shabd-logo

ಮೈನವಿರೇಳಿಸುವ ಆ ಎರಡು ಗಂಟೆಗಳು

27 June 2023

0 ವೀಕ್ಷಿಸಲಾಗಿದೆ 0


U/A

ಮೈ ನವಿರೇಳಿಸುವ ಆ ಎರಡು ಗಂಟೆಗಳು

(@ NH 4 - SIRA TO CHITRADURGA) 

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ಹೋಗುವ ಬಸ್ಸು ಅರ್ಧ ಗಂಟೆ ತಡವಾಗಿ ಮಧ್ಯರಾತ್ರಿ ಹನ್ನೆರಡಕ್ಕೆ ಸಿರಾ ಬಸ್ ಸ್ಟಾಂಡಿಗೆ ಬಂದಿತ್ತು .

ಅಂದು ಅಮವಾಸೆಯ ಕತ್ತಲು .ಮೋಡವೂ ಆವರಿಸಿತ್ತು ಇನ್ನೇನು ಮಳೆ ಬರ ಬಹುದೇನೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಸಿರಾ ಬಸ್ ಸ್ಟಾಂಡಿನಲ್ಲಿ ಕೆಲವು ಪ್ರಯಾಣಿಕರು

ಆ ಬಸ್ಸಿನಿಂದ ಕೆಳಗಿಳಿದರು 

ಮತ್ತೆ ಕೆಲವರು ಹತ್ತಿದರು... 

ಅದರಲೊಬ್ಬ ಕುಡಿದ ಮತ್ತಿನಲ್ಲಿದ್ದ. ಸಣಕಲು ವ್ಯಕ್ತಿಯೊಬ್ಬ ..ಡೋರಿನ ಬಳಿ ಸಹ ಪ್ರಯಾಣಿಕನ ಜೊತೆ ಜಗಳವಾಡುತ್ತಲೇ ಬಸ್ಸು ಹತ್ತಿದ.

ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ನಿದ್ದೆಯ ಮಂಪರಿನಲ್ಲಿದ್ದರು ಅವರಿಗೆ ಇದಾವುದರ ಪರಿವೇ ಇರಲಿಲ್ಲ..

ಆದರೇ ಬಸ್ಸಿನ ಮದ್ಯಬಾಗದ ಸೀಟಿನಲ್ಲಿ

ಉದ್ದವಾದ ಕೂದಲು ಬಿಟ್ಟಿದ್ದ  ಚೂಪು ಗಡ್ಡದ  ವ್ಯಕ್ತಿಯೊಬ್ಬ ಎಲ್ಲವನ್ನೂ ನೋಡುತ್ತಾ

ಏನೂ ಪ್ರತೀಕ್ರಿಯಿಸದೇ ಸುಮ್ಮನೇ ಕುಳಿತಿದ್ದ,,

ಅವನ ಮುಖವು ನಿರ್ಲಿಪ್ತ ಭಾವದಿಂದ ಕೂಡಿತ್ತು..ಅವನು ನಿದ್ರಿಸುತ್ತಿದ್ದಾನೋ ಅಥವಾ ಎಚ್ಚರವಾಗಿದ್ದಾನೋ ಎಂದು ಸುಲಭವಾಗಿ ತಿಳಿಯಲಾಗಾಗುತ್ತಿರಲಿಲ್ಲ

ಬಸ್ಸಿನ ಕೆಳಗೆ ನಿಂತಿದ್ದ ಕಂಡಕ್ಟರ್ . ಚಿಲ್ಲರೆ ಕೊಡುವ ವಿಷಯಕ್ಕೆ ..ಪ್ರಯಾಣಿಕನೊಂದಿಗೆ

ಕಿರಿ ಕಿರಿ ಮಾಡಿಕೊಳ್ಳುತ್ತಿದ್ದ ..

ಯಾಕೋ ಏನೋ ಆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್ ಇವರಿಬ್ಬರ ಮೂಡ್ ಸರಿಯಿದ್ದಂತೆ ಕಾಣಲಿಲ್ಲಾ ..



ಡ್ರೈವರ್  ತನ್ನ ಸೀಟಿನ ಅಕ್ಕ ಪಕ್ಕ ಯಾವುದೋ ಕೆಲವು ವಸ್ತುಗಳನ್ನು ದಡ ಬಡ ಶಬ್ಧ ಮಾಡುತ್ತಿದ್ದ

ಅಂತೂ ಇಂತೂ..ಸಿರಾ ದಿಂದಾ ಬಸ್ಸು ಹೊರಟಿತು ..

ಬೇಗ ಬೇಗ ಚಿತ್ರದುರ್ಗ ತಲುಪ ಬೇಕೆಂದು ವೇಗವಾಗಿಯೆ ಡ್ರೈವ್ ಮಾಡುತ್ತಿದ್ದ....

