂದಿಗೇ ಮಾತನ್ನಾಡುತ್ತಾ ಹೆಜ್ಜೆ ಹಾಕಿದೆವು 

ಸಾರ್ ಇದೂ ನಮ್ಮ ಸದಾನಂದ ಸ್ವಾಮಿಗಳದ್ದೇ ಜಮೀನು ..ಅವರು ಇಲ್ಲಿಗೇ ಬರುವುದೂ ತುಂಬಾ ಅಪುರೂಪ ಆದರೂ ಸಹಾ ಪ್ರತೀದಿನವೂ ಮನೆಯನ್ನು ಶುದ್ದವಾಗಿಡಲು ಒಂದು ಕುಟುಂಬದವರೂ ಇಲ್ಲಿಯೇ ಇದ್ದಾರೆ .. 

  

ಸದಾನಂದಸ್ವಾಮಿಗಳು ನಮ್ಮ ಕಷ್ಟಗಳಿಗೇ ಸಹಾಯ ಮಾಡಿದ್ದಾರೇ ಆದುದರಿಂದ ಅವರು ಬರುವ ಸುದ್ದಿತಿಳಿದ ಕೂಡಲೇ ನಾವು ಇಲ್ಲಿಗೇ ಬರುತ್ತೇವೇ ಅವರು ಇಲ್ಲಿಂದಾ ಹೋಗುವವಹೊರೆಗೂ ಅವರೊಂದಿಗಿದ್ದು ಅವರಿಗೇ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುತ್ತೇವೆಂದು ಹೇಳಿದರು 

ನೀವು ಬರುತ್ತಿರುವುದರ ಬಗ್ಗೆ ಅವರು ನೆನ್ನೆಯಿಂದಲೂ ನಮ್ಮೊಂದಿಗೇ ಹೇಳುತ್ತಿದ್ದರು..ಈಗ ಅವರು ಸಂಜೆಯ ಧ್ಯಾನದಲ್ಲಿ ಕುಳಿತ್ತಿದ್ದರೂ ಹೀಗಾಗೀ ನಿಮ್ಮನ್ನು ಕರೆದುಕೊಂಡು ಹೋಗಲು ನಾವು ಬಂದಿದ್ದೇವೆ ..ಎಂದು ಹೇಳಿದರು…ಮನೆಯೊಳಗೇ ಪ್ರವೇಶಿಸಿದೆವು .. 

ಸದಾನಂದ ಬಂದು ಪ್ರೀತಿಯಿಂದ ತಬ್ಬಿಕೊಂಡ ..ಅವನನ್ನು ನೋಡಿ ನನಗೇ ಆಶ್ಚರ್ಯ ವಾಯ್ತು ಏಕೆಂದರೇ ನಾನು ಹಿಂದೆಂದೂ ಅವನನ್ನು ಈ ತರಹದ ಭಾವದಲ್ಲಿದುದನ್ನು ನೋಡಿಯೇ ಇರಲಿಲ್ಲ ಒಬ್ಬ ಆಧ್ಯಾತ್ಮಿಕ ಸಾಧನೆಯಹಾದಿಯಲ್ಲಿರುವ ಗುರುವಿನ ತರಹ ಕಾಣಿಸುತ್ತಿದ್ದ.. 

ಓ …ಇವನೇನಾ ನಮ್ಮ ಸದಾನಂದ ಎನಿಸುವಂತಾಯ್ತು.. 

  

ಉಭಯಕುಶಲೋಪರಿಗಳನ್ನು ವಿಚಾರಿಸಿದ ಅಷ್ಟರಲ್ಲಿ ಒಬ್ಬವ್ಯಕ್ತಿಯೂ ಒಂದು ಗಾಜಿನಲೋಟದಲ್ಲಿ ಒಂದುರೀತಿಯ ಪಾನೀಯವನ್ನು ತಂದು ಕೊಟ್ಟ .. 

ಸದಾನಂದ ತಗೋ ಇದನ್ನು ಕುಡೀ ಎಂದು ಹೇಳಿದ ..ಕುಡಿದೇ …ಕಲವೇಕ್ಷಣಗಳಲ್ಲಿ ನನ್ನ ಆಯಾಸವೆಲ್ಲಾ ಕಡಿಮೆ ಆಯ್ತು ಸಹಜವಾಗೀ ನೂರಾರು ಕಿಲೋಮೀಟರ್ ಜರ್ನಿ ಮಾಡಿದಾಗ ಸಿಕ್ಕಾಪಟ್ಟ ಆಯಾಸವಾಗುತ್ತದೆ 

ನನಗೂ ಆಶ್ಚರ್ಯವೆನಿಸಿತು ಆಗತಾನೆ ಸ್ನಾನ ಮಾಡಿದ ಪ್ರೆಶ್ ಫೀಲಿಂಗ್ ಆಯ್ತು.. 

ಕೊನೆಗೂ ನೀನು ನಿನ್ನ ಕುತೂಹಲಕ್ಕೇ ಮಹತ್ವವನ್ನು ಕೊಟ್ಟು ಬಂದೆಯಲ್ಲಾ .. ರಿಯಲೀ ಐ ಯಾಮ್ ವೆರೀ ಹ್ಯಾಪೀ.. 

  

ನಾನು ನಿನ್ನ ಬಗ್ಗೆ ನಮ್ಮ ಗುರುಗಳಾದ ಬಾಬಾ ಮಹಾರುಧ್ರರ ಬಳಿ ನಿನ್ನ ಬಗ್ಗೆ ಹೇಳಿದೆ. 

ಅವರೂ ನಿನ್ನ ಪರಿಚಯವಾದಂದಿನಿಂದ ಮೊನ್ನೆಯವರೆಗಿನಾ ಹಲವಾರು ಪ್ರಶ್ನೆಗಳನ್ನು ಕೇಳಿದರು. 

ನಾನು ನಿನ್ನ ಬಗ್ಗೆ ಅವರಿಗೇ ವಿವರಿಸಿದೇ ,ಅವರೂ ತುಂಬಾ ಪ್ರೀತಿಯಿಂದಲೇ ನಿನ್ನನ್ನು ಸ್ವಾಗತಿಸಲು ತಿಳಿಸಿದರು..ಸಾಮಾನ್ಯವಾಗಿ ಅವರು ಹಾಗೆಲ್ಲ ಎಲ್ಲರನ್ನೂ ಇಂತಹಾ ಶಿಭಿರಗಳಿಗೇ ಬರಲು ಅನುಮತಿಸುವುದಿಲ್ಲ ..ಎಂದು ಹೇಳಿದನು…ನಾವು ನಾಳೆ ಸಂಜೆಯ ವೇಳೆಗೇ ಗುರುಗಳ ಬೀಡಿಗೆ ತೆರಳುತ್ತೇವೇ ಅಲ್ಲಿ ಕೆಲವೂ ಪೂರ್ವ ತಯಾರಿಯ ನಂತರಾ ನಾಡಿದ್ದು ಮಧ್ಯಾನದವೇಳೆಗೇ ಶಿಭಿರದ ಸ್ಥಳಕ್ಕೆ ಹೋಗುತ್ತೇವೆ. 

ಬಿ ಕಂಪರ್ಟ್ ಬಿ ಹ್ಯಾಪೀ ಎಂದು ಹೇಳುತ್ತಾ… 

ನನ್ನ ಬೆನ್ನುತಟ್ಟಿದನು … 

ಊಟದ ಬಳಿಕ ಇಬ್ಬರೂ ಮಲಗಲು ತೆರಳಿದೆವು.. 

ನಾಳೆ ಗುರುಗಳಾದ ಮಹಾರುಧ್ರರನ್ನು ನೋಡುತ್ತೇವೇ ..ನಾಡಿದ್ದು ಶಿಭಿರ… 

ಅಧ್ಭುತರೋಮಾಂಚನ ..ಮುಂತಾದ ಆಲೋಚನೆಗಳು ಮನದಲ್ಲಿ ಸುಳಿದಾಡಿದವು.. 

ನಿದ್ದೆಗೆ ಮುಂಚೇ ಹಾಗೇ ಕೆಲವು ಸಣ್ಣ ಪುಟ್ಟ ಕುತೂಹಲಗಳನ್ನು ಪರಿಹರಿಸಿಕೊಳ್ಳಲು ಸದಾನಂದನನ್ನು ಪ್ರಶ್ನಿಸಿದೆ.. 

ಅಘೋರಿಗಳಾಗಲು ಯಾರೂ ಏತಕ್ಕೇ ಬಯಸುತ್ತಾರೇ. ಅಘೋರಿಗಳ ಜೀವನೋದ್ದೇಶವೇನು..? 

ಅವರ ಜೀವನ ನಿರ್ವಹಣೆ ಹೇಗೇ.ಅವರ ಸಾಮಾಜಿಕಜೀವನ ಹೇಗಿರುತ್ತದೆ ? 

ಇಂತಹಾ ಶಿಭಿರಗಳನ್ನು ನೆಡೆಸಲು ಸಂಭಂದಿಸಿದ ಹಣಕಾಸಿನ ವ್ಯವಸ್ಥೆ ಹೇಗೆ..? 

ಇಷ್ಟಕ್ಕೂ ಅಘೋರಿಗಳಿಗೂ ನಿನಗೂ ಏನು ಸಂಬಂದ ..? 

ಹೀಗೇ ಹತ್ತಾರು ಪ್ರಶ್ನೆಗಳನ್ನು ಕೇಳಿದೇ ಅವುಗಳಿಗೇ ಸದಾನಂದ ಕೊಟ್ಟ ಉತ್ತರಗಳು ಒಂದೆಡೇ ಅರ್ಥಪೂರ್ಣ ಹಾಗೂ ಮತ್ತೊಂದೆಡೇ ರೋಚಕ..ವೆನಿಸುವಂತಿದ್ದವುಜೀವನದಲ್ಲಿ ಎಂದೂ ಕಂಡೂ ಕೇಳರಿಯದ ಹೊಸ ರೋಚಕ ಪ್ರಪಂಚವನ್ನು ನಾಳೆ ನೋಡುತ್ತಿದ್ದೇನೆಂಬ ಕಲ್ಪನೆಗಳಲ್ಲೇ ನಿದ್ದೆಯು ಆವರಿಸಿತು ..ಮೈತುಂಬಾ ಬೂದಿಬಳಿದುಕೊಂಡು ಶವಗಳನ್ನು ತಿನ್ನುವ ಭಯಾನಕ ರೂಪಿನ ಅಘೋರಿಗಳೇ ಕನಸಿನ ತುಂಬೆಲ್ಲಾ ತುಂಬಿಕೊಂಡಿದ್ದರು… 

ಈ ಕನಸುಗಳ ಅಮಲಿನಲ್ಲಿದ್ದ ನನಗೆ ಬೆಳಗಾದುದೇ ಗೊತ್ತಾಗಲಿಲ್ಲ .. 

  

#ಸುದಿನ 

ಬೆಳಿಗ್ಗೆ ಕಣ್ಭಿಟ್ಟು ನೋಡುವಾಗ ಸದಾನಂದನು ಸ್ನಾನ ಮುಗಿಸಿ ಯಾವುದೋ ಒಂದು ದಪ್ಪರಟ್ಟಿನ ಪುಸ್ಥಕ ಓದುತ್ತಾ ಕುಳಿತಿದ್ದ..ನಾನು ಸಹಾ ಸ್ನಾನ ಮುಗಿಸಿ ಬೇರೇ ಬಟ್ಟೆಗಳನ್ನು ದರಿಸಿ ಸಿದ್ದನಾದೆ..ಅಷ್ಟರಲ್ಲಿ ತಿಂಡಿ ಕಾಪಿಯನ್ನು ಸೇವಿಸಿದ್ದೂ ಆಯ್ತು ..ಈ ವೇಳೆಗಾಗಲೇ ಸದಾನಂದನ ಮಾತುಗಳು ನೆನ್ನೆಗಿಂತ ಕಡಿಮೆಯಾಗಿದ್ದವು.ಅವನ ಮುಖದಲ್ಲಿನ ಏನೋ ಒಂದುರೀತಿಯ ತಾಳ್ಮೆಯ ಭಾವವೂ ಹೊಳೆಯುತ್ತಿತ್ತು.  ಧ್ವನಿಯೂ ಹಿಂದೆಂದಿಗಿಂತಾ ಮೃದುವಾಗಿತ್ತು…ಒ ಕೆ ಆರ್ ಯೂ ರೆಡೀ..? ಎಂದು ಕೇಳಿದ..ಯಾ ಐ ಯಾಮ್ ರಡೀ ವಿತ್ ಲಾಟ್ ಆಪ್ ಕ್ಯೂರಿಯಾಸಿಟಿ.ಎಂದು ಉತ್ತರಿಸಿದೆ.   ಇನ್ನು ಕೆಲವೇ ಸಮಯದಲ್ಲಿ ಜೀಪು ಬರುತ್ತದೇ ..  ನೀನು ನಿನ್ನಈ ಎಲ್ಲಾ ಲಗೇಜುಗಳನ್ನು ಅಲ್ಲಿಗೇ ತರುವಂತಿಲ್ಲ..ಒಂದೆರಡು ಬಟ್ಟೆಗಳಷ್ಟೇ ಸಾಕು ಎಂದು ಹೇಳಿದ ಸರಿ ಎಂದು ಒಂದು ಸಣ್ಣ ಬಟ್ಟೆಯ ಚೀಲದಲ್ಲಿ ನನ್ನ ಒಂದೆರಡು .ಬಟ್ಟೆಗಳನ್ನು ತುಂಬಿಕೊಂಡು ಸಿದ್ದನಾದೆ ಒಂದುರೀತಿಯ ಮೌನವೂ ನನಗೂ ಆವರಿಸತೊಡಗಿತು ..ಅದರ ಮದ್ಯೆ ಭಯವೂ ಸುಳಿದಾಡುತ್ತಿತ್ತು..ಬಾಬಾ ಮಹಾರುದ್ರರ ಬಳಿ ನಾನು ಹೇಗೆ ನೆಡೆದುಕೊಳ್ಳಬೇಕೆಂಬುದರ ಬಗ್ಗೆ ಸದಾನಂದ ಒತ್ತಿ ಒತ್ತಿ ಹೇಳಿದ ..ನಾನೂ ಕೂಡ ಮಾನಸಿಕವಾಗಿ ಹಾಗೂ ಧೈಹಿಕವಾಗಿ ಬಾಬಾರ ಮನಗೆಲ್ಲಲೂ ಸಿದ್ದನಾದೆ.ಸಮಯವು ಕಳೆದಂತೇ ಸದಾನಂದನ ಮಾತುಗಳೆ ಕಡಿಮೆಯಾದವು ..ಅವನ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡ ನಾನು ಅನಗತ್ಯವಾಗಿ ಯಾವುದೇ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದೆ…ಹಿಂದಿನ ಆಲೋಚನೆಗಳು ಹಾಗೂ ಮುಂದಿನ ಕಲ್ಪನೆಗಳಿಂದ ಮುಕ್ತವಾಗಿ ಸಂಪೂರ್ಣವಾಗಿ ವರ್ತಮಾನದಲ್ಲಿ ಜೀವಿಸಬೇಕೆಂಬ ಅಘೋರಿಗಳ ಮೂಲ ಸಿದ್ದಾಂತವನ್ನು ಮೈಮೇಲೆಳೆದುಕೊಂಡೆ. 

ಒಂಬತ್ತರ ವೇಳೆಗಾಗಲೇ ಜೀಪು ಬಂದೇ ಬಿಟ್ಟಿತು… 

ನಾನು ಸದಾನಂದ ಹಾಗೂ ಸದಾನಂದನ ಮತ್ತೊಬ್ಬ ಮಿತ್ರ ಅಮರೇಶ ಮೂರುಜನರು ಜೀಪು ಹತ್ತಿದೆವು…ಜೀಪು ಹೊರಟಿತು ಸದಾನಂದನೊಂದಿಗೇ ಪ್ರಯಾಣದ ವೇಳೆಯಲ್ಲಿ ಹೆಚ್ಚು ಮಾತನಾಡುವ ಚಟವೂ ಮಂಕಾಯ್ತು .. 

ಒಂದುರೀತಿಯ ಜೊಂಪು ನಿದ್ದೆಯು ಆವರಿಸಿದಂತಾಯ್ತು..  ಹಾಗೇ ಕಣ್ಣುಮುಚ್ಚಿ .ಹಿಂಬದಿಗೆ ಹೊರಗಿದೆ.. 

ಗೊತ್ತೇ ಆಗಲಿಲ್ಲ ಗಂಟೆಗೆ ಸರಾಸರಿ ಎಪ್ಪತ್ತು ಕಿಲೋಮೀಟರ್ ವೇಗದಲ್ಲಿ ಓಡುತ್ತಿರುವ ಜೀಪು ಆಗಲೇ ಎರಡುಗಂಟೆಗಳಿಂದ ಒಂದೇ ವೇಗವನ್ನು ಕಾಪಾಡಿಕೊಂಡಿತ್ತು. 

ಕಣ್ಣು ಬಿಟ್ಟು ನೋಡಿದೆ 

ಎತ್ತನೋಡಿದರೂ ಬರೀ ಗಿಡ ಮರಗಳು ದೂರದಲ್ಲಿ ಕಾಣಿಸುವ ಬೆಟ್ಟಗಳ ಶಿಖರಗಳ ತುದಿಗಳು…ಆ ಕಾಡುದಾರಿಯಲ್ಲಿ ಜೀಪಿನ ವೇಗವು ಸ್ವಲ್ಪ ನಿಧಾನವಾದಂತೆ ಕಂಡುಬಂತು. 

ಕಿಟಕಿಯಿಂದ ಕಣ್ಣಾಡಿಸುತ್ತಾ ಪೃಕೃತಿಯ ಸೌಂಧರ್ಯವನ್ನು ಸವಿಯುತ್ತಾ ಕುಳಿತೆ ಅಮರೇಶನೂ ಸಹಾ ನಿದ್ದೆ ಮಾಡುವಂತೇ ಹಿಂಬದಿಗೊರಗಿದ್ದ.ಸದಾನಂದನಂತೂ ಕಣ್ಣು ಬಿಟ್ಟುಕೊಂಡು ನಿದ್ದೆ ಮಾಡುವಂತೆ ಗೋಚರಿಸುತ್ತಿದ್ದ… 

ಡ್ರೈವರ್ ಗೋಪಾಲ ಒಂದುರೀತಿಯ ಹೊಸ ಉತ್ಸಾಹದಿಂದ ಜೀಪು ಚಲಾಯಿಸುತ್ತಿದ್ದ… 

ಇನ್ನು ಕೆಲವೇ ನಿಮಿಷಗಳಲ್ಲಿ ನಾವು ಬಾಬಾ ಮಹಾರುದ್ರರ ಮನೆಯನ್ನು ತಲಪಲಿದ್ದೇವೆ . 

ಸದಾನಂದನ ಧ್ವನಿ.. .ಹೋ ಹೌದೇ ..ನನ್ನ ಉತ್ತರ ಮತ್ತದೇ ಮೌನ .. 

ನಾವು ಎಲ್ಲಿಂದ ಹೊರಟಿದ್ದೀವಿ ಎಲ್ಲಿ ಚಲಿಸುತಿದ್ದೀವೇ ಈ ಜಾಗವಾದರೂ ಯಾವ ಪ್ರದೇಶಕ್ಕೆ ಸೇರಿದ್ದೂ ಒಂದೂ ತಿಳಿಯುತ್ತಿರಲಿಲ್ಲ ನೋಡು ನೋಡುತ್ತಲೇ ಜೀಪು ಒಂದು ಪುರಾತನ ಕೋಟೆಯಂತಿದ್ದ ಕಾಂಪೌಂಡಿನ ಹೊಳಗೆ ಹೋಯ್ತು.. 

  

  

ವಾವ್ ...ಅಲ್ಲಿ ಸೌಂಧರ್ಯವನ್ನು ನೋಡಲು ಕಣ್ಣುಗಳಷ್ಟೇ ಅಲ್ಲ ಹೃದಯವನ್ನು ತೆರೆಯಬೇಕು .ಅಚ್ಚಹಸಿರಿನ ಗಿಡಮರಗಳು.ಸಾವಧಾನವಾಗಿ ಹರಿಯುತ್ತಿರುವ ನದಿ..ಝರಿಗಳು ವಿಚಿತ್ರವಾದ. ಪಕ್ಷಿಗಳ ಕಲರವ. ಇವೆಲ್ಲವನ್ನೂ ಮರೆಮಾಡಿದ್ದ ಗಾಂಭೀರ್ಯತೆಯ ಮೌನ ಎಂತವರ ಮನಸ್ಸುಕೂಡ ಕೇಂದ್ರೀಕೃತವಾಗುವಂತಹಾ ತಾಣವದು .. 

ಅರಮನೆಯ ಕಥೆ 

ಜೀಪು ಆ ಕೋಟೆಯೊಳಗಿನ ಪಾಳುಬಿದ್ದಂತಿದ್ದೊಂದು ದೊಡ್ಡ ಬಂಗಲೆಯ ಕಡೆ ನಿದಾನವಾಗಿ ಚಲಿಸತೊಡಗಿತು ಇದೇ ಬಾಬಾ ಮಹಾರುದ್ರರ ತಂಗುದಾಣ..ಸದಾನಂದ ನನ್ನ ಮುಖವನ್ನೇ ನೋಡುತ್ತಾ ಹೇಳಲಾರಂಬಿಸಿದ…ನೂರಾರು ವರ್ಷಗಳ ಹಿಂದೆ ಇದು ಇಲ್ಲಿನ ರಾಜನಾಗಿದ್ದ ಪೂರ್ಣಚಂದ್ರ ಮಹಾರಾಜರ ಅರಮನೆಯಾಗಿತ್ತು ..ಅಘೋರಿತತ್ವದ ಆಕರ್ಷಣೆಯಿಂದ ಆತ ತನ್ನ ಕುಟುಂಬ ರಾಜ್ಯ .ಅಧಿಕಾರ ಎಲ್ಲವನ್ನೂ ಬಿಟ್ಟು ಮಹಾರಾಜ ಪೂರ್ಣಚಂದ್ರ ತನ್ನ ಅರಮನೆಯನ್ನೇ ಅಘೋರಿಗಳಿಗೆ ಬಿಟ್ಟುಕೊಟ್ಟು ತಾನೂ ಕೂಡ ಒಬ್ಬ ಅಘೋರಿಯಾಗಿ ಬದುಕಿನ ಸಾರ್ಥಕತೆಯನ್ನು ಅರಿಯತೊಡಗಿದ್ದರು . ಅಂದಿನಿಂದ ಅವರ ಹೆಸರನ್ನು ಪೂರ್ಣಪ್ರಙ್ಣ ರೆಂದು ಬದಲಿಸಿಕೊಂಡಿದ್ದರು .ಸಾಕೊಷ್ಟು ಸಾಧನೆಗಳನ್ನು.ಪ್ರಯೋಗಗಳನ್ನು ಮಾಡಿ ಭ್ರಹ್ಮಾಂಡದ ಅಗೋಚರ ಶಕ್ತಿಯನ್ನು ತನ್ನದನ್ನಾಗಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದರು…ನಾವು ಈಗ ಬೇಟಿಮಾಡುತ್ತಿರುವ ಬಾಬಾ ಮಹಾರುದ್ರರ ಗುರುಗಳಾದ ಬಾಬಾ ಕೇತುಕಳೆ ಯವರ ಗುರುವು ಈ ಪೂರ್ಣಪ್ರಙ್ಣರೇ..ಬಾಬಾ ಪೂರ್ಣಪ್ರಙ್ಣ ಹಾಗೂ ಬಾಬಾ ಕೇತುಕಳೆ ನಡುವೆ ಎಷ್ಟೊಂದು ಅನೋನ್ಯತೆ ಇತ್ತೆಂದರೇ ಪೂರ್ಣಪ್ರಙ್ಣರ ಆತ್ಮವು ದೇಹವನ್ನು ತ್ಯಜಿಸಿದಾಗ ಬಾಬಾ ಕೇತುಕಳೆಯವರು ಅವರ ದೇಹದ ಒಂದು ತುಣುಕನ್ನೂ ಬಿಡದೇ ತಿಂದು ಮುಗಿಸಿದ್ದರೂ 

ಅದೇರೀತಿ ಬಾಬಾ ಕೇತುಕಳೆಯವರ ಆತ್ಮವೂ ಅವರ ದೇಹವನ್ನು ತ್ಯಜಿಸಿದ್ದಾಗ ಅವರ ಪವಿತ್ರಕಾಯವನ್ನು ನಮ್ಮ ಗುರುಗಳಾಗಿರು ಬಾಬಾ ಮಹಾರುದ್ರರೂ ಪ್ರಸಾದವೆಂಬಂತೇ ಭಕ್ತಿಪೂರ್ವಕವಾಗಿ ಸ್ವೀಕರಿಸಿದ್ದರು ನಾನೂ ಓ ಮೈ ಗಾಡ್ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.. ಸದಾನಂದ ಮತ್ತೆ ಮಾತು ಮುಂದುವರೆಸಿದ.. 

ಹೌದೂ ….ಪವಿತ್ರ ಆತ್ಮವೂ ವಾಸಮಾಡಿದ್ದ ದೇಹವೂ ಪವಿತ್ರವಾದುದೂ ಆತ್ಮವೂ ದೇಹವನ್ನು ತ್ಯಜಿಸಿದಾಗ ದೇಹವನ್ನು ಗುರು ಪ್ರಸಾದಂತೇ ಸ್ವೀಕರಿಸಬೇಕು ಇದನ್ನು ಜೀಣಿಸಿಕೊಂಡ ನಮ್ಮದೇಹವೂ ಬಹುಬೇಗ ಪವಿತ್ರವಾಗುತ್ತದೆ .. 

ಹೀಗೇ ದೇಹ ಮತ್ತು ಮನಸ್ಸುಗಳ ಅತೀ ಪಾವಿತ್ರತೆಯಿಂದಾ ಮಾತ್ರ ನಾವು ಪ್ರಕೃತಿಯಲ್ಲಿನ ಶಕ್ತಿಯನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ..ಎಂದುಹೇಳಿ- ನೀನು ಕೇತುಕಳೆಯವರು ಗತಿಸಿದ ಬಗ್ಗೆ ಕೇಳಿದರೆ ತುಂಬಾನೇ ಆಶ್ಚರ್ಯ ಪಡುತ್ತೀಯ ಎಂದ- ನಾನಾದರೂ ನೀವು ಹೇಳುತ್ತಿರುವ ಎಲ್ಲಾ ವಿವರಗಳು ನನಗೆ ಆಶ್ಚರ್ಯವೇ..ಆದರೂ ಆ ವಿಷಯವನ್ನೂ ತಿಳಿಯುವ ಹಂಬಲವು ನನಗಿದೆ ಹೇಳಿಬಿಡು ಎಂದೆ. . 

  

#ಯೋಗಾವಸ್ತೆಯಲ್ಲೇ ನಿಶ್ವಾಸಬಾಬಾ ಕೇತುಕಳೆಯವರು ಹಠಯೋಗದ ಮಹಾನ್ ಸಾಧಕರಾಗಿದ್ದರು ಅವರ ಎಂಬತ್ತನೆಯ ವಯಸ್ಸಿನಲ್ಲಿ ಅಕಸ್ಮಿಕವಾಗಿ ಮರದ ಕೊಂಬೆಯೊಂದು ಅವರ ಕಾಲಮೇಲೆ ಬಿದ್ದು ಕಾಲಿನ ಮೂಳೆಗಳು ಮುರಿದು ಹಲವು ಚಿಕಿತ್ಸೆಗಳ ನಂತರವೂ ಗುಣವಾಗುವುದು ತಡವೆನಿಸಿದಾಗ . ಇಂತಹ ನೋವು ಹಾಗೂ ರೋಗಗ್ರಸ್ತ ಶರೀರದಲ್ಲಿ ನನ್ನ ಆತ್ಮವು ಇರುವುದು ಬೇಡವೆಂದು ತೀರ್ಮಾನಿಸಿ- ಒಂದು ದಿನ ಹಠಯೋಗದ ಭಂಗಿಗಳನ್ನು ಹಾಕುತ್ತಾ -ಆ ಮುರಿದ ಮೂಳೆಯ ಕಾಲುಗಳಲ್ಲೇ ಶಿವತಾಂಡವವನ್ನು ಮಾಡುತ್ತಾ. .ತನ್ನ ಬಲದಕಾಲಿನ ಹೆಬ್ಬೆರಳನ್ನು ಮಾತ್ರ ನೆಲಕ್ಕೆ ಗಟ್ಟಿಯಾಗಿ ಊರಿ ಇಡೀ ದೇಹವನ್ನು ಆಕಾಶ ಮಾರ್ಗಕ್ಕೆ ಚಾಚಿ -ಮೇಲ್ಮುಖವಾಗಿ ನೀಡಿದ್ದ ತನ್ನ ಬಲದ ಕೈನ ತೋರು ಬೆರುಳನ್ನು ಗುರಿ ಇಟ್ಟು ನೋಡುತ್ತಾ. ಜೋರಾಗಿ ಉಸಿರೆಳೆದುಕೊಂಡು -ನಂತರಾ ತೋರಬೆರಳಿಗೆ ನೇರವಾಗಿ ಉಸಿರನ್ನು ಹೊರಹಾಕಿದ್ದರು ಅದು ಅವರ ಕೊನೆಯ ಉಸಿರಾಗಿತ್ತು...ಹೀಗೆ ನಿಶ್ವಾಸರಾದ ನಂತರವೂ ಹಲವು ಕಾಲ ಬಲಗಾಲಿನ ಹೆಬ್ಬೆರಳಿನಲ್ಲೇ ನಿಂತ ಭಂಗಿಯಲ್ಲೇ ನಿಂತಿದ್ದರು... 

ಸದಾನಂದನ ಮಾತು ಕೇಳಿ ನಾನು ಆಶ್ಚರ್ಯ ಚಕಿತನಾಗಿ ಇದು ಇಚ್ಚಾ ಮರಣವೋ ಎಂದು ಕೇಳಿದೆ . . 

ಹೌದು ಈ ನಿಟ್ಟಿನಲ್ಲಿ ಹೆಚ್ಚು ಸಾಧನೆಯನ್ನು ಮಾಡಿದ್ದವರು ಅವರಿಗೆ ಈ ದೇಹವು ಸಾಕೆನಿಸಿದಾಗ ಅರಾಮವಾಗಿ ಅವರಿಗಗೆ ಇಷ್ಟವಾದಂತಹಾ ಭಂಗಿಯಲ್ಲಿ ಕುಳಿತು ತಮ್ಮ ಕೊನೆಯುಸಿರೆಳೆಯುತ್ತಾರೆ,. .ಸದಾನಂದನ ಮಾತುಕೇಳಿನನ್ನ ಎದೆ ಜಲ್ಲ್ ಎಂದಿತ್ತು .. 

ಗಟ್ಟಿಮಾಡಿಕೊಂಡು ಅವನ ಮಾತುಗಳನ್ನು ಪ್ರಸಾದದಂತೇ ಸ್ವೀಕರಿಸಿದೆ.. 

  

#ದೀಪಗಳ ಬೆಳಕಿನ ಮನೆ 

ಜೀಪು ಆ ದೊಡ್ಡದಾಗಿದ್ದ ಬಂಗಲೆಯ ಮುಂದೆ ನಿಂತಿತು… 

ಆ ಮನೆಯ ಮುಂದಿನ ಗಾಂಭರ್ಯತೆಯನ್ನು ಮೌನತರಂಗವನ್ನ ವರ್ಣಿಸಿ ಹೇಳಲು ನನಗೇ ಸಾಧ್ಯವಾಗುತ್ತಿಲ್ಲ..ನಾವು ಜೀಪು ಇಳಿದು ಹೊಳಗೆ ಹೋದೆವು.ಒಂದುರೀತಿಯ ಸುಗಂಧದದಪರಿಮಳವು ನಮ್ಮನ್ನು ಆಕರ್ಷಿಸಿತ್ತು 

  

ಮನೆಯಹೊಳಬಾಗದಲ್ಲಿ ಹಲವು ದೀಪಗಳು ಬೆಳಗುತ್ತಿದ್ದವು ಮಾರ್ನಾಲ್ಕು ಜನ ಜನಿವಾರ ಧರಿಸಿದ್ದ ಬ್ರಾಹ್ಮಣರ ಗುಂಪು ಕೆಲವು ಹಳೆಯಗ್ರಂಥಗಳನ್ನು ಓದುವುದರಲ್ಲಿ ಮಗ್ನರಾಗಿದಂತಿತ್ತು .  ನಮ್ಮತ್ತಾ ನೋಡಿದ ಒಬ್ಬ ಬ್ರಾಹ್ಮಣನು ತನ್ನ ಜನಿವಾರವನ್ನು ಹಿಡಿದು ಮೈಮೇಲೇ ಸಿರಿಸಿಕೊಳ್ಳುತ್ತಾ .. 

ಸದಾನಂದ್ ಜೀ ಬನ್ನಿ ..ಎಂದು ಆತ್ಮೀಯವಾಗಿ ಕರೆದರು.. 

ನಾವು ಅಲ್ಲಿಯೇ ಇದ್ದ ಬೆತ್ತದ ಚೇರುಗಳಮೇಲೆ ಕುಳಿತವು.. 

ಉದ್ದವಾಗಿ ಜಡೆಬಿಟ್ಟುಕೊಂಡು ಮೀಸೆಬೋಳಿಸಿಕೊಂಡಿದ್ದ ಒಬ್ಬ ಜುಬ್ಬದಾರಿಯು ನಮಗೇ ತಂಪಾದಪಾನೀಯವನ್ನು ಕುಡಿಯಲು ಕೊಟ್ಟನು ನಾವು ಆ ಪಾನೀಯವನ್ನು ಕುಡಿದೆವು ಕ್ಷಣಾರ್ಧದಲ್ಲಿ ಪ್ರಯಾಣದ ಆಯಾಸವು ಮಾಯವಾಗಿ ಮೈಮನಗಳು ಗಾಳಿಯಲ್ಲಿ ತೇಲುವಂತಹಾ ಅನುಭವವಾಗಿತು..ಜನಿವಾರಧಾರಿಯೊಬ್ಬ ಬಾಬಾರು ಕರೆಯುತ್ತಿದ್ದಾರೇ ಬನ್ನಿ ಸದಾನಂದ್ ಜೀ ಎಂದು ಕರೆದರು. 

  

ಸದಾನಂದನ ಹಿಂದೆ ನಾನೂ ಅಮರೇಶ.ಹಾಗೂ ಜೀಪಿನ ಡ್ರೈವರ್ ಗೋಪಾಲ ಮೂರುಜನರೂ ದೊಡ್ಡ ಕೊಠಡಿಯೊಂದರ ಹೊಳಹೋದೆವು ..ಅಲ್ಲಿ ಸಣ್ಣಬೆಳಕಿನಲ್ಲಿ ದೀಪವೊಂದು ಬೆಳಗುತ್ತಿತ್ತು ..ಆ ದೀಪದ ಬೆಳಕಿನಲಿ ಕಂಗೊಳಿಸುವ ಕಣ್ಣುಗಳ .ಸುಂದರ ಮುಖಾರವಿಂದದ ಆಕರ್ಷಕ ದೇಹ ದಾರ್ಡೇಯ ಹೊಂದಿದ್ದ ವ್ಯಕ್ತಿಯೊಬ್ಬರು ಧ್ಯಾನ ಭಂಗಿಯಲ್ಲಿ ಕುಳಿತ್ತಿದ್ದರು ಅವರ ಅಗಲವಾದ ಹಣೆಯಮೇಲೆ ಉದ್ದವಾದಕೆಂಪು ನಾಮವೊಂದನ್ನು ಧರಿಸಿದ್ದರು ಕುತ್ತಿಗೆಗೇ ಹಲವುರೀತಿಯ ವಿಚಿತ್ರವಾದ ಮಾಲೆಗಳನ್ನು ಧರಿಸಿದ್ದರು..ಪ್ರಕಾಶಮಾನವಾದ ಅಗಲವಾದ ಕಣ್ಣುಗಳು.ಅವರ ಅಗಲವಾದ ಭುಜಗಳು ದಷ್ಟಪುಷ್ಟ ಬಾಹುಗಳು ..ನಿಜಕ್ಕೂ ಯಾವ ಕಸರತ್ತಿನ ಯುವಕನೂ ಅವರ ಮುಂದೆ ಸಮವಲ್ಲವೆಂಬಂತೆ ಕಂಡರು ಅವರೇ ಬಾಬಾ ಮಹಾರುದ್ರರು ನಾವುಗಳು ಆ ರೂಮಿನ ಹೊಳಗೋದ ಕೂಡಲೇ ...ಸದಾನಂದ ತನ್ನ ಎರಡೂ ಕೈಗಳನ್ನು ಮೇಲೆತ್ತಿ ಆಕಾಶಕ್ಕೆವಂಧಿಸಿ ಮತ್ತೆ ಬಾಗಿ ತನ್ನ ಪಾದಗಳ ಮುಂದೆ ಮಣಕೈಗಳನ್ನು ಊರಿ ತನ್ನ ಬಲದಕಾಲನ್ನು ಹಿಂದೆ ಚಾಚಿ ನಂತರ ಎಡದಕಾಲನ್ನು ಹಿಂದಕ್ಕೆ ಚಾಚಿ ಹಣೆಯನ್ನು ಬಾಬಾರ ಪಾದಗಳಿಗೆ ಸ್ಪರ್ಶಿಸಿದನು ನಂತರ ತನ್ನ ಕಾಲುಗಳನ್ನು ಸ್ವಲ್ಪಮುಂದೆ ತಂದು ಮಂಡಿಗಳನ್ನು ನೆಲಕ್ಕೆತಾಗಿಸಿ ಸುಮಾರು ಒಂದು ನಿಮಿಷಗಳ ಕಾಲ ಹಾಗೆಯೇ ಧ್ಯಾನಿಸಿದನು . 

  

ಬಾಬಾರು ಸದಾನಂದನ ತಲೆಯನ್ನು ಸವರುತ್ತಾ ಮುಖವನ್ನು ದೃಷ್ಟಿಸಿನೋಡಿದರು.. 

ನಾವುಗಳೆಲ್ಲರೂ ಸಹಾ ಸದಾನಂದನ ಶೈಲಿಯಲ್ಲೇ ಬಾಬಾರಿಗೆ ವಂಧಿಸಿದೆವು .ಕೆಲವು ಕ್ಷಣಗಳೂ ಹಾಗೆಯೇ ಮೌನ .ನಂತರಾ ಸದಾನಂದನು ಬಾಬಾಜೀ ಇವರೇ ನನ್ನ ಮಿತ್ರ ಎಂದು ನನ್ನತ್ತ ಕೈತೋರಿಸಿದ ..ಏಕೆಂದರೇ ನನ್ನ ಜೊತೆ ಇದ್ದ ಅಮರೇಶ ಹಾಗೂ ಡ್ರೈವರ್ ಗೋಪಾಲನ ಪರಿಚಯವು ಬಾಬಾರಿಗೇ ಈ ಮೊದಲೇ ಇದ್ದಂತಿತ್ತು..ನನ್ನತ್ತ ನೋಡಿದ ಬಾಬಾರವರು 

ವೆಲ್ ಕಮ್ ಯಂಗ್ ಮ್ಯಾನ್ ..ಆರ್ ಯು ಒಕೇ ಎಂದು ಪ್ರಶ್ನಿಸಿದರು… 

ನಾನೂ ಹೌದೂ ಬಾಬಾಜೀ ಐ ಯಾಮ್ ಹ್ಯಾಪೀ ಟೂ ಮೀಟ್ ಯೂ ಎಂದೆ. 

ಬಾಬಾಜಿವರು ಎದ್ದು ನನ್ನ ಭುಜದಮೇಲೆ ತಮ್ಮ ಬಲಗೈ ಇಟ್ಟು ವೆರೀಗುಡ್ಡ್…ಸದಾನಂದ ನಿನ್ನ ಬಗ್ಗೆ ಹೇಳಿದ್ದಾನೆ ..ತುಂಬಾ ಸಂತೋಷ ..ಸತ್ಯವು ಜನರನ್ನು ಆಕರ್ಷಿಸಬೇಕು .ಸತ್ಯವನ್ನು ಅರಿಯುವ ಕುತೂಹಲವು ಜನರಲ್ಲಿರಬೇಕು.ಆಗ ತಾನಾಗಿಯೇ ಜನ ಸತ್ಯದೆಡೆಗೆ ಓಡೋಡಿ ಬರುತ್ತಾರೆ.ಅಂಧಕಾರವು ತುಂಭಿರುವ ವ್ಯಕ್ತಿಗೇ ಜಗದ ಸತ್ಯವೂ ಆಕರ್óಣೀಯವಾಗಿ ಕಾಣಿಸುವುದಿಲ್ಲ..ಅದೊಂದು ಭ್ರಮೆಯೆಂದು ಜಾರಿಕೊಳ್ಳುತ್ತಾರೆ..ಸಾದಾರಣ ಕಣ್ಣುಗಳಿಂದ ನಾವು ಸತ್ಯವನ್ನು ನೋಡಲಾಗುವುದಿಲ್ಲ 

ಅದಕ್ಕೆ ಹಲವು ಕಠಿಣ ಪರಿಶ್ರಮ ಬೇಕು .ಪ್ರಯೋಗಗಳನ್ನು ಮಾಡಬೇಕು..ಆಯಸ್ಸುಮುಗಿಯುವ ವರೆವಿಗೂ ಜೀವಿಸಿರುವುದಷ್ಟೇ ಮುಖ್ಯವಲ್ಲ..ಈ ಪ್ರಕೃತಿಯ ಎಷ್ಟು ಸತ್ಯವನ್ನು ನೀನು ಅರಿತುಕೊಂಡೆ..ಎಷ್ಟು ಶಕ್ತಿಯನ್ನು ನಿನ್ನದಾಗಿಸಿಕೊಂಡೇ ಇವೆಲ್ಲವೂ ಮುಖ್ಯ..ಎಂದು ಮೃದುವಾದ ಧ್ವನಿಯಲ್ಲಿ ಹೇಳಿದರು.. 

ನನಗೇ ಅವರ ಧ್ವನಿಯು ಒಂದುರೀತಿಯಲ್ಲಿ ಅಶರಿರವಾಣಿಯಂತೇ ಕೇಳಿಸುತ್ತಿತ್ತು.. 

ಒ ಕೇ ನೀವೆಲ್ಲರೂ ಸಿದ್ದರಾಗಿ ಈ ದಿನ ಸಂಜೆ ನಾಲ್ಕರ ವೇಳೆಗೇ ನಾವೆಲ್ಲರೂ ಶಿಭಿರದತ್ತ ಹೊರಡೋಣ ಆರರವೇಳೆಗೇ ನಾವಲ್ಲಿಗೇ ತಲಪುತ್ತೇವೆಂದು ಹೇಳಿ ನಮ್ಮನ್ನು ಆ ಕೊಠಡಿಯಿಂದ ಬೀಳ್ಕೊಟ್ಟರು..ನಾವು ಮತ್ತೆ ವಿಶಾಲವಾದ ಹಜಾರದಲ್ಲಿ ಕುಳಿತೆವು.. 

ಮತ್ತೆ ಅದೇ ಜುಬ್ಬದಾರಿಯು ಅಗಲವಾದ ಎಲೆಯೊಂದರ ಮೇಲೆ ಉಪ್ಪಟ್ಟಿನಂತಹಾ ಒಂದುರೀತಿಯ ಆಹಾರವನ್ನು ತಿನ್ನಲು ಕೊಟ್ಟನು ..ತಿಂದೆವು ತುಂಬಾ ರುಚಿಕರವಾಗಿತ್ತು ಆದರದು ಖಂಡಿತಾ ಉಪ್ಪಿಟ್ಟಂತೂ ಅಲ್ಲವೇ ಅಲ್ಲ.. ನೋಡು ನೋಡುತ್ತಿದ್ದಂತೇಯೇ ನಾಲ್ಕೈದು ಜೀಪುಗಳು ನಾಲ್ಕೈದು ಕಾರುಗಳೂ ಮನೆಯ ಮುಂದೆ ಬಂದು ನಿಂತವು ಅವುಗಳಿಂದ ಸುಮಾರು ಇಪ್ಪತ್ತಕ್ಕಿಂತಲೂ ಹೆಚ್ಚು ಜನರು ವಿಚಿತ್ರವಾಗಿ ವೇಶಭೂಷಣ ಧರಿಸಿದ್ದ ಜನರು ಬಂದು ಬಾಬಾರ ಕೊಠಡಿಯೊಳಗೆ ಹೋಗಲು ಸಾಲಾಗೀ ನಿಂತರು.. 

  

ಸದಾನಂದ ಹೇಳಿದಾ … 

ಇವರೆಲ್ಲರೂ ನಮ್ಮ ಶಿಭಿರಾರ್ಥಿಗಳೇ ನೂರಾರು ಜನರು ನಾನಾ ಕಡೆಗಳಿಂದ ಅಲ್ಲಿಗೆ ಬರುತ್ತಾರೇ .ಹಲವಾರು ಮಹಿಳೆಯರೂ ಅಲ್ಲಿರುತ್ತಾರೆ..ಶಿಭಿರದ ಸಿದ್ದತೆಯೂ ಕಳೆದ ಹದಿನೈದು ದಿನಗಳಿಂದಲೂ ನೆಡೆದಿರುತ್ತದೆ..ಈ ದಿನ ರಾತ್ರಿ ಹಲವು ಹೋಮ ಯಾಗಗಳಿರುತ್ತವೆ..ಹಾಗೂ ಕೆಲವು ಪ್ರಯೋಗಗಳೂ ಇರುತ್ತವೆ ..ನಾಳೆ ಹಗಲಲ್ಲೂ ಸಹಾ ಪ್ರಚಂಡಶಕ್ತಿಯನ್ನುಗ್ರಹಿಸುವ ಧ್ಯಾನ ನೀನೆಂದೂ ಕೇಳಿರದಂತಹಾ ಅಪುರೂಪದ ಪ್ರವಚನ .ಕೊನೆಯಲ್ಲಿ . ಶವಭಕ್ಷಣೆ. ಮುಂತಾದವುಗಳಿರುತ್ತವೆ ನಾಳೆ ರಾತ್ರಿಯೇ ..ಶಿಭಿರದ ಬಹುಮುಖ್ಯವಾದ ಕರ್ಯಕ್ರಮ ವಿರುತ್ತದೆ . 