ಬಸ್ಸು ತಾವರೆಕೆರೆಯ ಹತ್ತಿರ ಬರುತ್ತಿದ್ದಂತೆ

ಎಂಟತ್ತು ಜನ ಹೆಂಗಸರು ರಸ್ತೆಯ ಬದಿಯಲ್ಲಿ ನಿಂತು ವೇಗವಾಗಿ ಬರುತ್ತಿದ್ದ ಬಸ್ಸಿಗೆ  ಕೈ ತೋರಿಸುತ್ತಾ ..



.ನಿಲ್ಲಿಸೀ ನಿಲ್ಲಿಸೀ ಎಂದು ಕೂಗಿಕೊಳ್ಳುತ್ತಿದ್ಸದರು

ಆಕ್ಚೂಲಿ. . . ಅದು ಎಕ್ಸ್ ಪ್ರೆಸ್ ತಾವರೆಕೆರೆಯ ಬಳಿ ಸ್ಟಾಪ್ ಇರಲೇ ಇಲ್ಲಾ ಆದರೂ ಕೂಡ

ಡ್ರೈವರ್ ನ ಮಾನವೀಯ ಪ್ರಜ್ಣೆಯೂ ಜಾಗರೂಕವಾಗಿ..

ಅಯ್ಯೋ ಯಾವುದೋ ಮದುವೆಗೋ .ಅಥವಾ ಇನ್ನಾವುದೋ ಕಾರ್ಯಕ್ರಮಕ್ಕೋ ಬಂದಿರಬಹುದಾದ ಮಹಿಳೆಯರಿರಬೇಕೆಂದು ..ಬಸ್ಸು ನಿಲ್ಲಿಸಿದ

ಬಸ್ಸು ನಿಂತ ಕೂಡಲೇ ಆ ಹೆಂಗಸರೆಲ್ಲರೂ ದಡ ದಡ ನೇ ಬಸ್ಸಿನೊಳಗೆ ಹತ್ತಿದರು..

ಅವರು ಹತ್ತಿದ ಕೂಡಲೆ ಬಸ್ಸಿನೊಳಗೆಲ್ಲ ಘಮ ಘಮಿಸುವ ಸುಘಂಧ ದೃವ್ಯದ (ಪರ್ಪ್ಯೂಮ್)  ವಾಸನೆಯು ತುಂಬಿಕೊಂಡಿತು.

ಅವರೆಲ್ಲರೂ ಮೈ ಮಾಟದ ಸುಂದರಿಯರಾಗಿದ್ದರು..

ಅವರನ್ನು ನೋಡಿದ ಕೂಡಲೇ ಅರೆಬರೆ ನಿದ್ದೆಯಲ್ಲಿದ್ದವರು ತಮ್ಮ ನಿದ್ದೆಗ ವಿದಾಯ ಹೇಳಿದರು .

ಕೆಲವು ಗಂಡಸರು ತಮ್ಮ ಪಕ್ಕದಲ್ಲಿದ್ದ ಖಾಲೀ ಸೀಟುಗಳಲ್ಲಿ ಕೂರುವಂತೇ ಆ ಸುಂದರಿಯರನ್ನು ಕೇಳಿಕೊಂಡರು.

.ಆ ಸುಂದರಿಯರಾದರೂ ಜಾಗ ಸಿಕ್ಕಡೆಯಲ್ಲಾ ಕುಳಿತುಕೊಂಡರು ..

ಬಸ್ಸಿನಲ್ಲಿದ್ದ ಕೆಲವು ಹೆಂಗಸರು ತಮ್ಮ ಗಂಡಂದಿರನ್ನ ಪಕ್ಕಕ್ಕೆ ಎಳೆದುಕೊಂಡರು..

ಕಂಡಕ್ಟರ್ ಸೀಟಿನ ಪಕ್ಕವೇ ಕುಳಿತ್ತಿದ್ದ ಸುಂದರಿಯೊಬ್ಬಳು ತನ್ನ ಸೆರಗು ಜಾರಿಸಿಕೊಂಡು ಕಂಡಕ್ಟರ್ ನನ್ನು ನೋಡುತ್ತಾ ತನ್ನಾ ಲಿಪ್ಸ್ಟಿಕ್ ಹಚ್ಚಿದ ತುಟಿಗಳ ನಡುವಿನ  ಹೊಳಪು  ಹಲ್ಲುಗಳನ್ನು ತೋರಿಸಿದಳು .. ಅವಳ ಮೋಹಕ ನಗೆಯನ್ನು ಕಂಡು  ಮರುಳಾದ ಕಂಡಕ್ಟರ್ ತನ್ನ ಪಾನ್ ಪರಾಕ್ ಕರೆಯ   ಹಳದಿ ಬಣ್ಣದ  ಹಲ್ಲುಗಳ ದರುಶನ ಮಾಡಿಸಿದನು...

ನೀವು ಎಲ್ಲಿಗೆ ಹೋಗಬೇಕೆಂದು ಕೇಳಿದನು ..

ಆಗ ಅವಳು ನಾವೆಲ್ಲರೂ ಚಿತ್ರದುರ್ಗಕ್ಕೇ ಹೋಗಬೇಕು ನಮ್ಮೆಲ್ಲರ ಟಿಕೆಟ್ ನಾನೇ ತೆಗೆದುಕೊಳ್ಳುತ್ತೇನೆಂದು ಹೇಳಿದಳು...