ನೀನೆಂದೂ ಕೇಳಿರದಂತಹಾ ಸಂಗೀತವನ್ನು ಕೇಳಬಹುದೂ ..ಹಾಗೂ ಕೊನೆಯಲ್ಲಿ ಆತ್ಮಶಕ್ತಿಯ ಪರೀಕ್ಷೆ ..ಅರ್ಥಾತ್ ತಾಂತ್ರಿಕ್ ಸೆಕ್ಸ್ ..ಈ ಪರೀಕ್ಷೆಯಲ್ಲಿ ವಿಫಲರಾದವರನ್ನು ಮುಂದೆಂದೂ ಅಘೋರಿಗಳ ಆಚರಣೆಯನ್ನು ಮಾಡದಂತೇ ಹೇಳಿ ಹೊರಹಾಕುತ್ತಾರೇ ಹಾಗೂ ಕೆಲವೊಮ್ಮೆ ಕಠಿಣ ಶಿಕ್ಷೆಯೂ ಉಂಟೂ..ಅದರ ಸಂಪರ್ಣ ವಿವರವು ನಿನಗೇ ನಾಳೆ ರಾತ್ರಿಯೇ ತಿಳಿಯುವುದು ..ನೀನು ಈ ಎಲ್ಲಾ ಆಚರಣೆಗಳ .ಪ್ರಯೋಗಗಳ .ವೀಕ್ಷಕಮಾತ್ರ ..ಸುಮ್ಮನೇ ನೋಡಬೇಕು .ಅವುಗಳ ಉದ್ದೇಶ ಹಾಗೂ ಕ್ರಮಗಳನ್ನು ಕೇಳಿ ತಿಳಿದುಕೊಳ್ಳ ಬಹುದಷ್ಟೇ .ವಿನಃ ಯಾವುದೇ ಕಾರಣಕ್ಕೂ ಯಾವುದೇ ಪ್ರಯೋಗದಲ್ಲಿ ನೀನು ಬಾಗವಹಿಸುವಂತಿಲ್ಲ ಎಂದುಹೇಳಿದ . ..ನಾನು ..ಹೌದೆಂದು ಮೌನದಲ್ಲೇ ಸಮ್ಮತಿಸಿದೆ ನನ್ನ ಕುತೂಹಲವೂ ಮುಮ್ಮಡಿಗೊಂಡಿತು .ನಾನೂ ಸಹಾ ಕೇವಲ ಪ್ರಚಲಿತದಲ್ಲಿ ಬದುಕುವ ತತ್ವಕ್ಕೆ ಶರಣೆಂದೆ.ಸಂಜೆ ನಾಲ್ಕರ ವೇಳೆಗೇ ಬಾಬಾರ ಮಾರ್ಗದರ್ಶನದಂತೇ . ನಾವೆಲ್ಲರೂ ಮತ್ತೆ ಜೀಪನ್ನುಹತ್ತಿಕುಳಿತೆವು.. 

  

ದುರ್ಘಮ ಹಾದಿಯಲಿ ರೋಚಕ ಜರ್ನಿ 

  

ಹತ್ತಾರು ಜೀಪುಗಳು ಹತ್ತಾರು ಕಾರುಗಳು ..ಬಾಬಾ ಮಹಾರುದ್ರರು ಕುಳಿತ್ತಿದ್ದ ಕಾರು ಎಲ್ಲಕ್ಕಿಂತ ಮುಂದೆ ಇತ್ತು .. ಎಲ್ಲಾ ಜೀಪು ಕಾರುಗಳು ಹೊರಡತೊಡಗಿದವೂ..ನಾವು ಮೂರು ಜನರು ನಮ್ಮ ಮೊದಲಿನ ಜೀಪಿನಲ್ಲೇ ಕುಳಿತು ಅವರೊಂದಿಗೇ ಸಾಗಿದೆವು..ಆ ರಮಣೀಯ ದೃಷ್ಯವನ್ನು ಸಂಜೆಯ ಸೊಭಗನ್ನು ಪ್ರಕೃತಿಯ ಮೌನವನ್ನು ನೋಡುತ್ತಾ…ಓ ಪ್ರಕೃತಿಯೇ ಏನೆಲ್ಲಾ ಅಡಗಿಸಿಕೊಂಡಿರುವೇ ನಿನ್ನಯಾ ಈ ವಿಶಾಲ ಮಡಿಲಲ್ಲಿ ..ನಿನ್ನ ಶಕ್ತಿಯೇ ..ಅಂತಿಮ ..ಎಂದು ಆಲೋಚಿಸುತ್ತಾ ಪಯಣಿಸಿದ ಅದೊಂದು ರೀತಿಯಲಿ ನಿದ್ದೆ ಇರದಿದ್ದರೂ ನಿದ್ರಿಸುವಂತಹಾ ಸ್ಥಿತಿ ..ಅದೇ ಜೊಂಪಿನಲ್ಲೇ ಸೀಟಿನ ಹಿಂಬದಿಗೊರಗಿದೆ ಇಂತಹಾ ಕಾಡಿನಲ್ಲೂ ವಾಹನಗಳು ಚಲಿಸುವಂತಹಾ ದಾರಿಯನ್ನು ಪತ್ತೆಹಚ್ಚಿದವರಾದರೂ ಯಾರೆಂಬ ಪ್ರಶ್ನೆಯೂ ಸುಳಿಯುತ್ತಿತ್ತು..  ಯಾವುದೇ ಜೀಪಿನಲ್ಲಿನ ಯಾವ ಜನವೂ ಸಹಾ ಅನಗತ್ಯವಾಗಿ ಹರಟುತ್ತಿರಲಿಲ್ಲ ..ಎಲ್ಲರಲ್ಲೂ ಒಂದುರೀತಿಯ ಗಾಂಭೀರ್ಯತೆಯ ಮೌನವೂ ಆವರಿಸಿತ್ತು..ಸದಾನಂದ ಹೇಳಿದ . 

ಶಿಭಿರ ನೆಡೆಯುವ ಸ್ಥಳದವರೆವಿಗೂ ಜೀಪು ಹೋಗುವುದಿಲ್ಲ ಅದು ಇನ್ನೂ ಐದು ಕಿಲೋಮೀಟರ್ ಇರುವಾಗಲೇ ಎಲ್ಲಾ ವಾಹನಗಳು ನಿಲ್ಲುತ್ತವೇ ಅಲ್ಲಿಂದ ಮುಂದೇ ನೆಡೆದು ಹೋಗಬೇಕು…ಶಿಭಿರದ ಸ್ಥಳದ ನಾಲ್ಕು ದಿಕ್ಕುಗಳಲ್ಲಿಯೂ ನೂರಾರು ವಾಹನಗಳು ಹೀಗೆಯೇ ನಿಂತಿರುತ್ತವೇ .ಯಾವ ದಾರಿಯಿಂದಲೂ ವಾಹನವು ಶಿಭಿರದ ಸ್ಥಳಕ್ಕೆ ಹೋಗುವುದಿಲ್ಲ..ಎಲ್ಲಾ ವಾಹನಗಳ ಡ್ರೈವರ್ ಗಳು ತಮ್ಮ ವಾಹನಗಳ ಹತ್ತಿರವೇ ಇರುತ್ತಾರೇ ಅವರಿಗೂ ಸಮಯಕ್ಕೆ ಸರಿಯಾಗೀ ಊಟ ಮತ್ತು ನೀರನ್ನು ಪೂರೈಸಲಾಗುತ್ತದೆ…ಶಿಭಿರದೊಳಗೆ ಎಲ್ಲರಿಗೂ ಪ್ರವೇಶವಿರುವುದಿಲ್ಲ .   ನೀನು ಆಶ್ಚರ್ಯ ಚಕಿತನಾಗುತ್ತೀಯ ..ಹೆಸರಾಂತ ಸಿನಿಮಾತಾರೆಯರು .ರಾಜಕಾರಣಿಗಳು .ಕ್ರೀಡಾಪಟುಗಳು. ವಿದೇಶಗಳಲ್ಲಿನ ಜನರೂ ಸಹಾ ಶಿಭಿರದಲ್ಲಿರುತ್ತಾರೆ..
ಆದರೇ ಅವರನ್ನಯಾರನ್ನೂ ನೀನು ಅನಗತ್ಯವಾಗಿ ಹೆಚ್ಚಿನ ಪ್ರಶ್ನೆಕೇಳುವಂತಿಲ್ಲ .ನಿನಗೇ ಸೂಕ್ತರೆನಿಸಿದವರನ್ನು ಪರಿಚಯಮಾಡಿಕೊಂಡು ಮಾತನ್ನಾಡುವುದು ತಪ್ಪೇನಿಲ್ಲ.. 

ನನಗೇ ಆಶ್ಚರ್ಯವಾಯಿತು ….ಅವರೂ ಈ ಪ್ರಯೋಗಗಳಲ್ಲಿ ಬಾಗವಹಿಸುತ್ತಾರೆಯೇ..? ಮುಗ್ಧವಾಗಿ ಕೇಳಿದೆ..ಇಲ್ಲಾ ಅವರು ಯಾವುದೇ ಪ್ರಯೋಗಗಳಲ್ಲಿ ಬಾಗವಹಿಸುವುದಿಲ್ಲ .. 

ತಮ್ಮ ಎನರ್ಜಿ ಪೀಡರ್ ಗಳಾಗಿರುವ ಹಿರಿಯ ಅಘೋರಿಗಳಿಂದ ತಮ್ಮ ದೇಹ ಮತ್ತು ಮನಸ್ಸನ್ನು ಪುನಃಶ್ಚೇತನ ಗೊಳಿಸಿಕೊಳ್ಳಲು ಬಂದಿರುತ್ತಾರೇ .. 

ಎಂದು ಉತ್ತರಿಸಿದ ನಾನೂ ಮತ್ತೆ ಪ್ರಶ್ನಿಸಿದೆ . 

ಇಂತಹಾ ಕಾರ್ಯಕ್ರಮಗಳಿಗೆ ಹಣಕಾಸಿನ ವ್ಯವಸ್ತೆಯನ್ನು ಹೇಗೆ ಮಾಡಲಾಗುತ್ತದೆ…? 

ಸಾವಿರಾರೂ ಸೆಲೆಬ್ರೆಟಿಗಳು .ರಾಜಕಾರಣಿಗಳು.ಉಧ್ಯಮಿಗಳು ಕ್ಯೋಟ್ಯಾಂತರ ರೂಗಳ ಹಣವನ್ನು ಇಂತಹಾ ಕಾರ್ಯಕ್ರಮಗಳಿಗೆ ನೀಡುತ್ತಾರೆ ಅಘೋರ ಸಂಪ್ರದಾಯದ ಆಚಾರ ವಿಚಾರಗಳನ್ನು ತಿಳಿದಿರುವ ತಂತ್ರಜ್ಣರುಗಳು ..ಹೀಗೆ ನೆಡೆಯುವ ಕಾರ್ಯಕ್ರಮಗಳಿಗೇ ಈ ಹಣವನ್ನು ಬಳಸಿಕೊಂಡು ಅಗತ್ಯವಿರುವ ವ್ಯವಸ್ತೆಯನ್ನು ಕಲ್ಪಸುತ್ತಾರೆ. 

ಇಲ್ಲಿ ಹಣಕಾಸಿನ ಕೊರತೆ ಸಮಸ್ಯೆಯೆಂಬುದು ಬರುವುದೇ ಇಲ್ಲಾ.. ಕೋಟ್ಯಾಂತರ ರೂಪಾಯಿಗಳನ್ನು ಒಂದೇ ದಿನದಲ್ಲಿ ಸಂಗ್ರಹಿಸುವಂತವರು ಈ ಸಂಘಟನೆಯಲ್ಲಿದ್ದಾರೆ ಅದಕ್ಕಾಗಿಯೇ ಕಾರ್ಯನಿರತವಾಗಿರುವ..
ಸಾಂಸ್ಥಿಕ ವ್ಯವಸ್ತೆ ಇದೆ… ಪ್ರಯೋಗ ನಿರತ ಅಘೋರಿಗಳು, .ಬಾಬಾರವರು ಹಣಕಾಸಿನ ವಿಷಯಗಳಿಗೇ ತಲೆಹಾಕುವುದಿಲ್ಲ..ಅವರಿಗೆ ಯಾವುದೇ ಲೋಪದೋಶವಿಲ್ಲದಂತಹಾ ವ್ಯವಸ್ತೆ ಇರಬೇಕಷ್ಟೇ.. 

ಹಲವಾರು ಸಂಘ ಸಂಸ್ತೆಗಳು ಮುಂದೆನಿಂತು ಹಣಕಾಸಿನ ವ್ಯಸ್ತೆ ಹಾಗೂ ಸಿದ್ದತಾ ಕಾರ್ಯಗಳನ್ನು ಮಾಡುತ್ತವೆ.  ಸದಾನಂದನ ಮಾತುಕೇಳಿ ..ನನ್ನ ಕುತೂಹಲವೂ ದ್ವಿಗುಣಗೊಂಡಿತ್ತು..ಮುಂದೆ ಹೋಗುತ್ತಿದ್ದ ಜೀಪುನಿಂತಿತು ನಿಧಾನವಾಗಿ ಎಲ್ಲಾ ವಾಹನಗಳೂ ಸುರಕ್ಷಿತಸ್ಥಳಗಳಲ್ಲಿ ನಿಂತವು…ಎಲ್ಲಾ ವಾಹನಗಳ ಹೊಳಗಿದ್ದ ಜನರು ಕೆಳಗಿಳಿದು ಹತ್ತಿರದಲ್ಲೇ ಹರಿಯುತ್ತಿದ್ದ ನದಿಯಲ್ಲಿ ಕೈಕಾಲು ತೊಳೆದುಕೊಂಡರು ಬಾಬಾರವರ ಮಾರ್ಗದರ್ಶನದಂತೆ ಕಾಡುದಾರಿಯಲ್ಲಿ ನೆಡೆಯಲಾರಂಬಿಸಿದೆವು. ಕಣ್ಣಿಗೆ ಕಾಣುವಷ್ಟು ದೂರವೂ ಹಸಿರಿನಿಂದ ಕಂಗೊಳಿಸುವ ಮರಗಳು ಬಳ್ಳಿಗಳು .ಸಂಜೆ ಗೂಡಿಗೆ ಮರಳುತ್ತಿರುವ ಪಕ್ಷಿಗಳು ..ಬೆಟ್ಟಗುಡ್ಡಗಳು ದಾರಿಯ ಪಕ್ಕದಲ್ಲೇ ಜಿಲುಪುವ ಝರಿಗಳು . 

  

#ದಾರಿಯ ಪಕ್ಕದ ಮರದಲ್ಲಿದ್ದ ಸಾವಿರಾರು ಜೇನುಗೂಡುಗಳು 

ನಾವು ನೆಡೆಯುತ್ತಿದ್ದ ದಾರಿಯ ಪಕ್ಕದಲ್ಲಿದ ಬ್ರಹದಾಕಾರದ ಮರದ ರೆಂಬೆ ಕೊಂಬೆಗಳ ತುಂಬಾ ನೂರಾರು ಜೇನುಗೂಡುಗಳು ಕಂಡವು 

ಮರದ ಹೊಳಾಂಗದಲ್ಲಿ ಜೇನುಹುಳುಗಳು ಜುಯ್ ಎಂದು ಹಾರುವ ಶಬ್ಧವು ಒಂದು ವಿಶೇಷ ವಾದನದಂತೆ ಕೇಳಿಸುತ್ತಿತ್ತು... 

ಅದು ಯಾವ ಮರವೆಂದು ಗುರುತಿಸ ಯತ್ನಿಸಿದೆ ಸಾಧ್ಯವಾಗಲಿಲ್ಲ ಅಂತಹಾ ಮರಗಳನ್ನು ನಾನೆಲ್ಲೂ ಕಂಡಿರಲಿಲ್ಲ..ಕಾಡುಮರಗಳ ಜಾತಿಗೆ ಸೇರಿದ್ದ ನೂರಾರು ವರ್ಷ ಗಳ ಹಳೆಯ ಮರವದು.ಮರದಲ್ಲಿದ್ದ. ಆ ಜೇನುಗೂಡುಗಳನ್ನು ಕಂಡ ನನಗೆ ಪರಮಾಶ್ಚರ್ಯವಾಯ್ತು..... ಅಷ್ಟೊಂದು ಹುಳುಗಳು ಹೇಗೆ ತಮ್ಮ ಗೂಡನ್ನೇ ಹುಡುಕಿ ಕೂರುತ್ತವೆ..ಅವೆಲ್ಲಾ ಒಂದೇ ಮರದಲ್ಲಿ ಬಂದು ಏಕೆ ಜೋತುಬಿದ್ದಿವೆ..ಓ ಪೃಕೃತಿ ಮಾತಿ ನೀನೆಷ್ಟು ರೋಚಕ ಎಂದುಕೊಂಡು ಮುನ್ನೆಡೆದೆ ಸೂರ್ಯಾಸ್ತದ ಕೆಂಪು ಬಣ್ಣದ ಕಿರಣಗಳಿಂದ ಕಂಗೊಳಿಸುತ್ತಿದ್ದ ಕಾಡಿನ ನಡುವೇ ನೆಡೆಯುವ ಸುಂದರ ಅನುಭವವೂ ..ಇದನ್ನು ಸವಿಯುವ ..ಮೌನವೂ .. 

ಹೀಗೆಯೇ ಮೌನವಾಗಿ ನೆಡೆಯುತ್ತಾ ಕತ್ತಲು ಆವರಿಸಿತ್ತು.  ಆದರೂ ಸಹಾ ದಾರಿಯೂ ಸ್ವಷ್ಟವಾಗಿಯೇ ಗೋಚರಿಸುತ್ತಿತ್ತು..ಇನ್ನು ಸ್ವಲ್ಪವೇ ದೂರದಲ್ಲಿ ..ಬೆಳಕು..ಕಾಣಿಸಿತು.. 

ಸದಾನಂದ ಹೇಳಿದ ..ಅದೇ ನೋಡು ಶಿಭಿರವು ನೆಡೆಯುವ ಜಾಗ..ಇನ್ನುಕೆಲವೇ ನಿಮಿಷಗಳಲ್ಲಿ ನಾವು ಅಲ್ಲಿಗೇ ತಲಪುತ್ತೇವೇ .ಆ ಜಾಗದ ಹೆಸರು ಶಕ್ತಿ ಮಂಡಳ.. 

  

ನಿಗೂಡ ಪ್ರಪಂಚವದು 

ಸುಮಾರು ನೂರು ಎಕರೆಗಳಷ್ಟು ವಿಶಾಲವಾಗಿರುವ ಮೈದಾನದ. ಜಾಗವನ್ನು ಸುತ್ತಲೂ ಶಾಸ್ತ್ರೋಕ್ತವಾಗಿ ..ವಿವಿದ ವಿನ್ಯಾಸಗಳಿಂದ ಸಿದ್ದಪಡಿಸಿದ್ದಾರೆ..ಹಾಗೂ ಈ ಶಕ್ತಿಮಂಡಳದ ಪಾವಿತ್ರತೆಯನ್ನು ಹೆಚ್ಚಿಸಲು.ಇದರೊಳಗೇ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ಬೆಂಕಿಯ ಬುಗ್ಗೆಗಳು.  ಯಙ್ಣಕುಂಡಗಳು .ನೂರಾರೂ ಗುಡಿಸಲುಗಳು ಗುಡಾರಗಳು.ದೀಪಗಳು.ಅಸ್ವಷ್ಟವಾಗಿ ಗೋಚರಿಸುವ ನೂರಾರು ಜನರ ಓಡಾಟ…ಒಂದುರೀತಿಯ ಹೊಸ ಪ್ರಪಂಚ ಆ ಅಡವಿಯ ನಡುವಿನ ಮೈದಾನದಲ್ಲಿ. ನಿರ್ಮಾಣವಾಗಿತ್ತು.. .ಕೆಲವೇ ಕ್ಷಣಗಳಲ್ಲಿ ಶಕ್ತಿ ಮಂಡಳದ ದ್ವಾರಬಾಗಿಲನ್ನು ಪ್ರವೇಶಿಸಿದೆವು ಅಲ್ಲಿ ಹಸಿರು ಚಪ್ಪರದಿಂದ ದ್ವಾರಬಾಗಿಲನ್ನು ಸಿಂಗರಿಸಲಾಗಿತ್ತು..ಅಲ್ಲಿನ ನೆಲವನ್ನು ಸಗಣಿಯಿಂದ ಸಾರಿಸಿ .ವಿಚಿತ್ರವೆನಿಸುವಂತಹಾ ಬಣ್ಣ ಬಣ್ಣ ಗಳ ಚಿತ್ರಗಳರಂಗೋಲಿ ಬಿಡಿಸಲಾಗಿತ್ತು..ಶಾಸ್ತ್ರೋಕ್ತ ವಿನ್ಯಾಸಗಳು .ವಿಶೇಷ ದೇವತೆಗಳ ಚಿತ್ರಗಳು..ರುದ್ರ ನರ್ತನದ ಚಿತ್ರ ಇವುಗಳನೆಲ್ಲಾ .ನಾನು ಹಿಂದೆಂದೂ ನೋಡಿರದಷ್ಟೂ ಕಂಗೊಳಿಸುವಂತೆ ನೆಲದಮೇಲೆ ಬರೆಯಲಾಗಿತ್ತು.. ಶಕ್ತಿ ಮಂಡಳದ ಮಧ್ಯಬಾಗದಲ್ಲಿ ಸುಮಾರು ಇಪ್ಪತ್ತು ಅಡಿಗಳಷ್ಟು ಎತ್ತರದ ತಾಂಡವ ರುದ್ರನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಅದರ ಸುತ್ತಲೂ ದೂಪ ದೀಪಗಳು ಬೆಳಗುತ್ತಿದ್ದವು..ಕಾಡಿನ ತುಂಬೆಲ್ಲಾ ಕತ್ತಲು ಆವರಿಸುತ್ತಿತ್ತು ಆದರೇ ಶಕ್ತಿಮಂಡಳವು ವಿಚಿತ್ರವೆನಿಸುವ ಬೆಳಕಿನ ದೀಪಗಳಿಂದ ಕಂಗೊಳಿಸುತ್ತಿತ್ತು..ನಾವೂ ಸಹಾ ಒಂದು ಕುಟೀರದೊಳಗೆ ಹೋದೆವು ಅಲ್ಲಿ ಈಮೊದಲೇ ಮೂರ್ನಾಲ್ಕು ಜನರುಬಂದು ಕುಳಿತಿದ್ದರು…ನಾನೂ ಸಹಾ ಒಂದೆಡೆ ಕುಳಿತು ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದೆ..ಸಾಕೊಷ್ಟುಜನ ಯುವಕರು ಯುವತಿಯರು .ಅವರನ್ನ ನೋಡಲು ಯಾವುದೋ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಓದುವ ವಿದ್ಯರ್ಥಿಗಳಂತಿದ್ದರು .ಇವರೆಲ್ಲರೂ ಇಲ್ಲಿ ಏಕೆಬಂದಿದ್ದಾರೆ. 

ಇವರಿಗೂ ಅಘೋರಿಗಳಿಗೂ ಅಘೋರ ತತ್ವಕ್ಕೂ ಏನು ಸಂಬಂದ..ಕುತೂಹಲವೂ ಹಾಗೂ ಆಶ್ಚರ್ಯವೂ ಮೂಡತೊಡಗಿತು.. ಸ್ವಲ್ಪಸಮಯದ ನಂತರ ಕುಟೀರದ ಸುತ್ತ ಮುತ್ತ ತಿರುಗಾಡಿಕೊಂಡ .ಅಲ್ಲಿ ನೆರೆದಿರುವ ಜನರನ್ನೂ ಹಾಗೂ ಸಿದ್ದತೆಗಳನ್ನೂ ನೋಡತೊಡಗಿದೆ .. 

  

ವಾವ್....ಅಗೋ ನೋಡು .... 

ಅಲ್ಲಿರುವವರು ಬಾಲೀವುಡ್ಡ್ ಚಿತ್ರನಟ ………… 

ಅವರಲ್ಲವೇ ಸದಾನಂದನಿಗೆ ಕೇಳಿದೆ.  ಹೌದೂ ಅವರೇ ಅಂತಹಾ ನೂರಾರು ಸೆಲಬ್ರೆಟಿಗಳು ಇಲ್ಲಿ ನಿನಗೆ ಕಾಣಿಸಬಹುದು. ಅಗೋ ನೋಡು ಅಲ್ಲಿ ………….ಪಕ್ಷದ ರಾಷ್ಟ್ರೀಯ ನಾಯಕ …….. . . . .ಅಲ್ಲಿದ್ದಾರೆ. ಇಲ್ಲಿ ನೋಡು ವಿಶ್ವ ವಿಖ್ಯಾತ ಪುಟ್ಟ್ ಬಾಲ್ ಆಟಗಾರ…ಸದಾನಂದ ತೋರಿಸಿದಮಹಾನ್ ಸೆಲಬ್ರೆಟಿಗಳನ್ನು ನೋಡಿದಾಗ ನನ್ನ ಕಣ್ಣನ್ನೇ ನಾನು ನಂಬಲಾಗಲಿಲ್ಲ ಅವರೆಲ್ಲರೂ ಯಾವುದೇ ರಕ್ಷಣಾ ತಂಡದವರಿಲ್ಲದೇ ಒಂಟಿಯಾಗಿಯೇ ಓಡಾಡುತ್ತಿದ್ದರು ವಾಸ್ತವದಲ್ಲಿ ಜೆಡ್ಡ್ ಸೆಕ್ಯೂರಿಟಿಯನ್ನು ನೇಮಿಸಿಕೊಂಡಿರುವ ರಾಜಕಾರಣಿಗಳು ಸಹಾ ಅಲ್ಲಿದ್ದರು ..ಅವರೂ ಸಹಾ ಒಂಟಿಯಾಗಿಯೇ ಕುಳಿತಿದ್ದರೂ..ಮತ್ತೇ ಸದಾನಂದನಿಗೆ ಕೇಳಿದೆ.. ಇವರೆಲ್ಲರೂ ಇಲ್ಲಿ ಏನು ಮಾಡುತ್ತಾರೆ....? ಸದಾನಂದ ಉತ್ತರಿಸಿದ ಇವರುಗಳು ಯಾವುದೇ ಪ್ರಯೋಗದಲ್ಲಿ ಬಾಗವಹಿಸುವುದಿಲ್ಲ ಆದರೇ ಇವರೆಲ್ಲರಿಗೂ ಸಹಾ ಪ್ರತ್ಯೇಕವಾದ ಬಾಬಾಗಳಿದ್ದಾರೆ ಅವರು ಈ ರಾತ್ರಿ ಮಾಡುವ ಪ್ರಯೋಗಗಳಿಂದ .ಈ ಪ್ರಕೃತಿಯಿಂದ ಹೆಚ್ಚಿನ ಶಕ್ತಿಯನ್ನು ಗಳಿಸುತ್ತಾರೇ .ನಂತರಾ ಇವರುಗಳಿಗೇ ಅದನ್ನು ವರ್ಗಾಯಿಸುತ್ತಾರೆ..ಆದುದರಿಂದ ಅವರೆಲ್ಲರೂ ಸಹಾ ತಮ್ಮದೇ ಆದಂತಹಾ ಕ್ರಮಗಳನ್ನು ಅನುಸರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಾರೆ…ಅಲ್ಲಿ ನೋಡು ನಿನ್ನ ನೆಚ್ಚಿನ ಸೂಪರ್ ಸ್ಟಾರ್,,,,……..ಸದಾನಂದ ತೋರಿಸಿದ …ಓ ಮೈ ಗಾಡ್ ....ಇವರು …ಅವರೇಕೋಟ್ಯಾನುಕೋಟಿ ಅಭಿಮಾನಿಗಳ ಹೃದಯ ಗೆದ್ದಿರುವ ಸೂಪರ್ ಸ್ಟಾರ್ ….. . . . .ನನಗಂತೂ . . . . . . .ಅವರನ್ನು ಅಷ್ಟು ಅತ್ತಿರದಿಂದ ನೋಡುವ ಅವಕಾಶವು ದೊರೆಯುವುದೆಂದು ಎಂದೂ ಭಾವಿಸಿರಲಿಲ್ಲ …ಅಷ್ಟೇ ಅಲ್ಲಾ ಜಗತ್ತಿನ ಮನೆ ಮಾತಾಗಿರುವ ಹಲವಾರು ಕ್ರಿಕೇಟ್ ಆಟಗಾರರೂ ಸಹಾ ಅಲ್ಲಿ ಬಿಳಿಪಂಜೆ ಹಾಗೂ ಬಿಳೀ ಬನೀಯನ್ ಗಳಲ್ಲಿ ಕಂಗೊಳಿಸುತ್ತಿದ್ದರು ಆದರೇ ಅವರುಗಳು ಪರಸ್ಪರ ಮಾತನ್ನಾಡದೇ ತಮ್ಮ ಪಾಡಿಗೆ ತಾವು ಕೆಲವು ಕ್ರಿಯೆಗಳಲ್ಲಿ ನಿರತರಾಗಿದ್ದರೂ….ಎಲ್ಲಿ ಏನು ನೆಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿರಲ್ಲಿಲ್ಲ ..ಒಂದೆಡೆ ಯಙ್ಣ ಕುಂಡಗಳು ಉರಿಯುತ್ತಿದ್ದವೂ ಮಂತ್ರಘೋಷಗಳು ಮೊಳಗುತ್ತಿದ್ದವೂ ..ವಿಚಿತ್ರ ವಾಧ್ಯಗಳು ..ಕೆಲರು ಭಯಾನಕ ರೂಪಿನ ಜನರು ಆ ತಾಳವಾದ್ಯಗಳಿಗೆ ತಕ್ಕಂತೆ ಕುಣಿಯುತ್ತಿದ್ದರು..ಕಾಡಿಗೆ ಕಾಡೇ ಒಂದು ರೀತಿಯಲ್ಲಿ ಮಾದಕ ಸುಘಂಧ ದ್ರವ್ಯದಿಂದ ಘಮಘಮಿಸಲಾರಂಬಿಸಿತು….ಪಕ್ಕದಲ್ಲೇ ಇದ್ದ ತಿಳಿನೀರಿನ ಕೆರೆಯಲ್ಲಿ ಕೆಲವರು ನೀರಿನ ಮೇಲೆಕುಳಿತು ತೇಲುತ್ತಿದ್ದರು… ಕೆಲವರು ನೀರಿನ ಮೇಲೆಯೇ ಮಲಗಿ ತೇಲುತ್ತಿದ್ದರು..ಇನ್ನೂ ಕೆಲವರು ನೀರಿನ ಮೇಲೆ ನೃತ್ಯಮಾಡುತ್ತಿದ್ದರು… 

ನನಗೇ ಒಮ್ಮೆಗೇ ಆ ವಿಸ್ಮಯವನ್ನು ಸಂವೇದಿಸಿಕೊಳ್ಳುವುದು ಸ್ವಲ್ಪ ಕಷ್ಟವೆನಿಸಿದಂತಾಯ್ತು ನಾನು ಮತ್ತೆ ಕುಟೀರಕ್ಕೆ ಬಂದೆ.. 

  

  

#ಮ್ಯಾಜಿಕ್ ಆನ್ ಮ್ಯೂಜಿಕ್ 

  

ಸದಾನಂದ ಗುಂಪಿನಲ್ಲಿ ಲೀನವಾದ ..ಕುಟೀರದ ಮುಂದಿದ್ದ ಜಗುಲಿಯ ಮೇಲೇ ಕುಳಿತು ಕಣ್ಣಿಗೇ ಕಾಣಿಸುವಷ್ಟುದೂರ ನೆಡೆಯುತ್ತಿರುವ ವಿಸ್ಮಯಗಳನ್ನು ನೋಡುತ್ತಿದ್ದೇ 

ಯಾರೋ ಬಂದು ಬೆನ್ನು ತಟ್ಟಿದರೂ ..ನೋಡಿದರೇ ಬಾಬಾ ಮಹಾರುದ್ರರೂ ….ವೈ ಮ್ಯಾನ್ ..ವೈ ಡಿಡ್ಡ್ ಯೂ ಸಿಟ್ಟ್ ಹಿಯರ್ . 

ಕಮ್ ವಿತ್ ಅಸ್..ನೀನು ಹಿಂದೆದೂ ನೋಡಿರದಂತಹಾ ವಿಸ್ಮಯಗಳನ್ನು ಇಂದು ನೀನು ನೋಡಬಹುದು..ಅಂದ ಹಾಗೆ ನಿನಗೇ ಸಂಗೀತ ಕೇಳುವುದು ತುಂಬಾ ಇಷ್ಟವೆಂದು ಹೇಳಿದ್ದೇ ಅಲ್ವೇ …ಬಾ ಈ ದಿನ ನೀನು ಹಿಂದೆಂದೂ ಕೇಳಿರದಂತಹಾ ಮ್ಯೂಸಿಕ್ ಕೇಳಬಹುದುಅಷ್ಟೇ ಏಕೆ ...ಟು ಡೇ ಯು ಕೆನ್ ಸೀ ದ ಮ್ಯೂಸಿಕ್. 

ಯು ಕೆನ್ ಟಚ್ಚ್ ದ ಮ್ಯೂಸಿಕ್ .ಸ್ಮೆಲ್ ದ. ಮ್ಯೂಸಿಕ್ ..ಫಿಲ್ ದ ರಿಯಾಲಿಟಿ ಆಪ್ ದ ಮ್ಯೂಸಿಕ್ …ಎಂದು ಹುರುಪಿನಿಂದ ಪ್ರೋಸ್ಥಾಹಿಸಿದರೂ..ನಾನೂ ಬಾಬಾರ ಹಿಂದೆ ಹೋದೆ ಗುಂಪೊಂದರ ಮದ್ಯೆ ಸೇರಿಕೊಂಡೆ ಬಾಬಾರವರು ಎಲ್ಲಿ ಮರೆಯಾದರೋ ನನಗೆ ತಿಳಿಯಲಿಲ್ಲ...ಯಙ್ಣಕುಂಡವೊಂದರಿಂದ ಘಮ ಘಮಿಸುವ ಧೂಮವು ಸುತ್ತಲೂ ಆವರಿಸುತ್ತಿತ್ತು ದೂರದಿಂದ ಯಾವುದೋ ಒಂದುರೀತಿಯ ಮನಸ್ಸನ್ನು ಚುಚ್ಚಿ ಹೊಕ್ಕುವಂತಹಾ ನಾದವು ಕೇಳಿಸುತ್ತಿತ್ತು ..ಅದೂ ಕೆಲವೇ ನಿಮಿಷಗಳಲ್ಲಿ ಮೈ ಮನಗಳನ್ನು ಮದದಿಂದ ಜಡ್ಡು ಗಟ್ಟಿಸುವಂತಹಾ ..ವಿಶೇಷ ನಾದಗಳಂತೆ ಹೊರಚುಮ್ಮುತ್ತಿತ್ತು … 

ಏನೋ ಒಂದು ರೀತಿಯ ತರಂಗಗಳು ಚಿತ್ರ ವಿಚಿತ್ರವಾಗಿ ನನ್ನ ದೇದೇಹದ ಸುತ್ತಲೂ ಸುತ್ತಿಕೊಂಡಂತೇ ಭಾಸವಾಗುತ್ತಿತ್ತು ..ಅಲ್ಲಿದ್ದವರೆಲ್ಲರೂ …ನಾದಕ್ಕೆ ತಕ್ಕಂತೇ ಕುಣಿಯುತ್ತಿದ್ದರು ನಾನು ಆ ತರಂಗಗಳನ್ನು ಕೈ ನಿಂದಾ ಟಚ್ಚ್ ಮಾಡಿದೇ ಹೌದೂ ರಿಯಲೀ ಐ ಫಿಲ್ ದ ಟಚ್ಚ್ …ಹಾವಿನಷ್ಟೂ ಮೃದುವಾದ ವಸ್ಥುವನ್ನು ಮುಟ್ಟಿದ ಅನುಭವವೂ ನನಗಾಯ್ತು…ಕ್ರಮೇಣ ಆ ನಾದವು ದೂ ದೂರ ಚಲಿಸಿದಂತಾಯ್ತು ಅಲ್ಲಿನ ಪ್ರತೀ ಘಟನೆಗಳನ್ನು ನೋಡುವುದರಿಂದ ನನ್ನ ದೇಹವು ಕ್ರಮೇಣ ಹಗುರವಾಗುತ್ತಾ ಹೋಯ್ತು -ನನಗೆ ದೇಹವೇ ಇಲ್ಲ ಆದರೂ ನಾನಿದ್ದೇನೆ ನಾನು ಗಾಳಿಯಲ್ಲಿ ತೇಲುತ್ತಿದ್ದೇನೆ- ಆತ್ಮನ ಅಸ್ಥಿತ್ವವನ್ನು ದೃಡಪಡಿಸುವ ಸ್ವ ಅನುಭವಕ್ಕೆ ತರುವ ಅಭೂತಪೂರ್ವ ಕ್ಷಣಗಳಲ್ಲಿ ನಾನು ಲೀನನಾದೆ 

ಎಂತಹಾ ರೋಚಕ ಮನಃ ಸ್ಥಿತಿ ಇದು- 

ಇಂತಹಾ ಅನುಭವವವೂ ನನ್ನ ಜೀವಮಾನದಲ್ಲೇ ಆಗಿರಲಿಲ್ಲ- ಯಾವ ಅರವಳಿಕೆಯ ಮದ್ದು ಸಹಾ- ಈ ಮಟ್ಟದಲ್ಲಿ ದೇಹದ ಸಂವೇದನೆಯನ್ನು ನಿಶ್ಕ್ರಿಯ ಗೊಳಿಸುವುದರ ಬಗ್ಗೆ ನೋಡಿರಲಿಲ್ಲ-ಕೇವಲ ಒಂದೇ ಒಂದು ಗಂಟೆಗಳ ಕಾಲ ನಾನು ಅಲ್ಲಿಯೇ ಇದ್ದರೆ ನಾನು ಇದ್ದೇನೆ ಎಂಬಂತಹಾ ಸಂವೇದನೆಯೇ ಉಂಟಾಗುತ್ತಿರಲಿಲ್ಲ ನನ್ನನ್ನೇ ನಾನು ಮರೆಯುತ್ತಿದ್ದೆ -ಆದರೆ ಕೆಲವೇ ಕ್ಷಣಗಳಲ್ಲಿ ನಿದಾನವಾಗಿ ನನ್ನ ದೇಹದ ಪ್ರತೀಯೊಂದು ಅಂಗಾಂಗಗಳ ಅರಿವು ಮೂಡತೊಡಗಿತು - ನನ್ನ ದೇಹಕ್ಕೆ ಆಗಿನ್ನೂ ಹೊಸ ಜೀವ ಬಂದಂತಾಯ್ತು- 

  

(ನಿಮಗೆ ಇಂತಹಾ ಅಭೂತ ಪೂರ್ವ ಮನಃ ಸ್ಥಿತಿಯ ಸ್ಪಷ್ಟತೆಯು ಕಲ್ಪನೆಯು ಮೂಡಿದ್ದರೆ ಕೆಲ ಕಾಲ ಹಾಗೆಯೇ ಇಂತಹುದೇ ಮನಃ ಸ್ಥಿತಿಯಲ್ಲಿರಿ - ನಿಮ್ಮ ದೇಹವನೊಮ್ಮೆ ಮರೆತು ಧ್ಯಾನಿಸಿ ಕೆಲಕಾಲದ ನಂತರವೇ ಓದನ್ನು ಮುಂದುವರೆಸಿ) 

ಕಣ್ಣುಗಳು ಒಂದು ರೀತಿಯಲ್ಲಿ ಮಂಜು ಮಂಜಾಗಿದ್ದವುನನ್ನಿಂದ ಅಲ್ಲಿ ಹೆಚ್ಚು ಕಾಲ ನಿಲ್ಲಲಾಗಲಿಲ್ಲ …ನಾನು ಆ ಜನರ ಗುಂಪಿನಿಂದ ಹೊರ ಬಂದೆ .. 

ಗುಂಪಿನಲ್ಲಿದ್ದವರು ವಿಚಿತ್ರವೆನಿಸುವ ಭಂಗಿಗಳಲ್ಲಿ ಆಸನಗಳನ್ನು ಹಾಕುತ್ತಾ ಕುಣಿಯುತ್ತಾ..ಮಂತ್ರಗಳನ್ನು ಪಟಿಸುತ್ತಾ .ಯಜ್ಣಕುಂಡವೊಂದರ ಮುಂದೆ ..ಪೂಜೆಗೆ ಸಿದ್ದರಾಗುತ್ತಿದ್ದರು. ನಾನೂ ಇನ್ನೂ ಸಲ್ಪ ಮುಂದೆ ಹೋದೆ.... 

#ಹುಚ್ಚನಂತೆ ಕುಣಿಯುತ್ತಿದ್ದ ಒಬ್ಬ ಅಘೋರಿ 

ಉದ್ದವಾದ ಸಣಕಲು ಶರೀರದ ಜಡೆಬಿಟ್ಟಿದ್ದ ವ್ಯಕ್ತಿಯೊಬ್ಬ ಹುಚ್ಚನಂತೆ ಅಪೂರ್ಣ ಶಭ್ಧಗಳನ್ನು ಮಾಡುತ್ತಾ ಕುಣಿಯುತ್ತಿದ್ದ ಅವನನ್ನು ನೋಡಿದರೇ ಇವನೂ ಸಹಾ ಒಬ್ಬ ಅಘೋರಿಯೇ ಎಂದೆನಿಸಿದರೂ ಸಹಾ ಇಂತಹಾ ವರ್ತನೆಗಳು ಅಘೋರಿಗಳಲ್ಲಿ ಏಕೆ ಬರುತ್ತವೆ .? .ಎಂಬ ಪ್ರಶ್ನೆ ನನ್ನನ್ನು ಕಾಡಹತ್ತಿತು...ಈ ಹಿಂದೆಯೂ ಸಹಾ .ಈ ತರಹದ ವೇಶದಾರಿಗಳು ಹುಚ್ಚರಂತೆ ರ್ತಿಸುವುದನ್ನೂ ಹಲವು ಕಡೆ ಕಂಡಿದ್ದೆ...ಅದರ ನೆನಪುಗಳೂ ಸಹಾ ನನ್ನ ಕುತೂಹಲವನ್ನು ಹೆಚ್ಚಿಸಿದ್ದವು.....ಇರಲಿ ..ಅವಕಾಶ ಸಿಕ್ಕಿದಾಗ ಬಾಬಾಜಿಯವರನ್ನೇ ಕೇಳಿ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳೋಣವೆಂದು ಸುಮ್ಮನಾದೆ...ನನ್ನಂತೆಯೇ ಇನ್ನೂ ಕೆಲವರೂ ದಿಕ್ಕುತೋಚದಂತೇ ನಿಂತಿದ್ದವರನ್ನು ಕಂಡೇ ಅವರ ಬಳಿ ಹೋಗಿ ನಾನೂ ನಿಂತು …ಕೆಲ ಸಮಯಗಳ ನಂತರಾ ಅವರ ಮಾತುಗಳಿಗೇ ಕಿವಿಕೊಟ್ಟೆ …ಅಲ್ಲಿದ್ದವರಲ್ಲಿ ಕೆಲವರು ಮೆಡಿಕಲ್ ಸ್ಟೂಡೆಂಟ್ಸ್ ಮತ್ತೆ ಕೆಲವರು ಐ ಐ ಟಿ -ಐ ಐ ಎಮ್ .. ಸ್ಟೂಡೆಂಟ್ಸ್ ಇದ್ದರು--ಅವರೊಂದಿಗಿದ್ದ ಕೆಲವರ-ಕನ್ನಡದಲ್ಲಿಯೇ ಮಾತನ್ನಾಡುತ್ತಿದ್ದರು ..ನನಗೆ ಅವರನ್ನು ಮಾತನ್ನಾಡಿಸಿ ಪರಿಚಯಿಸಿಕೊಳ್ಳೊಣ ವೆನಿಸುತು ..ಹೋ ನೈಸ್ ಟು ಮೀಟ್ ಯೂ …ನೀವು ಈ ಕಾರ್ಯಕ್ರಮವನ್ನು ನೋಡಲು ಬಂದಿರುವವರೋ ಅಥವಾ ಪ್ರಯೋಗಕ್ಕೆ ಬಂದಿರುವವರೋ..?ಅವರು ತುಂಬಾ ಸಂತೋಷದಿಂದ ಉತ್ತರಿಸಿದರು ನಾವು ಇನ್ನೂ ಮೂರು ಕಾರ್ಯಕ್ರಮಗಳಲ್ಲಿ ಬಾಗವಹಿಸಿದ ನಂತರವಷ್ಟೇ ಪ್ರಯೋಗಗಳಲ್ಲಿ ಬಾಗವಹಿಸಬಹುದು ಇದು ನಾವು ಆರನೆಯಬಾರಿ ಬರುತ್ತಿರುವುದೆಂದು ಉತ್ತರಿಸಿದರು.. ನೀವು ಯಾವ ಊರಿನವರು . ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಲ್ಲಿ ನಿಮ್ಮನ್ನು ಕಾಣುತ್ತಿರುವ ಬಗ್ಗೆ ನನಗೇ ತುಂಬಾ ಕುತೂಹಲವಿದೆ ಇಪ್ ಯೂ ಡೋಂಟ್ ಮೈಂಡ್ ಉತ್ತರಿಸುವಿರಾ..? ಒ ಕೇ - ವೈ ನಾಟ್ ,,.ಪ್ಲೀಸ್ ಸಿಟ್ ಇಯರ್ ..ಬನ್ನಿ ಇಲ್ಲಿಯೇ ಕುಳಿತು ಮಾತನ್ನಾಡೋಣ..ಮೃದುವಾಗಿ ಉತ್ತರಿಸಿದರು… 

ನಾವು ಭಾರತೀಯ ತತ್ವ ಮೀಮಾಂಸೆ ಯನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಭಾರತೀಯರ ಆಚರಣೆಗಳು ಹಾಗೂ ಅವುಗಳ ತಾತ್ವಿಕ ಹಿನ್ನೆಲೆಯನ್ನು ಪ್ರಾಯೋಗಿಕವಾಗಿ ತಿಳಿಯಲು ನಾವಿಲ್ಲಿ ಬಂದಿದ್ದೇವೆ 

ಪೃಕೃತಿಯಲ್ಲಿನ ಹೆಚ್ಚಿನ ಶಕ್ತಿಯನ್ನು ..ಸ್ವಾಧೀನ ಪಡಿಸಿಕೊಳ್ಳುವ ತಂತ್ರಗಳು ವಿಶ್ವಾದ್ಯಂತ ಬೇರೇ ಬೇರೇ ರೀತಿಯಲ್ಲಿ ಬಳಕೆಯಲ್ಲಿವೆ.ಭಾರತೀಯ ಈ ಅಘೋರ ಪಂಥವೂ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಿದೆ ಹಾಗೂ ಇಡೀ ವಿಶ್ವಕ್ಕೇ ಅದರ ಫಲಿತಾಂಶವನ್ನು ನೀಡಿದೆ.ಇಂತಹಾ ವಿಷಯಗಳಲ್ಲಿ ಆಸಕ್ತಿ ಇರುವವರು ಮಾತ್ರ ಇಲ್ಲಿ ಬಂದಿದ್ದಾರೆ ..ನಾವುಗಳು ಸಹಾ ಇಂತಹಾ ವಿಷಯಗಳ ಜಿಜ್ಣಾಸುಗಳೆ ಎಂದು ಉತ್ತರಿಸಿದರು …ನಾನೂ ಸಹಾ ನನ್ನ ಪರಿಚಯ ಹಾಗೂ ನಾನಿಲ್ಲಿಗೆ ಬಂದ ಪರಿಯನ್ನು ಹೇಳಿದೆ..ಅವರೂ ಖುಷಿಪಟ್ಟರು ಇಲ್ಲಿ ಇನ್ನೂ ಯಾವ ಯಾವ ಕಾರ್ಯಕ್ರಮಗಳು ನೆಡೆಯುತ್ತಿವೆ …ನಾನೇ ಪ್ರಶ್ನಿಸಿದೆ ..ನಾವುಗಳಿಲ್ಲಿ ಕೇವಲ ಒಂದು ಗುಂಪನ್ನು ನೋಡುತ್ತಿದ್ದೇವೆ ..ಇಂತಹಾ ಹತ್ತಾರು ಗುಂಪುಗಳು ಈ ಶಕ್ತಿಮಂಡಳದೊಳಗೆ ಹಲವುರೀತಿಯ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ ..ನಾವು ಏಕ ಕಾಲದಲ್ಲಿ ಎಲ್ಲವನ್ನೂ ನೋಡಲಾಗುವುದಿಲ್ಲ..ಈ ಶಕ್ತಿ ಮಂಡಳದ ಒಂದು ವಿಶೇಷತೆ ಏನಂದರೇ ಈ ಮಂಡಳದ ವ್ಯಾಪ್ತಿಯಲ್ಲಿರುವ ಎಲ್ಲರ ಬಗ್ಗೆಯೂ ಎಲ್ಲರಿಗೂ ಅಘಾದವಾದಂತಹಾ ನಂಭಿಕೆಯು ಇರುತ್ತದೇ ಹೀಗಾಗೀ ನೀವು ಅಥವಾ ನಾವೂ ಇಲ್ಲಿರುವ ಎಲ್ಲಾ ಗುಂಪುಗಳ ಪ್ರಯೋಗಗಳನ್ನು ವೀಕ್ಷಿಸ ಬಹುದು ..ಹೀಗೇ ಎಲ್ಲವೂ ಅರ್ಥವಾದ ನಂತರವಷ್ಟೇ ,,ನಾವು ಪ್ರಯೋಗಗಳಿಗೆ ಅರ್ಹರೋ ಇಲ್ಲವೋ ಎನ್ನುವ ಬಗ್ಗೆ ಪರೀಕ್ಷೆಯನ್ನು ಒಡ್ಡುತ್ತಾರೆ ಆ ಪರೀಕ್ಷೆಯಲ್ಲಿ ನಮ್ಮ ಆತ್ಮಸಂಯಮದ ಸಾಮಥ್ರ್ಯವನ್ನು ಸಾಭಿತು ಪಡಿಸಿದರಷ್ಟೇ ಮುಂದಿನ ದಿನಗಳಲ್ಲಿ ಪ್ರಯೋಗಗಳಲ್ಲಿ ಬಾಗವಹಿಸ ಬಹುದು..ನನಗೆ ಕುತೂಹಲವೂ ಹೆಚ್ಚಾಯ್ತು …ಆತ್ಮ ಸಂಯಮವನ್ನು ಸಾಭೀತು ಪಡಿಸುವ ಪರೀಕ್ಷೆಯೇ ..ಅದು ಏನು ಪ್ರಶ್ನಿಸಿದೇ ..ಅಘೋರ ಸಿದ್ದಾಂತದ .ಆಚರಣೆಗಳ ಶುದ್ದ ವಿವರಗಳನ್ನೂ ಆಸಕ್ತರಿಗೇ ಹಾಗೂ ಅವುಗಳನ್ನು ಗೌರವಿಸುವವರಿಗೇ ಹೇಳುವುದೂ ಒಂದು ಧರ್ಮದ ಕೆಲಸ ಆದುದರಿಂದ ನಿಮಗೇ ವಿವರವಾಗಿ ಹೇಳುತ್ತೇನೆ..ಕೇಳಿ. ಎಂದು ಉದ್ದವಾಗಿಯೇ ಗಡ್ಡ ಬಿಟ್ಟಿದ್ದ ಸುಂದರ ಯುವಕನೊಬ್ಬ .ವಿವರಿಸಲು ಮುಂದಾದ.  ನಾನು ನನ್ನ ಆಸಕ್ತಿಯನ್ನು ಕಣ್ಣುಗಳಿಂದಲೇ ವ್ಯಕ್ತಪಡಿಸಿದೆ ..ಅದೂ ತಾಂತ್ರಿಕ್ ಸೆಕ್ಸ್ .. 

ಸದಾನಂದನು ಈ ಹೆಸರನ್ನು ಬಳಸಿದ್ದು ನೆನಪಾಯ್ತು ಬಟ್ ಅವರ ಅದರಯಾವುದೇ ವಿವರಣೆಯನ್ನು ನೀಡಿರಲಿಲ್ಲ ..ತಿಳಿಯುವ ಕುತೂಹಲ ಮೊದಲಿನಿಂದಲೂ ಇತ್ತು..ಅವನು ಹೇಳಿದ್ದನ್ನು ಕೇಳಿ ನಾನು ಯಾವ ಭಾವನೆಯನ್ನು ವ್ಯಕ್ತಪಡಿಸಬೇಕೆಂಬುದೇ ತಿಳಿಯಲಿಲ್ಲ- 

  

#ತಾಂತ್ರಿಕ್ ಸೆಕ್ಸ್ 

ಅಘೋರಿಗಳ ಬಗ್ಗೆ ನನಗಿದ್ದ ಕುತೂಹಲಗಳನ್ನು ತಣಿಸಿಕೊಳ್ಳಲು ಸುಮಾರು ವರ್ಷಗಳ ಹಿಂದೆಯೇ ನಾನು ಓದಿದ್ದ ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ ಪುಸ್ತಕದ ತಾಂತ್ರಿಕ್ ಸೆಕ್ಸ್ -ಎಂಬ ಅಧ್ಯಾಯವು ನನ್ನ ಕಣ್ಣ ಮುಂದೆ ಬಂತು 

ನಾನು ಹಿಂದೆಂದೋ ಓದಿದ ತಾಂತ್ರಿಕ್ ಸೆಕ್ಸ್ ನ ವಿಷಯವನ್ನು ಕಣ್ಮುಂದೆ ತಂದುಕೊಂಡೆ-ತಾಂತ್ರಿಕ್ ಸೆಕ್ಸ್ ಎಂಬುದು ಅಘೋರ ಪಂಥವನ್ನು ಸ್ವೀಕರಿಸುವ ಮುನ್ನವೇ ಅರ್ಹತೆಯನ್ನು ಪರೀಕ್ಷಿಸುವ ಒಂದು ಪ್ರಯೋಗ ಪರೀಕ್ಷೆ ..ಪೃಕೃತಿಯಿಂದ ಅಪರಿಮಿತ ಶಕ್ತಿಯನ್ನು ಆಸ್ವಾದಿಸಲು ದೇಹ ಮತ್ತು ಮನಸ್ಸುಗಳು ಸಂಯಮದಿಂದಿರುವುದೂ ಅತ್ಯಗತ್ಯ ,ಹೀಗಾಗೀ ಅರಿಷಡ್ವರ್ಗ ಗಳನ್ನು ನಿಯಂತ್ರಿಸದೇ ಹೊರೆತು ಪವಿತ್ರವಾದಂತಹಾ ಶಕ್ತಿಯು ಲಭಿಸದು.. ಇದು ಕಾಮಕೇಳಿಯಲ್ಲ .ಇದೊಂದು ಪ್ರಯೋಗವಷ್ಟೇ .. 

ಆದರೇ ಈ ಪ್ರಯೋಗದಲ್ಲಿ ಗಂಡು ಮತ್ತು ಹೆಣ್ಣಿನ ಜನನೇಂದ್ರಿಯಗಳನ್ನೇ ಬಳಸಲಾಗುತ್ತದೇ ಅರ್ಥಾತ್ ಹೀಗಾಗಲೇ ಹಲವು ರೀತಿಯಲ್ಲಿ ದೇಹ ಹಾಗೂ ಮನಸುಗಳನ್ನು ಹಸನುಗೊಳಿಸಿಕೊಂಡಿರುವ .ಶಿಬಿರಾರ್ಥಿಗಳು ಅಂತಿಮ ಪರೀಕ್ಷೆಗೇ ಆಯ್ಕೆಯಾಗಿರುತ್ತಾರೆ ಹೀಗೇ ಪರೀಕ್ಷೆಯಲ್ಲಿ ಬಾಗವಹಿಸುವ ಮುನ್ನವೇ ಆತ್ಮ ಸಂಯಮ ಹಾಗೂ ಹಠಯೋಗದ ಬಗೆಗಿಗಿನ ಹಲವು ತತ್ವಗಳನ್ನು ಅಧ್ಯಯನ ಮಾಡಿರಲೇ ಬೇಕು. ಸಂಬಂದಿಸಿದ ಈ ತಾತ್ವಿಕ ಜ್ಣಾನವನ್ನು ಹೊಂದಿರುವುದನ್ನು ದೃಡ ಪಡಿಸಿಕೊಂಡನಂತರವಷ್ಟೆ.
ಈ ಪ್ರಯೋಗಕ್ಕೇ ಬಾಬಾರವರು ಆಯ್ಕೆ ಮಾಡುತ್ತಾರೆ .. 

ಈ ಪರೀಕ್ಷೆಯಲ್ಲಿ ನೂರಾರು ಜೋಡಿ ತರುಣ ತರುಣಿಯರು ಬಾಗವಹಿಸಿರುತ್ತಾರೆ 

ನಿಗದಿಪಡಿಸಿದ ಸ್ಥಳದಲ್ಲಿ ಹಲವು ಬಾಬಾರ ಸಮ್ಮುಖದಲ್ಲಿ ಅವರೆಲ್ಲರೂ ಬೆತ್ತಲಾಗಿ ವಿಶೇಷ ಸಂಗೀತಕ್ಕೆ ಹೆಜ್ಜೆಹಾಕುತ್ತಾ ..ತರುಣ ತರುಣಿಯರು ಪರಸ್ಪರ ಬೆತ್ತಲೆ ದೇಹವನ್ನು ಆಲಂಗಿಸಿಕೊಂಡು ನೃತ್ಯಮಾಡುತ್ತಾರೆ .. 

ಕೆಲ ಸಮಯದ ನೃತ್ಯದ ನಂತರ ಆ ಜೋಡಿಗಳು ಸಂಭೋಗ ಕ್ರಿಯೆಯಲ್ಲಿ ತೊಡಗುತ್ತಾರೇ ಆದರೇ ಈ ಕ್ರಿಯೆಯಲ್ಲಿ .ಲೈಂಗಿಕ ಸಂವೇಧನೆಯನ್ನು ಅನುಭವಿಸುವಂತಿಲ್ಲ . . 

ಹೆಣ್ಣಾಗಲೀ ಗಂಡಾಗಲೀ ಸ್ಖಲನಮಾಡಿಕೊಳ್ಳುವಂತಿಲ್ಲ. ಅವರ ದೇಹವು ನಿರ್ಲಿಪ್ತತೆಯ ಪರಮಾವದಿಯಲ್ಲಿರಬೇಕು ಏಕಾಗ್ರಚಿತ್ತರಾಗಿ ದೇಹ ಮನಸುಗಳ ಸಂಯಮವನ್ನು ಕಾಪಾಡಿಕೊಳ್ಳಬೇಕು ..ಹೀಗೇ ಸುಮಾರು ಮೂರು ಗಂಟೆಗಳ ಕಾಲ ನೆಡೆಯುತ್ತದೆ …. 

ಹೀಗೆ ಮಾಡುತ್ತಿರುವಾಗ ಅವರಲ್ಲಿ ಯಾವುದೇ ಕಾಮುಕ ಪ್ರಚೋದನೆಗಳು ಭಾವನೆಗಳು ಮೂಡಬಾರದು.. ಹಿರಿಯ ಬಾಬಾಗಳು ಆ ಜೋಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ....ಒಂದು ವೇಳೆ ಪ್ರಚೋದಿತರಾದ ಸಣ್ಣ ಲಕ್ಷಣವೂ ಕಂಡುಬಂದರೂ ಆ ಜೋಡಿಯನ್ನು ಪರೀಕ್ಷೆಯಿಂದ ಅನುತ್ತೀರ್ಣಗೊಳಿಸುತ್ತಾರೆ..ಹಾಗೂ ಮುಂದಿನ ಪರೀಕ್ಷೆಗಳಲ್ಲಿ ಮತ್ತೊಷ್ಟು ಪಕ್ವತೆಯೊಂದಿಗೆ ಬರಲು ಸೂಚಿಸುತ್ತಾರೆ.ಒಬ್ಬ ವ್ಯಕ್ತಿಯು ಗರಿಷ್ಟ ಮೂರು ಯತ್ನಗಳಲ್ಲಿ ಈ ಪ್ರಯೋಗದಲ್ಲಿ ಬಾಗವಹಿಸಬಹುದಷ್ಟೇ . 

ಅನಂತರವೂ ಅವನು ತನ್ನ ಪಕ್ವತೆಯನ್ನು ಪ್ರಸರ್ಶಿಸದಿದ್ದಲ್ಲಿ ಅಥವಾ .ಸ್ಖಲಿಸಿಕೊಂಡಲ್ಲಿ 

ಅವನು/ಳು ..ಮುಂದಿ ಇನ್ನೇಂದಿಗೂ ಸಹಾ ಇಂತಹಾ ಶಿಭಿರಗಳಗಳಲ್ಲಿ ಬಾಗವಹಿಸುವಂತಿರಲಿಲ್ಲ ಈ ಹಿಂದೆ ಹೀಗೇ ಅನುತ್ತೀರ್ಣರಾದ ಪುರುಷರ ಜನನೇಂದ್ರಿಯವನ್ನು ಕತ್ತರಿಸಿ ಹಾಕುತ್ತಿದ್ದರು ಇಂತಹಾ ಪ್ರಯೋಗದಲ್ಲಿ ಉತ್ತೀರ್ಣ ರಾದವರಿಗೇ ಸಾಕ್ಷಾತ್ ಶಿವನೆ ಅಂದರೇ ರುದ್ರನೇ ದೀಕ್ಷೆಯನ್ನು ನೀಡಿ ..ಮುಂದಿನ ಆಚರಣೆಗಳು ಹಾಗೂ ಪ್ರಯೋಗಗಳಲ್ಲಿ ಬಾಗವಹಿಸಿ ಬ್ರಹ್ಮಾಂಡದ ಶಕ್ತಿಯನ್ನು ಆಸ್ವಾದಿಸಲು ಆಶಿರ್ವದಿಸುತ್ತಾನೆಂಬ ಭಲವಾದ ನಂಬಿಕೆಯು ಇಲ್ಲಿದೆ ..ಸ್ವತಃ ಶಿವನೇ ಈ ತಾಂತ್ರಿಕ್ ಸೆಕ್ಸ್ ಅಂದರೇ ತಾಂತ್ರಿಕ ಸಂಭೊಗವಿದ್ಯೆಯ ಗುರುವೆಂದು.ನಂಬಲಾಗಿದೆ 

(ಇದಕ್ಕೆ ಸಂಬಂದಿಸಿದ ಹೆಚ್ಚಿನವಿವರಗಳು ಶಿವಪುರಾಣ ಗ್ರಂಥದಲ್ಲಿ ಉಲ್ಲೇಖವಾಗಿವೆ) 

( ತಾಂತ್ರಿಕ್ ಸೆಕ್ಸ್ ನ ಪರಿಕಲ್ಪನೆಯನ್ನು 

ಸುರೇಶ್ ಸೋಮಪುರ ಅವರ ಅಘೋರಿಗಳು ಕಾದಂಬರಿಯಿಂದ ಸಂಗ್ರಹಿಸಲಾಗಿದೆ)ಈ ಪ್ರಯೋಗವು ನಾಳೆ ನೆಡೆಯಲಿದೆ…ಆದರೇ ಇದನ್ನು ನಾವುಗಳು ನೋಡುವಂತಿಲ್ಲ ಹಿರಿಯ ಬಾಬಾಗಳಷ್ಟೇ ಅಲ್ಲಿರುತ್ತಾರೆ ..ಹಠಯೋಗದ ಇನ್ನುಳಿದ ಪ್ರಯೋಗಗಳನ್ನು ನೋಡಬಹುದಷ್ಟೆ..ಅವರಮಾತನ್ನು ಕೇಳಿ ನನಗಂತೂ ಏನು ಹೇಳಬೇಕೆಂದು ತೋಚಲಿಲ್ಲ..ಆದರೂ ಅವರ ಸ್ವಷ್ಟ ಹಾಗೂ ಸಂಕ್ಷಿಪ್ತ ವಿವರಣೆಗೆ ಧನ್ಯವಾದಗಳನ್ನು ಹೇಳಿ 

ಮತ್ತೊಂದು ಗುಂಪಿನತ್ತ ಹೆಜ್ಜೆ ಹಾಕಿದೆವು…ಅಲ್ಲಿ ಸದಾನಂದನಿದ್ದ ..ವಾಟ್ ಯೂ ಫೀಲ್ ಎಂದು ಭುಜ ತಟ್ಟಿದ .ಆ ಗುಂಪಿನಲ್ಲಿ ಶೂನ್ಯದಲ್ಲಿ ಬೆಂಕಿಯನ್ನು ಸೃಷ್ಟಿಸುವಾ ಹಾಗೂ ..ದೂರದಲ್ಲಿರು ವಸ್ತು ಹಾಗೂ ವ್ಯಕ್ತಿಗಳ ಮೇಲೇ ಹಿಡಿತವನ್ನು ಸಾಧಿಸುವ ವಿಧ್ಯೆಗೆ ಸಂಬಂದಿಸಿದ ಪ್ರಯೋಗಗಳು ನೆಡೆಯುತ್ತಿದ್ದವು …..ನಾನು ನಿನ್ನ ಸ್ವತಂತ್ರಕ್ಕೆ ದಕ್ಕೆಃ ಬರಬಾರದೆಂದು ನಿನ್ನೊಬ್ಬನನ್ನೇ ಬಿಟ್ಟು ಬಂದಿರುವೆ.. 

ನೀನು ನಿನಗಿಷ್ಟವಾದ ಯಾವುದೇ ಗುಂಪಿನಲ್ಲಿ ನೆಡೆಯುವ ಪ್ರಯೋಗಗಳನ್ನು ನೋಡು … 

ನೋ ಪ್ರಾಬ್ಲಮ್ಮ್ ..ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಮಹಾಕುಟೀರದಲ್ಲಿ ಬಾಬಾ ಮಹಾರುದ್ರರ ಪ್ರವಚನವು ಆರಂಬವಾಗಲಿದೇ ಬಾ ಅಲ್ಲಿಗೇ ಹೋಗೋಣ ಎಂದು ಕರೆದುಕೊಂಡು ಹೋದ.  ಅಲ್ಲಿ ನೂರಾರು ಜನರು ವಿಚಿತ್ರವೇಶ ಭೂಷಣಗಳ ಸಾದೂ ಸಂತರು.ಮಹಿಳೆಯರು.ಯುವಕ ಯುವತಿಯರು.ಸೆಲೆಬ್ರೆಟಿಗಳು ನೆಲದ ಮೇಲೆ ಕುಳಿತು ಪ್ರವಚನ ಕೇಳುತ್ತಿದ್ದರು ..ನಾನು ಸದಾನಂದನನ್ನು ಪ್ರಶ್ನಿಸಿದೇ ನಾವು ಸಂಜೆ ನೋಡಿದ ..ಆ ಸೆಲಬ್ರೆಟಿಗಳು ಎಲ್ಲಿದ್ದಾರೇ ಏನುಮಾಡುತ್ತಿದ್ದಾರೆ ..?  ಅವನು ಉತ್ತರಿಸಿದ ..ಅವರೆಲ್ಲರೂ ಪೂರ್ವನಿಗದಿಯಂತೇ ಅವರವರ ಬಾಬಾಗಳಿಂದಾ ಶಕ್ತಿ ಆಸ್ವಾದನಾ ಯಾಗದಲ್ಲಿ ಬಾಗವಹಿಸುತ್ತಾರೆ..ಅವರಿಗೆಲ್ಲ ಪ್ರತ್ಯೇಕ ಜಾಗ ಹಾಗೂ ವ್ಯವಸ್ಥೆಗಳಿರುತ್ತವೆ ಹೀಗೇ ಅವರು ಬಾಬಾರಿಂದ ಶಕ್ತಿಯನ್ನು ಆಸ್ವಾದಿಸೊಕೊಳ್ಳುವಾಗ ಬೇರೆಯವರು ಅಲ್ಲಿ ಹೋಗುವುದಿಲ್ಲ ಅವರ ಉದ್ದೇಶವು ಮುಗಿದ ಬಳಿಕ ಅವರೆಲ್ಲರೂ ವಾಪಸಾಗುತ್ತಾರೆ .. 

  

ಇಂತಹಾ ಕಾರ್ಯಕ್ರಮಗಳು ಈ ದಿನ ಮುಂಜಾನೆಯಿಂದ ನಾಳೆ ಮುಂಜಾನೆಯವರೆವಿಗೂ ನೆಡೆಯುತ್ತಲೇ ಇರುತ್ತವೆ ನಂತರ ಪ್ರವಚನದತ್ತ ಗಮನ ನೆಟ್ಟೆವು ..ಅಧ್ಭುತ ಸಿದ್ದಾಂತಗಳು ಸೃಷ್ಟಿಯ ರಹಸ್ಯಗಳು..ವಿಜ್ಣಾನಕ್ಕೆ ಸವಾಲೆನಿಸುವ ವಿಷಯಗಳು ಪ್ರವಚನದಲ್ಲಿದ್ದವು.. ನಾನು ಹಿಂದೆಂದೂ ಅಂತಹಾ ವಿಷಯಗಳನ್ನು ಓದಿರಲಿಲ್ಲ ಹಾಗೂ ಕೇಳಿರಲಿಲ್ಲ ನೂರಾರು ಜನರು ಮೂಖ ವಿಸ್ಮಿತರಾಗಿ ಪಂಜುಗಳ ಬೆಳಕಿನಲ್ಲಿ .ಕುಳಿತು ಬಾಬಾರವರ ಪ್ರವಚನವನ್ನು ಆಲಿಸುತ್ತಿದ್ದರು… 

  

#ಬಾಬಾಜಿಯವರ ಪ್ರವಚನ.... 

(ಬಾಬಾಜಿಯವರು ವಿವಿದ ಭಾಷೆಗಳನ್ನು ಬಳಸಿ ತಮ್ಮ ಪ್ರವಚನದಲ್ಲಿ ಹೇಳಿದ್ದನ್ನು ಕನ್ನಡಕ್ಕೆ ಅನುವಾದಿಸಿ ಹೇಳುವ ಪ್ರಯತ್ನ ಮಾಡಿರುತ್ತೇನೆ) 

ಬಾಬಾಜಿ ಹೇಳುತ್ತಿದ್ದರು..... 

ಅವರ ಕಂಚಿನ ಕಂಠದ ಗಾಂಭೀರ್ಯದ ದ್ವನಿಯು ಯಾವುದೇ ಮೈಕ್ ಇಲ್ಲದೇ ಅಲ್ಲಿದ್ದ ಎಲ್ಲರಿಗೂ ಸ್ವಷ್ಟವಾಗಿ ಕೇಳಿಸುತ್ತಿತ್ತು....ನಿಶಬ್ಧ ಮತ್ತು ಬಾಬಾಜಿಯವರ ಮಾತುಗಳನ್ನು ಹೊರೆತು ಪಡಿಸಿ ಬೇರೇ ಯಾವ ಶಬ್ಧವೂ ಅಲ್ಲಿರಲಿಲ್ಲ...ಮನುಷ್ಯ ಗಳಿಸುವ 

ಜ್ಙಾನವನ್ನು .ತಂತ್ರಜ್ಙಾನವನ್ನು .ಶ್ರೇಯಸ್ಸು ಹಾಗೂ ಯಶಸ್ಸುಗಳನ್ನು... 

ಮನೋಶಕ್ತಿಯನ್ನು..ನಿರಂತರ ಅಭ್ಯಾಸಗಳಿಂದ ಹಠಯೋಗದ ಪ್ರಯೋಗಳಿಂದ...ಅವಿರತ ಪ್ರಯತ್ನಗಳಿಂದ ಗಳಿಸುವುದು.ದೊಡ್ಡ ಸಂಗತಿಯಲ್ಲ...ಅವುಗಳನ್ನು ಜೀರ್ಣಿಸಿಕೊಳ್ಳುವುದೂ ಅಷ್ಟೇ ಮುಖ್ಯ.. ಅವುಗಳೆಲ್ಲವೂ ಮನಸಿನಾಳದಲ್ಲಿ ಪ್ರಚಂಡ ಶಕ್ತಿಗಳಾಗಿ ಮಾರ್ಪಡುತ್ತವೆ...ಆ ಶಕ್ತಿಯು ಆತ್ಮಶಕ್ತಿಯನ್ನು ಹೆಚ್ಚು ಪ್ರಕಾಶಿಸುವಂತೆ ಮಾಡುತ್ತದೆ ಪ್ರಚಂಡ ಜ್ವಾಲೆಯೊಂದು ನಮ್ಮೊಳಗೆ ಪ್ರಜ್ವಲಿಸುತ್ತದೆ ..ಅದನ್ನು ಸಹಿಸಿಕೊಳ್ಳಲು ನಮ್ಮ ದೇಹವು ಅದಕ್ಕೆ ಸಮಾನವಾಗಿ.ಶಕ್ತಿಯುತವಾಗಿ ಸ್ಪಂದಿಸಬೇಕು....ಜ್ನಾನದ ಪ್ರಚಂಡ ಜ್ವಾಲೆಯು ನಮ್ಮ ದೇಹದ ನರಮಂಡಳದ ಮೇಲೆ ಪ್ರಭಾವ ಬೀರುತ್ತದೆ..ನಮ್ಮಲ್ಲಿರುವ ಜ್ಙಾನದ ಶಕ್ತಿಗೆ ತಕ್ಕಂತೆ ನಮ್ಮ ನರಂಡಳವೂ ವಿಕಸನವಾಗಿರುತ್ತದೆ...ಹೀಗೆ ಆಗದಿದ್ದಲ್ಲಿ...ಆತ್ಮಶಕ್ತಿಗೆ ಸಮನಾಗಿ ದೇಹವು ಸ್ಪಂದಿಸದಿದ್ದಲ್ಲಿ..ದೇಹ ಮತ್ತು ಮನಸ್ಸುಗಳ ನಡುವೆ..ಅಸಹಕಾರ ಉಂಟಾಗಿ.ಆತ್ಮನೂ..ತನ್ನ ನಿಯಂತ್ರಣವನ್ನು ಸಡಿಲಗೊಳಿಸುತ್ತಾನೆ..ಆಗ ..ಮನುಷ್ಯ ತನ್ನ ನಡೆ ನುಡಿ ಹಾಗೂ ವರ್ತನೆಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ.. ಜ್ಙಾನದಿಂದ ಪಡೆದ ಶಕ್ತಿಯೂ ಎಲ್ಲಕ್ಕಿಂತ ಶ್ರೇಷ್ಟವೂ ಹಾಗೂ ಶಕ್ತಿಯುತವೂ ಆಗಿರುತ್ತದೆ..ಈ ಶಕ್ತಿಯಿಂದಾ ಉಂಟಾಗುವ ಪ್ರಚಂಡ ಜ್ವಾಲೆಯನ್ನು ..ದೇಹವು ನಿಯಂತ್ರಿಸದಿದ್ದಲ್ಲಿ..ದೇಹವು ಕೃಶ ವಾಗುತ್ತದೆ..  
ವರ್ತನೆಗಳಲ್ಲಿ ಅಪಸಾಮಾನ್ಯತೆಗಳು ಕಂಡುಬರುತ್ತವೆ...ಗಳಿಸಿದ ಜ್ಙಾನವು ಅಸ್ತವ್ಯಸ್ತವಾಗುತ್ತದೆ..ದೇಹ ಮನಸ್ಸು ಕಲ್ಮಶವಾಗುತ್ತದೆ..ಇಂತಹಾ ಕಲ್ಮಶವಾದ ದೇಹದಿಂದ ಹೊರ ಹೋಗಲು ಆತ್ಮನು ಹಾತೊರೆಯುತ್ತಾನೆ...ದೇಹವು..ಸದಾ ಶುದ್ದವಾಗಿರಬೇಕು..ಶಕ್ತಿಯುತವಾಗಿರಬೇಕು..ಪ್ರಚಂಡ ಜ್ಙಾನದ ಜ್ವಾಲೆಯ ಪ್ರವಾಹವನ್ನು ತಡೆಯಲು ನರ ಮಂಡಳವು ಸುಸ್ತಿಯಲ್ಲಿರಬೇಕು...ಹೆಚ್ಚಿನ ಕೃತಕ ಮಾದಕತೆಯೂ 

( ಮಾದಕ ವಸ್ತುಗಳನ್ನು ಸೇವಿಸಿ ಮಂಪರಿನಲ್ಲಿರುವುದು) ನರಮಂಡಳದ ಜೀವಕೋಶಗಳನ್ನು ನಾಶಪಡಿಸುತ್ತದೆ...ನಾವು ಸಹಜವಾಗಿಯೇ ಸದಾ ಮಾದಕ ಸ್ತಿತಿಯಲ್ಲಿರಬೇಕು .ಅದೇ ಶಿವ ಸ್ತಿತಿಯೂ..ಅರಿಷಡ್ವರ್ಗಗಳು ಇಂತಹಾ ಸ್ತಿತಿಯನ್ನು ಕದಡುತ್ತವೇ...ಈ ನಿಟ್ಟಿನಲ್ಲು ಹೆಚ್ಚು ಜಾಗರೂಕವಾಗಿರಬೇಕು..ಜ್ಙಾನ ಶಕ್ತಿಯಿಂದ ಅರಿಷಡ್ವರ್ಗಗಳನ್ನು ಕುಂದಿಸಬೇಕು..ಭಕ್ತಿಭಾವದಿಂದ ....ಕಾಮವನ್ನೂ ಪ್ರೀತಿಭಾವದಿಂದ....ಕ್ರೋಧವನ್ನೂ ದಾನ ದಿಂದ...ಲೋಭವನ್ನೂ ಸೇವಾಭಾವದಿಂದ...ಮದವನ್ನುತ್ಯಾಗದಿಂದ . ಮಾತ್ಸರ್ಯವನ್ನೂ 

ಸ್ವಚ್ಚತೆ ಮತ್ತು.ಕ್ರಿಯೆಯಿಂದ ..ಈಶ್ರ್ರ್ಯೆಯನ್ನು...ಕುಂದಿಸಬೇಕು...ಹೀಗೆ ಅವಿರತ ಪ್ರಯತ್ನದ ನಂತರ ದೇಹವು ಶುದ್ದವೂ ಶಕ್ತಿಯುತವೂ..ಆದಾಗ .ವಿಶಿಷ್ಟ ಶಕ್ತಿಯನ್ನು ಗಳಿಸುವ .ಹಾಗೂ ಅನುಭವಿಸುವ ಆಸೆ ಬೆಳಸಿಕೊಳ್ಳಬೇಕು...ಪೃಕೃತಿಯಿಂದ ಗಳಿಸುವ ವಿಶಿಷ್ಟ ಶಕ್ತಿಯೂ.ಪರಿಶುದ್ದವಾದುದು ಅದು ಪರಿಶುದ್ದಿಯಿಲ್ಲದ ದೇಹ ಹಾಗೂ ಮನಸಿನಲ್ಲಿ ಬೇರೂರುವುದಿಲ್ಲ..ದೇಹವೂ ದೈವತ್ವವನ್ನು ಹೊಂದಲು ಯೋಗ್ಯವಾಗಿರಬೇಕು ಅದಕ್ಕೆ ನಿರಂತರ ಸಿದ್ದತೆಯೂ ಬೇಕು ನಿರಂತರ ಅಭ್ಯಾಸ .ಕ್ರಮಗಳ ಶಾಸ್ತ್ರೋಕ್ತ ಅನುಸರಣೆ.ಶ್ರದ್ದೆ ಹಾಗೂ ಭಲವಾದ ನಂಬಿಕೆಗಳಿಂದ ಮಾತ್ರ. ಯಾವುದೇ ವಿದ್ಯೆಯ ಸಿದ್ದಿಯು ಲಭಿಸುತ್ತದೆ..ಸಿದ್ದಿಸಿಕೊಳ್ಳದಿರುವ ವಿದ್ಯೆಯು ಫಲಕಾರಿಯಲ್ಲ ಹಾಗೂ ಅದು ಬಲು ಅಪಾಯಕಾರಿ.. ಹೀಗೆ ಯಾವುದೇ ವಿದ್ಯೆಯನ್ನು ಶಕ್ತಿಯನ್ನು ಸಿದ್ದಿಸಿಕೊಳ್ಳುವ ಮುನ್ನ ದೇಹ ಮತ್ತು ಮನಸ್ಸುಗಳನ್ನು ಶುದ್ದಿ ಮಾಡಿಕೊಳ್ಳಬೇಕು..ಈ ಸೃಷ್ಟಿಯ ಪ್ರತಿಯೊಂದು ಕೋಶವು..ಜೀವಾತ್ಮವೂ..ಶಕ್ತಿಯೂ..ಶಿವ ಸ್ವರೂಪವಾದುದು...ಮನಸನ್ನು ಶಿವನಲ್ಲಿ ಕೇಂದ್ರೀಕರಿಸಬೇಕು...ಶಿವನೇ ರುದ್ರನೂ .ರುದ್ರನು ಪ್ರಚಂಡ ಶಕ್ತಿಹೊಂದಿರುವವನು..ಪ್ರಳಯ ಸ್ವರೂಪದ ಶಕ್ತಿಯನ್ನು ಪಳಗಿಸಿರುವವನು...ತನ್ನ ಅಧಿನದಲ್ಲಿರಿಸಿಕೊಂಡಿರುವವನು .ಅವನೇ ಮಹಾರುದ್ರನೂ .ಈ ಜೀವ ಸಂಕುಲದ ಪ್ರತೀಯೊಂದು ಜೀವಕೋಶದ ಜೀವವೂ ಶಕ್ತಿಯೂ .ಶಿವನೇ...ಶಿವ ನೆಂದರೆ ..ಜೀವ ಜೀವವೆಂದರೆ ಶಕ್ತಿ..ಶಕ್ತಿ ಎಂದರೆ ದೇಹ ಹಾಗೂ ಮನಸ್ಸು...ಈ ಸೃಷ್ಟಿಯ ಪ್ರಕಾಂಡ ವಿಸ್ಮಯಗಳನ್ನು ಸ್ಮರಿಸುತ್ತಾ..ಅ ಶಕ್ತಿಯ ಕಾರಣವನ್ನು ಹುಡುಕುತ್ತಾ...ನಮ್ಮ ದೇಹದಲ್ಲೇ ಇರುವ. ಕೋಟ್ಯಾಂತರ ಜೀವ ಕೋಶಗಳಲ್ಲಿ ಒಂದೇ ಒಂದು ಜೀವಕೋಶವು ಈ ಸೃಷ್ಡಿಯಲ್ಲಿನ ಸಂಪೂರ್ಣ ಲಕ್ಷಣಗಳನ್ನು ಹೊಂದಿರುವುದನ್ನೂ ಕುರಿತು ಚಿಂತಿಸಬೇಕು.. ನಾವು ಪಂಚ ಭೂತಗಳಲ್ಲಿ ..ಈ ರಮಣೀಯ ಪ್ರಕೃತಿಯಲ್ಲಿ ಹೀಗಾಗಲೇ ಲೀನವಾಗಿರುವ ಮನಃಸ್ತಿತಿ ಹೊಂದಲು ಪೃಕೃತಿಯೊಡನೆ ಬೆರೆತು ಹೋಗಬೇಕು...ಸ್ವಾಸ್ತ್ಯ ಮೃತ್ಯುವಿನಲ್ಲಿರುವ ಶಾಂತಸ್ತಿತಿಯೂ ಸದಾ ನಮ್ಮನ್ನು ಆವರಿಸಿರಬೇಕು...ಅದನ್ನೇ ಶಿವ ಸ್ಥಿತಿ ಎನ್ನುವುದು...ಯಾವ ಮಾದಕ ದ್ರವ್ಯವೂ ನೀಡದ ...ಮತ್ತಿನ ಮನಸ್ತಿತಿಯಲ್ಲಿರುವಂತಹಾ ಜ್ಙಾನವನ್ನು ನಾವು ಗಳಿಸಿಕೊಳ್ಳಬೇಕು...ಪ್ರತೀ ಉಚ್ವಾಸವನ್ನು ಪ್ರೀತಿಸಬೇಕು...ಪ್ರತೀ ಉಚ್ವಾಸದಿಂದಲೂ ಶಕ್ತಿ ಸಂಚಯವಾಗುವುದನ್ನು ಅನುಭವಿಸಬೇಕು...ಪ್ರತೀಯೊಂದು ಉಚ್ವಾಸದಿಂದ ಆನಂದಿಸಬೇಕುಪ್ರತೀಯೊಂದು ನಿಚ್ವಾಸದಿಂದ ನಿರಾಳತೆಯನ್ನು ಅನುಭವಿಸಬೇಕು....ಆರಂಭದಲ್ಲಿ ಇದೊಂದು ಜಡ್ಡು ಪ್ರಯತ್ನದಂತೆ ಭಾಸವಾಗುತ್ತದೆ ..ಅಭ್ಯಾಸವಾದಾಗ. ನಮ್ಮ ಉಸಿರಾಟದೊಂದಿಗೆ ಈ ಭಾವವೂ ಬೆರೆತು ಹೋಗುತ್ತದೆ..ಪ್ರತೀಕ್ಷಣವೂ ನಾವು ಈ ಪ್ರಕೃತಿಯಲ್ಲಿನ ಒಂದು ಸಸ್ಯದಂತೆ...ಭಾವಿಸಬೇಕು..ದುಮ್ಮಿಕ್ಕುವ ಭಾವಾವೇಶಗಳನ್ನು ನಿಯಂತ್ರಿಸಿಕೊಳ್ಳಬೇಕು.. ನಮ್ಮಲ್ಲಿ ಮೂಡುವ ಭಾವಾ ವೇಶಗಳು ..ದೇಹ ಮತ್ತು ಮನಸ್ಸಿನ ಶಕ್ತಿಯನ್ನು ಕುಂದಿಸುತ್ತವೆ 

ಉಚ್ವಾಸ ಮತ್ತು ನಿಚ್ವಾಸಗಳನ್ನು ಪ್ರೀತಿಯಿಂದ ಅನುಭವಿಸಬೇಕು...ಅಪ್ರಾಕೃತಿಕ ಆಲೋಚನೆಗಳು ಮನುಷ್ಯನನ್ನು ರೋಗಳಿಗೆ ಒಡ್ಡುತ್ತವೆ...ಈ ದೇಹ..ಆ ಪ್ರಾಣಿ. ಪಕ್ಷಿಗಳು .ಕೀಟಸಂಕುಲ.ಆ ಸಸ್ಯ ಎಲ್ಲವೂ ಪಂಚಭೂತಗಳಿಂದಾದ ಸೃಷ್ಟಿಯೇ...ಇವೆಲ್ಲವುಗಳು ಹೊಂದಿರುವ. ಮೂಲಜೀವ ಸತ್ವಗಳ ನಡುವೆ ಯಾವ ವಿಜ್ಙಾನದಿಂದಲೂ ಸಹಾ ಅಂತಹಾ ಹೆಚ್ಚಿನ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ..ಹೀಗೆ ಅವರು ತಮ್ಮ ಪ್ರವಚನವನ್ನು ಮುಂದುವರೆಸಿದರು 

#ದೇಹ –ಮನಸ್ಸು-ಆತ್ಮ--ಪರಮ ಆತ್ಮ-ಭಕ್ತಿ –ಶಕ್ತಿ-ಆದ್ಯಾತ್ಮ- 

ನನ್ನ ಹಾಗೂ ನನ್ನ ದೇಹದ ನಡುವಿನ ಭಾಂದವ್ಯವೂ ಎಲ್ಲಾ ಸಂಭಂದಗಳ ನಡುವಿನ ಭಾಂದವ್ಯಗಳಿಗಿಂತಲೂ ಮಿಗಿಲಾದುದು ನನ್ನ ದೇಹ ಹಾಗೂ ಆತ್ಮದ ನಡುವಿನ ಭಾಂದವ್ಯವೂ ನನ್ನನ್ನು ಸೃಷ್ಟಿಸಿದ ತಂದೆತಾಯಿಗಳು ಹಾಗೂ ನನ್ನ ನಡುವಿನ ಭಾಂದವ್ಯಕ್ಕಿಂತಲೂ ಹೆಚ್ಚಾದುದು-ನಾನೂ ನನ್ನ ಆತ್ಮದೊಂದಿಗೆ ವಿಹರಿಸುತ್ತಿರುವಾಗ ನನಗೆ ಬೇರೇ ಯಾವುದೇ ಜನರ ಬಂದನವೂ ಭಾಂದವ್ಯವೂ ಬೇಕಿರುವುದಿಲ್ಲ- ಆಗ ನಾನು ಈ ಪೃಕೃತಿಯ ಶಕ್ತಿಯಲ್ಲಿ ಕಳೆದುಹೋಗಿರುತ್ತೇನೆ- ಎಲ್ಲರಲ್ಲೂ -ದೇಹ ಆತ್ಮ ಹಾಗೂ ಮನಸ್ಸುಗಳಿವೆ ಅವುಗಳನ್ನು ಕ್ರಮಬದ್ದವಾಗಿ ಬಳಸಬೇಕಷ್ಟೇ ಆತ್ಮ ಶಕ್ತಿಯ ಅಸ್ತಿತ್ವ ವನ್ನು ಅರ್ಥಮಾಡಿಕೊಳ್ಳಲೂ ಹಾಗ ನಂಭಲೂ ಸಹಾ ಬಲವಾದಂತಹಾ ಆತ್ಮಶಕ್ತಿಯ ಅಗತ್ಯವಿರುತ್ತದೆ ಅದರ ಕೊರತೆ ಇದ್ದಾಗ ಯಾವುದೇ ರೀತಿಯ ಆದ್ಯಾತ್ಮಿಕ ವಿಷಯಗಳನ್ನು ಗ್ರಹಿಸಲಾಗದುವುದಿಲ್ಲ ಎಲ್ಲಾತರಹದ ದೃಶ್ಯ ಸಂಗತಿಗಳನ್ನು ನಾವು ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ ಎಲ್ಲಾತರಹದ ಶಬ್ಧಗಳನ್ನು ನಾವು ಕಿವಿಗಳಿಂದ ಕೇಳಲು ಸಾಧ್ಯವಿಲ್ಲ ನಾವು ನೋಡಲಾಗದ ಕೇಳಲಾಗದ ಹಲವಾರು ಸಂಗತಿಗಳು ಅಸ್ಥಿತ್ವದಲ್ಲಿವೆ ಹಾಗೆಯೇ ಎಲ್ಲಾ ಸಂಗತಿಗಳನ್ನೂ ಅಸ್ಥಿತ್ವಗಳನ್ನು ನಾವು –ತತ್ವ ಸಿದ್ದಾಂತ ಹಾಗೂ ತರ್ಖ ಗಳಲ್ಲಿ ಹಿಡಿದಿಡಲಾಗುವುದಿಲ್ಲ- ಯಾವುದೇ ಭಾಷೆಯಲ್ಲಿ ಬರೆದಿಡಲಾಗುವುದಿಲ್ಲ ನಾವೂ ಇಂತಹಾ ಸಂಗತಿಗಳನ್ನು –ಭಾವಿಸಿಕೊಳ್ಳ ಬಹುದು ಧ್ಯಾನಿಸ ಬಹುದು- ಹಾಗೂ ಇವುಗಳ ಪ್ರಭಾವಕ್ಕೊಳಪಡಬಹುದು-ಇಂತಹಾ ಸಂಗತಿಗಳೇ –ಆತ್ಮ ಹಾಗೂ ಪರಮ ಆತ್ಮ ಕಾರಕ ಸಂಗತಿಗಳು-ಮನುಷ್ಯನ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಲು –ಶಾರೀರಿಕ ಚಟುವಟಿಕೆಗಳು –ಜೀರ್ಣಕ್ರಿಯೆ-ನಡೆ ನುಡಿಗಳಿಗೆ ದೇಹದ ಶಕ್ತಿಬೇಕು-ಇದು ನಾವು ತಿನ್ನುವಂತಹಾ ಆಹಾರದಿಂದ ಬರುವಂತದ್ದು ಹಾಗೆಯೇ ಅನುಭವ- ಇಂದ್ರಿಯಗಳ ಸಂವೇದನೆ-ಭಾವನೆಗಳು – ಆಲೋಚನೆಗಳು- ಕಲ್ಪನೆಗಳಿಗೆ ನೆನಪುಗಳಿಗೆ ಮನಃಶಕ್ತಿ – ಬೇಕು- ಇಂತಹಾ ಶಕ್ತಿಯು ನಮ್ಮ ಅಭ್ಯಾಸಗಳ ವರ್ತನೆಗಳ ಫಲ ಇಂದ್ರಿಯಾತೀತ ಅನುಭವಗಳಿಗೆ-ಅತೀ ಸೂಕ್ಷ್ಮ ಗ್ರಹಿಕೆಗಳಿಗೆ-ಪೃಕೃತಿಯ ಶಕ್ತಿಯ ಸಂವೇದನೆಯನ್ನು ಗ್ರಹಿಸಲು ಹಾಗೂ ಸ್ವೀಕರಿಸಲು –ಮತ್ತು ಅದನ್ನು ಬಳಸಲು –ಆತ್ಮ ಶಕ್ತಿಯು ಬೇಕು- ಇದು ಏಕಾಗೃತೆ ಧ್ಯಾನ-ಯೋಗ –ಜ್ಣಾನ ದಿಂದ ಲಭಿಸುತ್ತದೆ-  ದೇಹದ ಅಂಗಾಂಗಗಳ ಶಕ್ತಿ – ಅಥವಾ ಊನಗಳು ಈ ಆತ್ಮ ಶಕ್ತಿಯನ್ನು ಕುಂದಿಸಲಾರವು ದೇಹವೂ ನಶ್ವರ ಆತ್ಮ ಶಕ್ತಿಯೂ ಶಾಶ್ವತ –ಈ ಶಕ್ತಿಯ ಸುಸ್ಥಿರತೆಗೆ ನಿರಂತರ –ಯೋಗ ಧ್ಯಾನಗಳು-ಪ್ರಯೋಗಗಳು-ಅಭ್ಯಾಸಗಳು-ಜ್ಣಾನಾರ್ಜನೆಯೂ ಭಕ್ತಿಯೂ- ಬೇಕೇ ಬೇಕು-  ಇಂತಹಾ ಎಲ್ಲಾ ಶಕ್ತಿಗಳ ಹಾಗೂ ಪೃಕೃತಿಯ ಶಕ್ತಿಯ ಮೇಲೆ ನಿಯಂತ್ರಣವನ್ನು ಸಾದಿಸಲು –ಸಂಪರ್ಕವನ್ನು ಸಾಧಿಸಲು ಪರಮ ಆತ್ಮನ ಶಕ್ತಿಯು ಬೇಕು-ಇಂತಹಾ ಶಕ್ತಿಯನ್ನು ಹೊಂದುವುದು ಮನುಷ್ಯ ಮಾತ್ರನಿಂದ ಸಾಧ್ಯವಿಲ್ಲ-  ಕಳೆದ ಯುಗಗಳ-ಋಷಿ ಮುನಿಗಳು-ದೇವತೆಗಳೆಂದು ಕರೆಯಲ್ಪಡುವವರು-ಇದುವೆ ದೈವ ಶಕ್ತಿಯು- ಇಂತಹಾ ಶಕ್ತಿಯನ್ನು ಹೊಂದಿರುವಾತನೇ ದೇವತೆಯು-ಸಾಕ್ಷಾತ್ ಪರಶಿವನು ಈ ಶಕ್ತಿಯ ಕೇಂದ್ರವೂ-ಇಂತಹಾ ಶಕ್ತಿಯನ್ನು ಹೊಂದಿದ್ದರು-ಇಂತಹಾ ಶಕ್ತಿಗೆ –ಸಮಗೃ ಪೃಕೃತಿಯೇ ಸಹಕರಿಸಬೇಕು –ಹೀಗೆ ಸಹಕರಿಸುವ ರೀತಿಯು ಬೇರೆ ಬೇರೇ ಯುಗಗಳಲ್ಲಿ ಬೇರೆ ಬೇರೇ ರೀತಿ ಇರುತ್ತದೆ ನೀವು ಹೆಚ್ಚು ಹಿಂದಿನ ಯುಗಗಳಿಗೆ ಹೋದಷ್ಟೂ ಹೆಚ್ಚು –ಪರಮ ಆತ್ಮ ಶಕ್ತಿಯುಳ್ಳವರನ್ನು ಕಾಣಬಹುದು- ಇಂದು ಆತ್ಮಶಕ್ತಿಯ ಅಸ್ಥತ್ವವನ್ನೇ ಒಪ್ಪುವಂತಹಾ ಶಕ್ತಿಯನ್ನೂ ಸಹಾ ಹೆಚ್ಚಿನವರು ಹೊಂದಿರುವುದಿಲ್ಲ-ಇದಕ್ಕೆ ಮುಖ್ಯ ಕಾರಣ ಪೃಕೃತಿಯ ಶಕ್ತಿಯ ಮಾಲಿನ್ಯ- 

ಕೇವಲ ದೇಹಶಕ್ತಿ ಯನ್ನು ಬಳಸಿ ಬದುಕುವವನು –ಮೃಗ ಸಮಾನನು- ದೇಹಶಕ್ತಿಯೊಂದಿಗೆ ಮನಃ ಶಕ್ತಿಯನ್ನು ಬಳಸಿ ಬದುಕುವವನು ಬುದ್ದಿವಂತನೂ  - ಆತ್ಮ ಶಕ್ತಿಯನ್ನು ನಂಬುವವನು ಹಾಗೂ ಬಳಸುವವನೇ-ಆದ್ಯಾತ್ಮಿಯೂ- ಆದ್ಯಾತ್ಮಿಗಳ -ಆತ್ಮಗಳ ಕೇಂದ್ರವೇ ಪರಮಾತ್ಮನು- ಈ ಕೇಂದ್ರ ಬಿಂದುವಿನಿಂದ ಶಕ್ತಿಯನ್ನು ತನ್ನತ್ತ ಸೆಳೆಯುವ ಪ್ರಯತ್ನವೇ ಭಕ್ತಿಯೂ-ಆತ್ಮ ಕಾರಕದಲ್ಲಿ ಭರವಸೆ ಇಲ್ಲದಿದ್ದಲ್ಲಿ ಈ ಒಂದು ಉದಾಹರಣೆಯನ್ನು ನೋಡಿ..ಮನುಷ್ಯ ಇಂದಿನ ವರೆವಿಗೂ ತಾನೂ ಗಳಿಸಿರುವ ತಾಂತ್ರಿಕ ಜ್ಣಾನದ ಫಲವಾಗಿ ಅತ್ಯಂತ ದೊಡ್ಡ ಸಂಗತಿಗಳೆಂದು ಲಕ್ಷಾಂತರ ಜ್ಯೋತಿರ್ವರ್ಷಗಳಷ್ಟು ದೂರವಿರುವ ಹಲವು ಗ್ರಹಗಳನ್ನೂ ನಕ್ಷತ್ರಗಳನ್ನು. ಹಾಗೂ ಗೆಲಾಕ್ಸಿಗಳನ್ನು ಮತ್ತು ಕೆಲ ಬ್ಲಾಕ್ ಹೋಲ್ ಗಳನ್ನು ಹಾಗೂಅತ್ಯಂತ ಚಿಕ್ಕ ಸಂಗತಿಗಳೆಂದು ಪ್ರೋಟಾನ್ ನ್ಯೂಟ್ರಾನ್ ಇಲಕ್ಟ್ರಾನ್ ಗಳನ್ನು –ಹಾಗೂ ಅವುಗಳಿಗಿಂದ ಚಿಕ್ಕವುಗಳಾಗಿ ಜೀವಕೋಶಗಳಲ್ಲಿರುವಂತಹಾ ಡಿ ಎನ್ ಎ ಹಾಗೂ ಆರ್ ಎನ್ ಎ ಗಳನ್ನು ಗುರುತಿಸಿದ್ದಾನೆ ಹಾಗೂ ಅವುಗಳ ಬಗ್ಗೆ ಸಾಕೊಷ್ಟು ವಿವರಗಳನ್ನು ಗಳಿಸಿದ್ದಾನೆ-  ಹೀಗೆ ಇತ್ತಿಚಿಗೆ ಈ ಅತ್ಯಂತ ದೊಡ್ಡ ಹಾಗೂ ಅತ್ಯಂತ ಚಿಕ್ಕ ಸಂಗತಿಗಳನ್ನು ಗುರುತಿಸುವ ಮೊದಲೇ ಈ ಸಂಗತಿಗಳ ಅಸ್ಥಿತ್ವ ಇದ್ದವು ಹಾಗೂ ಈ ಸಂಗತಿಗಳು ಕ್ರಿಯಾಶೀಲವಾಗಿದ್ದವು-ಹಾಗೆಯೇ ಆದುನಿಕ ಮನುಷ್ಯ ಈಗ ಗುರುತಿಸಿರುವ ಹಾಗೂ ಸಾಕೊಷ್ಟು ವಿವರಗಳನ್ನು ಗಳಿಸಿರುವ ಸಂಗತಿಗಳಿಗಿಂತಲೂ ಲಕ್ಷಾಂತರ ಪಟ್ಟು ಹೆಚ್ಚ ದೊಡ್ಡದಾಗಿರುವ ಹಾಗೂ ಲಕ್ಷಾಂತರ ಪಟ್ಟು ಹೆಚ್ಚು ಚಿಕ್ಕದಾಗಿರುವ ಹಾಗೆಯೇ ಹೆಚ್ಚು ಶಕ್ತಿಶಾಲಿಯಾಗಿರುವ ಸಂಗತಿಗಳ ಅಸ್ಥಿತ್ವದಲ್ಲಿವೆ -ಈ ಅಸ್ಥೀತ್ವಗಳಲ್ಲಿ ಈಗಾಗಲೇ ಗುರುತಿಸಿರುವ ಅತ್ಯಂತ ಚಿಕ್ಕ ಹಾಗೂ ಶಕ್ತಿಯುತ ಸಂಗತಿಗಳಿಗಿಂತಲೂ ಸಾವಿರ ಪಟ್ಟು ಚಿಕ್ಕದಾಗಿರುವ ಹಾಗೂ ಸಾವಿರ ಪಟ್ಟಿಗೂ ಹೆಚ್ಚು ಶಕ್ತಿಯುತವಾಗಿರುವ ಸಂಗತಿಯೇ ಆತ್ಮನು-  ಅದೇರೀತಿ ದೊಡ್ಡ ಸಂಗತಿಗಳೆಂದು ಗುರುತಿಸಿರುವ ಗ್ರಹಗಳು ನಕ್ಷತ್ರಗಳು ಹಾಗೂ ಗೆಲಾಕ್ಸಿಗಳಿಗಿಂತಲೂ ದೊಡ್ಡದಾದ ಹಾಗೂ ಶಕ್ತಿದಾಯಕವಾಗಿರುವ ಸಂಗತಿಯೇ ಪರಮ ಆತ್ಮನು- ಆತ್ಮನು .ಪರಮ ಆತ್ಮನ ಒಂದು ಚಿಕ್ಕ ಅಂಶವೂ.  ಪರಮ ಆತ್ಮನು ಶಿವನು-ಆತ್ಮ ಹಾಗೂ ಪರಮ ಆತ್ಮನಲ್ಲಿರುವ ಶಕ್ತಿಯೂ ಶಿವನ ಶಕ್ತಿಯೂ- ಆದುನಿಕ ಮನುಷ್ಯನಿಗೇ -ಅಷ್ಟೂ ದೊಡ್ಡದಾಗಿರುವ ಹಾಗೂ ಚಿಕ್ಕದಾಗಿರುವ ಈ ಸಂಗತಿಗಳನ್ನು ..ಶಕ್ತಿಗಳನ್ನು ದೃಡಪಡಿಸಲು ಸಾಧ್ಯವಾಗುತ್ತಿಲ್ಲ- ಇದನ್ನು ಸರಳವಾಗಿ ದೃಡ ಪಡಿಸಬಹುದು ಭಲವಾದಂತಹಾ ಭರವಸೆ-ಶ್ರದ್ದೆ ಇಚ್ಚಾಶಕ್ತಿ ಬೇಕಷ್ಟೇ-ಇದನ್ನೇ ನಾವು ತಪಸ್ಸು- ಹಠಯೋಗವೆಂದು ಕರೆಯುವುದು-  ನಾವು ಏನನ್ನು ತಿಂದು ಜೀರ್ಣಿಸಿಕೊಳ್ಳುತ್ತೇವೆಯೋ ಅದರಿಂದ ನಮ್ಮ ದೇಹವೂ ಹಾಗೂ ನಾವು ಏನನ್ನು ತಿಳಿದು ಅದನ್ನು ಮನನ ಮಾಡಿಕೊಳ್ಳುತ್ತೇವೆಯೋಅದರಿಂದ ನಮ್ಮ ಮನಸ್ಸೂ ರೂಪುಗೊಳ್ಳುತ್ತವೆ ಹೀಗೆ ರೂಪಗೊಳ್ಳುವಂತಹಾ ದೇಹ ಮತ್ತು ಮನಸ್ಸುಗಳು ಆತ್ಮನ ನಿತಂತ್ರಣಕ್ಕೊಳಪಟ್ಟಿರಬೇಕು ಇಂತಹಾ ದೇಹ ಹಾಗೂ ಮನಸ್ಸುಗಳು ಮಾತ್ರ ಸ್ವಾಸ್ಥ್ಯವಾಗಿರುತ್ತವೆ 

ಬಾಬಾಜಿಯವರ ಪ್ರವಚನ ಕೇಳಿದ ನನಗೆಜೀವನದ ಅಥವಾ ಜೀವದ ಪೃಕೃತಿಯ .ಒಂದು ಮಹಾನ್ ರಹಸ್ಯವನ್ನೇ ತಿಳಿದ ಅನುಭವವಾಯ್ತು...ನನ್ನೊಳಗೆ ಪೃಕೃತಿಯೋ ಅಥವಾ ನಾನೇ ಪೃಕೃತಿಯೋ ಮನಸಿನ ಆಲೋಚನೆಗಳು ಒಂದರ ಹಿಂದೆ ಒಂದರಂತೆ ಲಗ್ಗೆ ಹಾಕಿದವು ಎಲ್ಲರೂ ಶಿವಸ್ವರೂಪಿಗಳೇ ಎನ್ನುವ ಮಾತು ..ನನ್ನ ಮನಸಿನಾಳವನ್ನು ಹೊಕ್ಕಿತ್ತು...ಕೆಲ ಸಮಯಗಳ ಹಿಂದೆ ನಾನು ನೋಡಿದ್ದ ..ಹುಚ್ಚನಂತೆ ವರ್ತಿಸುತ್ತಿದ್ದ ವ್ಯಕ್ತಿಯನ್ನು ಕಂಡಾಗ ನನ್ನಲ್ಲಿ ಮೂಡಿದ್ದ ಪ್ರಶ್ನೆಗೆ ..Àರಿಯಾದಂತಹಾ ಉತ್ತರವೂ ಬಾಬಾರವರ ಪ್ರವಚನದಲ್ಲಿ ದೊರೆಯುತು...ಹೌದು...ಜ್ಙಾನ .ಯಶಸ್ಸು ಶ್ರೇಯಸ್ಸುಗಳನ್ನು ಅರಗಿಸಿಕೊಳ್ಳಲಾಗದೆ ಅಸ್ತವ್ಯಸ್ತಗೊಂಡಿರುವ ಹಲವರು ನಮ್ಮೊಂದಿಗಿರುತ್ತಾರೆ... 

ಅಂತವರಲ್ಲಿ ಹುಚ್ಚರಾದರೆ ಮತ್ತೆ ಕೆಲವರು ಆತ್ಮ ಹತ್ಯೆಗೂ ಶರಣಾದ ಹಲವು ಉದಾರಣೆಗಳುಂಟು..ಬಾಬಾ ಮಹಾರುದ್ರರ ಪ್ರಕಾಂಡ ಪಾಂಡಿತ್ಯವನ್ನು ಕಂಡ ನನಗೆ .ಅವರಲ್ಲಿ ಶಿವನನ್ನು ಕಂಡತಾಯ್ತು....ಸಹಜವಾಗಿ ಅವರ ಬಗ್ಗೆ ಭಕ್ತಿ ಗೌರವಗಳು ಮನತುಂಬಿಕೊಂಡವು...ಬಾಬಾಜಿಯವರು ಪ್ರವಚನದಲ್ಲಿ ಹೇಳಿದ ಕೆಲವು ಸಂಗತಿಗಳನ್ನು ಪುನಃ ಪುನಃ ಸ್ಮರಿಸಿಕೊಳ್ಳುತ್ತ ನನ್ನೊಳಗೆ ನಾನೇ ಲೀನನಾದೆ ಕೆಲಕಾಲ ಧ್ಯಾನಿಸಿದೆ- ನನ್ನ ದೇಹದ ಮನಸ್ಸಿನ - ಆಲೋಚನೆಗಳ ಆಚೆ ಬೇರೇನೋ ಇರುವುದು ಅದೂ ನ್ನೊಳಗೇ ಅಡಗಿರುವುದು ನನ್ನ ಸಂವೇದನೆಗೆ ಬಂತು-ಆದರೇ ಅಂತಹಾ ಸೂಕ್ಮ್ಷಾತೀ ಸೂಕ್ಮ್ಷ ಸಂವೇದನೆಯನ್ನು ಹೆಚ್ಚುಕಾಲ ಹಿಡಿದಿಟ್ಟುಕೊಳ್ಳುವಷ್ಟು ಮನೋಭಲವು ನನಲ್ಲಿರಲಿಲ್ಲ ಏಕೆಂದರೆ-ಇಂತಹಾ ಅಭ್ಯಾಸಗಳ ಕೊರತೆಯೂ ನನ್ನಲ್ಲಿತ್ತುಹಲವು ವರ್ಷಗಳಿಂದಲೂ ಆಗಾಗ್ಗೆ ಧ್ಯಾನಿಸುವಂತಹಾ ಅಭ್ಯಾಸವು ನನ್ನಲ್ಲಿತ್ತು ಆದರೇ ಇಷ್ಟಂದು ಆಳವನ್ನು ಧ್ಯಾನದಲ್ಲಿ ನಾನೆಂದೂ ಕಂಡಿರಲಿಲ್ಲ- ಅಂದಿನ ಧ್ಯಾನ ಸ್ಥಿತಿಯಿಂದ -ಎಚ್ಚರಗೊಂಡ ಕ್ಷಣ ನಿಜಕ್ಕೂ ಒಂದು ರೋಮಾಂಚನ ಅನುಭವ ಮೂಡಿಸಿತ್ತು- ನಾನು ಪುನಃ ಜನಿಸಿದಂತೆ ಭಾಸವಾಯ್ತು ಮುಂಜಾನೆಯ ವೇಳೆಗೆ ಕುಟೀರಕ್ಕೆ ಮರಳಿದೆವು...ಸ್ವಲ್ಪ ಕಾಲ ಹಾಗೇ ನಿದ್ದೆಹೋದೆವು 

#ರಮಣೀಯ ಮುಂಜಾವು 

ಕಣ್ಣು ಬಿಟ್ಟು ನೋಡುವುದರೊಳಗೆ ಬೆಳಗಾಗಿತ್ತು . ಅಂತಹಾ ರಮಣೀಯ ಬೆಳಗನ್ನು ನಾನೆಂದೂ ಕಂಡಿರಲಿಲ್ಲ….ಹಾಗೆಯೇ ನದಿಯಂತೆ ಹರಿಯುತ್ತಿದ್ದ ಹಳ್ಳದ ದಡದಲ್ಲಿ ನೆಡೆದಾಡುತ್ತಾ ಹೋದೆ . . . .ಎಲ್ಲಿ ನೋಡಿದರಲ್ಲೀ ಪವಾಡಗಳು ..ಹಳ್ಳದ ದಡದ ದೊಡ್ಡ ಮರದ ಕೆಳಗೊಬ್ಬ ತನ್ನ ಬಲದ ಕಾಲಿನ ಹೆಬ್ಬರಿಳಿನ ಸಹಾಯದಿಂದ ಮಾತ್ರ ನಿಂತು ತನ್ನ ಕೈಗಳನ್ನು ಮೇಲೆಕ್ಕೆತ್ತಿ ದ್ಯಾನಿಸುತ್ತಿದ್ದ…ಮತ್ತೊಬ್ಬನು ತಲೆಯನ್ನು ಕೆಳಗೆ ಮಾಡಿ ಕಾಲುಗಳನ್ನು ಮೇಲೆ ಮಾಡಿ ದ್ಯಾನದಲ್ಲಿ ತೊಡಗಿದ್ದ ..ಮತ್ತೆ ಕೆಲವರು ನೀರಿನ ಮೇಲೆ ನಿದ್ರಿಸುತ್ತಿದ್ದರು….ಮತ್ತೆ ಕೆಲವರು ಒಂದು ಬೃಹದಾಕಾರದ ಮರದಟೊಂಗೆಗಳಿಗೇ ಜೋತು ಬಿದ್ದಿದ್ದರೂ….ಇಂತಹಾ ವಿಚಿತ್ರಗಳನ್ನು ನೋಡಿ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ 

ಮದ್ಯಾನದ ವೇಳೆಗೆ ಕುಟೀರದತ್ತ ಹೋದೆ … 

 #ಮಹೋಪದೇಶ-ಬಾಬಾ ಮಹಾರುದ್ರರು ಹಾಗಾ ತಾನೇ ವಿಶ್ರಾಂತಿಯಿಂದ ಎದ್ದು ಕುಳಿತು ಕೆಂಪು ಕುಂಡವೊಂದರಿಂದ ಪಾನೀಯವೊಂದನ್ನು ಕುಡಿಯುತ್ತಿದ್ದರು..ನಾನು ಅವರ ಪಕ್ಕವೇ ಹೋಗಿ ಕುಳಿತೆ.. ಹಲೋ ..ಹೌ ಯೂ ಫೀಲ್ . . .? ಪ್ರಶ್ನಿಸಿದರು..ತುಂಬಾನೇ ವಿಶೇಷವಾಗಿತ್ತು ಬಾಬಾಜೀ ..ಇಂತಹಾ ಯಾವುದೇ ಕರ್ಯಕ್ರಮಗಳನ್ನು ನಾನೆಂದು ನೋಡಿರಲಿಲ್ಲ..ಗೌರವ ಪೂರ್ವಕವಾಗಿ ಉತ್ತರಿಸಿದೆ..ನಂತರಾ ಬಾಬಾ ಜೀ ನಿಮ್ಮ ಪ್ರವಚನವನ್ನು ಆಲಿಸಿದೆ..ನಿಮ್ಮ ಒಂದೊಂದು ಹೇಳಿಕೆಗಳು ನನ್ನಲ್ಲಿ ಹೊಸ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತಿದ್ದವು..ಎಂದು ಹೇಳಿದೆನೋಡಿ. . ಮೈ ಡಿಯರ್ . . . 

ಯಾವುದೇ ವಿಚಾರಗಳು ಯಾರೊಬ್ಬರ ಬಳಿಯೇ ಇರಬಹುದಾದ ಸ್ವತ್ತುಗಳಲ್ಲ.. 

ಹಾಗೆಯೇ ಶಕ್ತಿಯೂ ಕೂಡಾ. ಆದರೇ ಅವರು ಗ್ರಹಿಸಿದ್ದಷ್ಟು ಸ್ವೀಕರಿಸಿದ್ದಷ್ಟು ಮಾತ್ರ ಅವರಿಗೇ ಲಭಿಸಿರುತ್ತದೆ ಅಷ್ಟೇ. . . .ಧೈರ್ಯ ಮಾಡಿ ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟೆ……ಬಾಬಾಜಿ . . . .ಈ ಎಲ್ಲಾ ಪವಾಡಗಳನ್ನು ಮಾಡಿ ಪ್ರಕೃತಿಯಿಂದ ವಿಶೇಷ ಹಾಗೂ ಅಗೋಚರ ಶಕ್ತಿಯನ್ನು ಗಳಿಸ ಬಹುದೆಂಬ ವಿಚಾರವನ್ನು ನಾನು ಸಮ್ಮತಿಸುತ್ತೇನೆ 

ಆದರೇ ಅದರ ಉದ್ದೇಶ ವೇನು ಹಾಗೂ ಅದನ್ನು ಗ್ರಹಿಸದೇ ಜೀವನ ನೆಡೆಸಲು ಸಾಧ್ಯವೇ ಇಲ್ಲವೇ ..ಇದರಿಂದ ಲಾಭವಾದರೂ ಯಾರಿಗೆ.. ? 

ವೆರೀ ಗುಡ್ಡ್ .. .ನಿನಗೇ ಮೂಲಭೂತ ಪ್ರಶ್ನೆಗಳೆ ಮೂಡಿವೆ .. 

ಉತ್ತರವೂ ಅಷ್ಟೇ ಸರಳವಾಗಿದೆ…ಕೆಲವರು ತಮ್ಮ ಜೀವನವನ್ನು ಹಣಗಳಿಕೆಗಾಗಿ.ಕೆಲವರು. ಜ್ಣಾನದ ಗಳಿಕೆಗಾಗೀ. ಸವೆಸಿದರೇ ಮತ್ತೆ ಕೆಲವರು ಜೀವಿಸುವುದಕ್ಕಾಗಿಯೇ ಬದುಕಿ ಉಳಿಯುವುದಕ್ಕಾಗಿಯೇ ತಮ್ಮ ಜೀವನವನ್ನೆಲ್ಲಾ ಸವೆಸುತ್ತಾರೆ. . .ಯಾವ ವ್ಯಕ್ತಿಯು ಯಾವುದಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಸ ಬಯಸುತ್ತಾನೆಂಬುದು ಅವನ ಒಳ ಮನಸಿನ ಕರೆ . .ಅಷ್ಟು ಸುಲಭವಾಗಿ ಎಲ್ಲರೂ ಅವರವರ ಒಳ ಮನಸಿನ ಕರೆಗಳಿಗೇ ಹೋಗೊಡಲು ಸಾದ್ಯವಾಗುವುದಿಲ್ಲ… .ಮನಸೊಂದು ಬಯಸಿದರೇ ಬೇರೊಂದಕ್ಕೆ ದೇಹವನ್ನು ಬಳಸುತ್ತಾರೆ ಒಂದು ರಾಜ ರಹಸ್ಯವನ್ನು ಹೇಳುತ್ತೇನೆ ಕೇಳು .. 

ಮನಸೊಲ್ಲದ್ದಕ್ಕೆ ದೇಹವನ್ನು ಬಳಸುವುದರಿಂದ ದೇಹವಷ್ಟೇ ಅಲ್ಲ ಮನಸೂ ಕೂಡ ರೋಗಗಳಿಗೆ ಕಾರಣವಾಗುತ್ತದೆ …ಇದುವೇ ಹಲವು ರೋಗಗಳ ಮೂಲವು .. 

ಮನಸು ಹಾಗೂ ದೇಹವು ಒಪ್ಪಿದ ಕ್ರಿಯೆಯಲ್ಲಿ ತೊಡಗುವುದೇ ಆತ್ಮ ತೃಪ್ತಿಯು . .ಇದುವೇ ಪರಮಾನಂದವೂ .ಇದುವೇ ಆರೋಗ್ಯವು. . ಇದು ಲಾಭಕ್ಕಾಗಿ ಅಲ್ಲ ..ಇದು ನಮ್ಮ ಒಳಮನಸಿನ ಕರೆ ಅಷ್ಟೆ ....ನಾವದನ್ನು ಸ್ವೀಕರಿಸಿದ್ದೇವೇ ಗೌರವಿಸಿದ್ದೇವೆ. . ಪ್ರೀತಿಸಿದ್ದೇವೇ ಕಾರ್ಯರೂಪಕ್ಕಿಳಿಸಿದ್ದೇವೆ..ಅದರ ವಿಧಾನಗಳನ್ನು ಅನುಸರಿಸುತ್ತಿದ್ದೇವೆ ..ಇವುಗಳೆಲ್ಲ ನಿಮಗೇ ವಿಶೇಷವೆಂಬಂತೆ ಕಾಣಿಸ ಬಹುದು ಆದರೇ ನಮಗೇ ಇವುಗಳೆಲ್ಲವೂ ಅಷ್ಟೇ ಅಲ್ಲ ಈ ಸೃಷ್ಟಿಯಲ್ಲಿ ಏನೇ ಆದರೂ ಹೇಗೇ ಆದರೂ ..ಅದರ ಪರಿಣಾವು ಹೇಗೇ ಇದ್ದರೂ ಅದನ್ನೆಲ್ಲ ಸಾಮಾನ್ಯವೆಂದೇ ಭಾವಿಸುತ್ತೇವೆ.  ಹಾಗೂ ಎಲ್ಲವನ್ನೂ ಸ್ವೀಕರಿಸಲು ಸದಾಕಾಲ ಸಿದ್ದರಿರುತ್ತೇವೆ. .ಯಾವ ಘಟನೆಗಳು ಪೃಕೃತಿಯ ವಿರೋದಗಳಲ್ಲ ಮನುಷ್ಯನೂ ಸಹಾ ಪೃಕೃತಿಯಲ್ಲಿ ತೃಣ ಮಾತ್ರ ..ನಾವು ಅಲ್ಲಿ ಪ್ರತೀ ಕ್ಷಣವೂ ಲೀನವಾಗಿರ ಬೇಕಷ್ಟೇ . .ಹುಟ್ಟು ಸಾವುಗಳ ಪ್ರಶ್ನೆಯೂ ಉದ್ಭವಿಸಲಾರದು .. .ಇದುವೇ ಪರಮ ಜ್ಣಾನವೂ ಇದಕ್ಕೂ ಮಿಗಿಲಾದ ಜ್ಣಾನವನ್ನು ಸ್ವೀಕರಿಸುವಷ್ಟೂ ಸಾರ್ಥ್ಯವು ಮನುಷ್ಯ ಮಾತ್ರನಿಗಿರುವುದಿಲ್ಲ.  ಬಾಬಾಜಿಯವರ ತತ್ವವನ್ನು ಜೀರ್ಣಿಸಿಕೊಳ್ಳುವಷ್ಟರಲ್ಲಿ ..ತಲೆಯು ಗಿರಕೀ ಹೊಡೆದಂತಾಗಿತ್ತು…ಆದರೂ ಮಹಾಪ್ರಸಾದವೆಂಬಂತೇ ಎಲ್ಲವನ್ನೂ ಸ್ವೀಕರಿಸಿದೆ-ಹೌದೂ ನಾವು ನಮಗೆ ಆಸಕ್ತಿ ಇದ್ದ ವಿಷಯಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ-ಹೀಗೆ ಸ್ವೀಕರಿಸಿದ ಕ್ಷಣವೇ ಅವು ಕಾರ್ಯರೂಪಗೊಳ್ಳಬೇಕೆಂದಿಲ್ಲ-ಅವುಗಳು ನಮ್ಮ ಮನದಾಳವನ್ನು ಹೊಕ್ಕರೆ ಸಾಕು ಜೀವಿತಾವದಿಯಲ್ಲಿ ಎಂದಾದರೊಂದು ದಿನ ನೆನಪಾಗುತ್ತವೆ ಹಾಗೂ ಉಪಯೋಗಕ್ಕೆ ಬರುತ್ತವೆ  .ಪ್ರೀತಿಯಿಂದ ನನ್ನ ಭುಜ ತಟ್ಟಿದ ಬಾಜಿಯವರು ಮೈತುಂಬಾ ರೋಮಗಳಿಂದಲೇ ಮುಚ್ಚುಹೋಗಿದ್ದ ಹಿರಿಯರೊಬ್ಬರ ಜೊತೆ ಕುಟೀರದಿಂದ ಆಚೆ ಹೋದರು ..ಸದಾನಂದ ನನ್ನ ನಡವಳಿಕೆಗಳನ್ನು ಗಮನಿಸುತ್ತಾ ಮುಗುಳು ನಗುತ್ತಿದ್ದ. . .ರಾತ್ರಿ ಆಯ್ತು …ಆ ದಿನ . .ಶವ ಭಕ್ಷಣೆ ಶವ ಸಂಭೋಗ ಮುಂತಾದ ವಿಪರೀತ ವೆನಿಸುವಂತಹಾ ಪ್ರಯೋಗಗಳು ನೆಡೆದವೂ ನನಗೇ ಅವುಗಳನ್ನು ಒಂದು ಮನೋರಂಜನೆಯೆಂಬಂತೆ ನೋಡವುದು ತಪ್ಪು ..ಪ್ರಯೋಗದಲ್ಲಿ ಬಾಗವಹಿಸಿದ್ದವರೂ ಕ್ರಿಯೆಯಲ್ಲಿ ತೊಡಗಲಿ ಅವು ವೀಕ್ಷಿಸುವ ಪ್ರಯೋಗಗಳಲ್ಲ .. ಎಂದೆನಿಸಿತು ....ಸದಾನಂದನಿಗೇ ಈ ವಿಷಯ ತಿಳಿಸಿದೇ ಅವನು ನನ್ನ ಬೆನ್ನು ತಟ್ಟಿದ ..ನೀನು ಜಾಗೃತನಾಗುತ್ತಿದ್ದೀಯ ವೆರೀ ಗುಡ್ಡ್ . . .ನಿನ್ನ ಪ್ರಜ್ಣೆಯು ಯಾವುದನ್ನು ಹೇಗೇ ಮತ್ತು ಎಷ್ಟು ಸ್ವೀಕರಿಸ ಬೇಕೆಂಬುದನ್ನು ನಿಯಂತ್ರಿಸುತ್ತಿದೇ ಎಂದು ..ನನ್ನನ್ನು ಪ್ರಚೋದಿಸಿದ ..ಹೌದೂ ನಮಗೆ ಕುತೂಹಲಕಾರಿಯಾಗಿರುವ ವಿಷಯಗಳನೆಲ್ಲ ನಾವು ಮನೋರಂಜನೆಗಾಗಿ ತಿಳಿದುಕೊಳ್ಳಬಾರದು -ಏಕೆಂದರೇ ಇಂತಹಾ ಹಲವಾರು ವಿಷಯಗಳ ಉದ್ದೇಶವು ಮನೋರಂಜನೆ ನೀಡುವುದಾಗಲೀ ಅಥವಾ ಪಡೆಯುವುದಾಗಲೀ ಆಗಿರುವುದಿಲ್ಲ- ನಾವು ಯಾವುದೇ ವಿಷಯವನ್ನು ಅದರ ಉದ್ದೇಶವನ್ನು ಅರಿತು ಸ್ವೀಕರಿಸಬೇಕು ಹಾಗೂ ಅದರಲ್ಲಿ ಬಾಗವಹಿಸಬೇಕು-ಒಂದು ವೇಳೆ ಅಂತಹಾ ಉದ್ದೇಶಗಳನ್ನು ನಾವು ಹೊಂದಿಲ್ಲದಿದ್ದಲ್ಲಿ -ಅವುಗಳ ಬಗ್ಗೆ ಇರುವ ಕುತೂಹಲವು ನಮ್ಮ ಆಸಕ್ತಿಯಾಗದಂತೆ ನಿಯಂತ್ರಸಿಕೊಳ್ಳಬೇಕು-ನಿಜಕ್ಕೂ ನನ್ನ ಜೀವಿತಾವದಿಯಲ್ಲಿ ಇಂತಹಾ ಅನುಭವವು ಹಿಂದೆಂದೂ ಆಗಿರಲಿಲ್ಲ ನಾನು ಇಲ್ಲಿಗೆ ಬಂದಿದ್ದು ಸಾರ್ಥಕವೆನಿಸಿತು.  ನಾನು ಪುನಃ ಇಲ್ಲಿಗೆ ಬರಬಹುದೂ ಅಥವಾ ಬರದಿರಬಹುದೂ ಆದರೇ -ಬದುಕಿರುವ ವರೆವಿಗೂ ಇಲ್ಲಿ ನೋಡಿದ ಯಾವ ವಿಷಯವೂ ನನ್ನ,ನಸ್ಸಿನಿಂದ ಮರೆಯಾಗುವುದಿಲ್ಲ-  ಪ್ರತೀಯೊಬ್ಬರ ಜೀವಿತಾವದಿಯಲ್ಲಿ ನೆಡೆಯುವ ವಿಶೇಷ ಘಟನೆಗಳಲ್ಲಿ ಹೇಗೆ ಕೆಲವು ಅವೀಸ್ಮರಣಿಯವಾಗಿರುತ್ತವೆಯೋ ಹಾಗೇ ನನಗೆ ಈ ಮೂರುದಿನಗಳ ಅವೀಸ್ಮರಣೆಯ ದಿನಗಳಾದವು. .ಈ ವಿಷಯಗಳನ್ನು ಯಾರಜೊತೆ ಹೇಗೆ ಹಂಚಿಕೊಳ್ಳಬೇಕೆಂಬ ಹಂಬಲವು ನನ್ನಲ್ಲಿ ಹೆಚ್ಚಾಯ್ತು ನಾನು ಸದಾನಂದನಿಗೆ ಕೇಳಿದೆ. . .ನನ್ನ ಈ ರೋಚಕ ಅನುಭವಗಳನ್ನು ನನ್ನ ಮಿತ್ರರೊಂದಿಗೇ ಹಂಚಿಕೊಳ್ಳಬಹುದೆ ..?   ಅವನು ಹೇಳಿದ . . 

ನೋ ಪ್ರಾಬ್ಲಮ್ಮ್ ಬಟ್ಟ್ ಯಾರಿಗೂ ಯಾವುದೇ ರೀತಿಯ ನೋವುಂಟಾಗದಂತೆ.. 

ತಪ್ಪು ಅಭಿಪ್ರಾಯ ಬರುವಂತೆ ಮಾತ್ರ ಬರೆಯಬೇಡ .. .ನಿನಗೇ ಈ ವಿಷಯಗಳು ತುಂಬಾನೇ ಹೆಚ್ಚು ಆಸಕ್ತಿ ಎಂದು ನನಗೆ ಗೊತ್ತು .. ಬಹುಶಃ ನೀನು ಸೊಗಸಾಗಿಯೇ ಬರೆಯುತ್ತಿಯೆಂದು ಭಾವಿಸಿದ್ದೇನೆ ..ಎನೀ ಹೌ ಆಲ್ ದಿ ಬೆಸ್ಟ್ ಎಂದು..ಬೆನ್ನು ತಟ್ಟಿದ…ಆ ದಿನ ರಾತ್ರಿಯೆಲ್ಲ ಕುಟೀರದಲ್ಲಿ ಮಲಗಿದ್ದವು. .ಮುಂಜಾನೆಯೇ ಬಾಬಾರ ಮಾರ್ಗದರ್ಶನದಂತೆ ಕಾಡಿನಿಂದ ಹೊರ ಬಂದೆವು . . . 

 #ಮರಳಿ ಮನೆಗೆ 

 ಜೀಪುಗಳು ಸಿದ್ದವಿದ್ದವು ಅವುಗಳನ್ನು ಹತ್ತಿಕೊಂಡು ಊರಿನತ್ತ ಪಯಣಿಸಿದೆವು .. 

ಸಂಜೆ ಏಳರ ವೇಳೆಗೆ ನಾವು ಮೊದಲು ತಂಗಿದ್ದ ಬಂಗಲೆಯಲ್ಲಿದ್ದ ನನ್ನ ಬಟ್ಟೆಗಳು ಹಾಗೂ ಕೆಲ ವಸ್ತುಗಳನ್ನು ತೆಗೆದುಕೊಂಡು ರಾತ್ರಿ ಹತ್ತರ ವೇಳೆಗೆ ರೈಲ್ವೇ ಸ್ಟೇಷನ್ ಹತ್ತಿರ ನನಗೆ ಡ್ರಾಪ್ ಕೊಟ್ಟರು . . .ಟ್ರೈನ್ ಹತ್ತಿ ಕುಳಿತೆ ನಿದ್ದೆಯೂ ಆವರಿಸಿತ್ತು ನಿದ್ದೆಯಲ್ಲೂ ಆ ಕಾಡಿನ ರಮಣೀಯ ಹಾಗೂ ರೋಚಕ ದೃಷ್ಯಗಳದ್ದೇ .ಕಾರುಬಾರು…. .ಮರುದಿನ ಮಧ್ಯಾನದ ವೇಳೆಗೆ ..  ಟ್ರೈನ್ ಬೆಂಗಳೂರು ತಲಪಿತ್ತು. . . .ಮಳೆನಿಂತರೂ ಮರದ ಹನಿ ನಿಲ್ಲುವುದಿಲ್ಲ ಹಾಗೆಯೇ ಅಘೋರಿಗಳ ರೋಚಕ ಪ್ರಪಂಚದಿಂದ ಮನೆಗೆ ಬಂದು ನಾಲ್ಕೈದು ದಿನಗಳಾದರೂ ಬಾಬಾಜಿಗಳು ಹೇಳಿದ್ದ ಆ ಮಾತುಗಳು ಪದೇ ಪದೇ ನೆನಪಾಗುತ್ತಿದ್ದವು- 

ನನ್ನ ಹಾಗೂ ನನ್ನ ದೇಹದ ನಡುವಿನ ಭಾಂದವ್ಯವೂ .ಎಲ್ಲಾ ಸಂಭಂದಗಳ ನಡುವಿನ ಭಾಂದವ್ಯಗಳಿಗಿಂತಲೂ ಮಿಗಿಲಾದುದು ನನ್ನ ದೇಹ ಹಾಗೂ ಆತ್ಮದ ನಡುವಿನ ಭಾಂದವ್ಯವೂ ನನ್ನನ್ನು ಸೃಷ್ಟಿಸಿದ ತಂದೆತಾಯಿಗಳು ಹಾಗೂ ನನ್ನ ನಡುವಿನ ಭಾಂದವ್ಯಕ್ಕಿಂತಲೂ ಹೆಚ್ಚಾದುದು-ನಾನೂ ನನ್ನ ಆತ್ಮದೊಂದಿಗೆ ವಿಹರಿಸುತ್ತಿರುವಾಗ ನನಗೆ ಬೇರೇ ಯಾವುದೇ ಜನರ ಬಂದನವೂ ಭಾಂದವ್ಯವೂ ಬೇಕಿರುವುದಿಲ್ಲ- ಆಗ ನಾನು ಈ ಪೃಕೃತಿಯ ಶಕ್ತಿಯಲ್ಲಿ ಕಳೆದುಹೋಗಿರುತ್ತೇನೆ- ಎಲ್ಲರಲ್ಲೂ -ದೇಹ ಆತ್ಮ ಹಾಗೂ ಮನಸ್ಸುಗಳಿವೆ ಅವುಗಳನ್ನು ಕ್ರಮಬದ್ದವಾಗಿ ಬಳಸಬೇಕಷ್ಟೇ ಆತ್ಮ ಶಕ್ತಿಯ ಅಸ್ತಿತ್ವ ವನ್ನು ಅರ್ಥಮಾಡಿಕೊಳ್ಳಲೂ ಹಾಗೂ ಆತ್ಮನ ಪವಿತ್ರತೆಯನ್ನು ನಂಬಲೂ ಸಹಾ ಭಲವಾದಂತಹಾ ಆತ್ಮಶಕ್ತಿಯ ಅಗತ್ಯವಿರುತ್ತದೆ ಅದರ ಕೊರತೆ ಇದ್ದಾಗ ಯಾವುದೇ ರೀತಿಯ ಆದ್ಯಾತ್ಮಕ ವಿಷಯಗಳನ್ನು ಗ್ರಹಿಸಲಾಗದುವುದಿಲ್ಲ ಎಲ್ಲಾತರಹದ ದೃಶ್ಯ ಸಂಗತಿಗಳನ್ನು ನಾವು ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲಎಲ್ಲಾತರಹದ ಶಬ್ಧಗಳನ್ನು ನಾವು ಕಿವಿಗಳಿಂದ ಕೇಳಲು ಸಾಧ್ಯವಿಲ್ಲ ನಾವು ನೋಡಲಾಗದ ಕೇಳಲಾಗದ ಹಲವಾರು ಸಂಗತಿಗಳು ಅಸ್ಥಿತ್ವದಲ್ಲಿವೆ ಹಾಗೆಯೇ ಎಲ್ಲಾ ಸಂಗತಿಗಳನ್ನೂ ಅಸ್ಥಿತ್ವಗಳನ್ನು ನಾವು –ತತ್ವ ಸಿದ್ದಾಂತ ತರ್ಖಗಳಲ್ಲಿ ಹಿಡಿದಿಡಲಾಗುವುದಿಲ್ಲ- ಯಾವುದೇ ಭಾಷೆಯಲ್ಲಿ ಬರೆದಿಡಲಾಗುವುದಿಲ್ಲ-ನಾವೂ ಇಂತಹಾ ಸಂಗತಿಗಳನ್ನು –ಭಾವಿಸಿಕೊಳ್ಳ ಬಹುದು ಧ್ಯಾನಿಸ ಬಹುದು- ಹಾಗೂ ಇವುಗಳ ಪ್ರಭಾವಕ್ಕೊಳಪಡಬಹುದು-ಇಂತಹಾ ಸಂಗತಿಗಳ ಆತ್ಮ ಹಾಗೂ ಪರಮ ಆತ್ಮ ಕಾರಕ ಸಂಗತಿಗಳಾಗಿರುತ್ತವೇ ನಿಮ್ಮ ಆಸಕ್ತಿಯೇ ನಿಮ್ಮ ಜೀವನವು. . . 

ಆತ್ಮೀಯ ಓದುಗ ಮಿತ್ರರೇ- 

ಇದನ್ನು ಓದಿದಾಗ ನಿಮಗೂ ಸಹಾ ಒಂದು ವಿಶೇಷ ಅನುಭವವು ಉಂಟಾಗಿದ್ದರೆ - ನನಗದು ಧನ್ಯತೆಯ ಭಾವವನ್ನು ಮೂಡಿಸುವುದು- 

ಇದನ್ನು ಓದಿರುವ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಸ್ವಾಗತಿಸುತ್ತೇನೆ 

   

ಟಿ ಎಸ್ ಉಮೇಶ್ ತಡಸೂರು ಅವರಿಂದ ಇನ್ನಷ್ಟು ಪುಸ್ತಕಗಳು

1

ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು

27 June 2023
0
0
0

 ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು     ಯುನಿವರ್ಸಿಟಿಯ ಆ ದಿನಗಳು  ಒಂದಾನೊಂದು ಕಾಲದಲ್ಲಿ ತತ್ವಶಾಸ್ತ್ರವನ್ನು ಓದುವುದು ಒಂದು ಪ್ರತಿಷ್ಟೆಯ ವಿಷಯವೆಂದು ಭಾವಿಸಲಾಗಿತ್ತು ದಿನಗಳು ಉರುಳಿದಂತೇ ಜೀವನ ನಿರ್ವಹಣೆಗೆ ಉಪಯೋಗವಾಗದ ವಿಷಯಗಳನ್ನು

2

ಮೈನವಿರೇಳಿಸುವ ಆ ಎರಡು ಗಂಟೆಗಳು

27 June 2023
0
0
0

U/A ಮೈ ನವಿರೇಳಿಸುವ ಆ ಎರಡು ಗಂಟೆಗಳು (@ NH 4 - SIRA TO CHITRADURGA)  ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ಹೋಗುವ ಬಸ್ಸು ಅರ್ಧ ಗಂಟೆ ತಡವಾಗಿ ಮಧ್ಯರಾತ್ರಿ ಹನ್ನೆರಡಕ್ಕೆ ಸಿರಾ ಬಸ್ ಸ್ಟಾಂಡಿಗೆ ಬಂದಿತ್ತು . ಅಂದು ಅಮವಾಸೆಯ ಕ

3

ಹೀಗೊಂದು ರೋಚಕ ಕನಸು ..

27 June 2023
0
0
0

ಹಿಗೂ ಉಂಟೇ #(ಸೈಕಾಲಾಜಿಕಲ್ ಥ್ರಿಲ್ಲರ್)ಸೈಕಾಲಾಜಿಕಲ್ ಥ್ರಿಲ್ಲರ್) ಅದೊಂದು ಸುಂದರವಾದ ಚರ್ಚ್ ಸೂರ್ಯನ ಕಿರಣಗಳು ಚರ್ಚ ನ ಪೂರ್ವ ದಿಕ್ಕಿನಲ್ಲಿದ್ದ  ದೊಡ್ಡ ದೊಡ್ಡ  ಕಿಟಕಿಗಳ ಸರಳುಗಳನ್ನು ನುಸುಳಿ ಒಳ ಬಂದು ಒಳಾಂಗಣದಲ್ಲಿ ಬೆಳಕುಚ

---

ಪುಸ್ತಕವನ್ನು ಓದಿ