ಬಸ್ಸಿನ ಲೈಟ್ ಆಪ್ ಆಯ್ತು

ಬಸ್ಸು ವೇಗವಾಗಿ ಚಲಿಸುತ್ತಲಿತ್ತು ...

ಕೆಲವೇ  ನಿಮಿಷಗಳನಂತರ

ಸ್ವಲ್ಪ ದೂರದಲ್ಲೆ  ರಸ್ತೆಯಲ್ಲಿ ಕೆಂಪು ಬೆಳಕಿನ ದೀಪವು ಕಾಣಿಸಿತು 

ಅಲ್ಲಿ ಹತ್ತಾರು ಜನರು ಗುಂಪು ಆರೋಗ್ಯ ಇಲಾಖೆಯ 108 ವಾಹನ ಹಾಗೂ ಪೋಲೀಸಿನವರು ಇದ್ದರು 

ಅಲ್ಲಿದ್ದ ಕೆಲ ಜನರು ಅಯ್ಯೋ ಅಮ್ಮಾ ಎಂದು ಅಳುತ್ತಿದ್ದ  ಆಕ್ರಂದನದ  ಶಬ್ಧವು ಬಸ್ಸಿನೊಳಗಿದ್ದವರಿಗೆಲ್ಲ ಕೇಳಿಸುತ್ತಿತ್ತು .

ಎಚ್ಚರವಾಗಿದ್ದ . ಎಲ್ಲರ ಗಮನ ಆಕಡೆ ಸೆಳೆಯಿತು

ಆ ಜನರ ಗುಂಪಿನ ಪಕ್ಕದಲ್ಲೇ ಬಸ್ಸನ್ನು ಕ್ಷಣ ಕಾಲ ನಿಲ್ಲಿಸಿ ದ ಡ್ರೈವರ್ ರಸ್ತೆಯಾಚೆ ಕಣ್ಣಾಡಿಸಿದ

ಏನೂ ಆಕ್ಸಿಡೆಂಟಾ. . .?

ಎಂದು ಕೇಳಿದ

ಜನರ ಗುಂಪಿನಲ್ಲಿದ್ದವನೊಬ್ಬ ಹೇಳಿದ . .

ಹೌದೂ ಕಾರು ಲಾರಿಗೆ ಗುದ್ದಿದೆ ಮೂರು ಸ್ಪಾಟಾಗೈತೆ ಮೂರು ಜನ ಸೀರಿಯಸ್ ಎಂದು ಹೇಳಿದ..

ಅವನ ಮಾತು ಕೇಳಿದ ಬಸ್ಸಿನಲ್ಲಿದ್ದವರಿಗೆ ಜಿವ ಜಲ್ಲ್ ಎಂದಿತ್ತು. . 

ಬಸ್ಸು ಹೊರಟಿತು . .

ಒಬ್ಬಳು ಸುಂದರಿಯು ಕುಡಿದು ಟೈಟಾಗಿ ಕುಳಿತ್ತಿದ್ದ. ಸಣಕಲು ವ್ಯಕ್ತಿಯ ಪಕ್ಕದಲ್ಲಿ ಕುಳಿತ್ತಿದ್ದಳು ...

ಅವನು ಅವಳ ಮುಖವನ್ನೊಮ್ಮೇ ನೋಡಿದ ಅದು ಸಾಮಾನ್ಯವಾದಂತಹಾ ಮಹಿಳೆಯ ಮುಖದಂತಿರದೆ ಕೋರೆಯಹಲ್ಲುಗಳು ಬಾಯಿಯಿಂದ ಹೊರ ಬಂದಿದ್ದವು ...ತುಟಿ ಸೀಳಿಕೊಂಡಿತು  ಅವಳ ಕಣ್ಣುಗಳು ನೀಲಿ ಬಣ್ಣದಿಂದ ಕೂಡಿದ್ದವು..

ಅವಳ ತಲೆಕೂದಲು ನೆಟ್ಟಗೆ ನಿಂತಿದ್ದವು



ಇಂತಹ ಭಯಂಕರ ರೂಪವನ್ನು ನೋಡಿದ ಆ ಸಣಕಲು ಅಸಾಮಿಯು ಭಯದಿಂದ ಜೋರಾಗಿ ಕಿರುಚಿದನು ..

ಅವನ ಕಿರುಚಾಟವನ್ನು ಕೇಳಿದ ಬಸ್ಸಿನಲ್ಲಿದ್ದವರೆಲ್ಲರೂ ಎಚ್ಚರವಾದರು , ಹಾಗೂ  ಲೈಟ್ ಆನ್ ಮಾಡಿ ಕಿರುಚುತಿದ್ದ ವ್ಯಕ್ತಿಯ ಕಡೆ ನೋಡಿದರು 

ಅಲ್ಲಿ ಏನೂ ನೆಡೆದೇ ಇಲ್ಲವೆಂಬಂತೇ ಇತ್ತು ಪಕ್ಕದಲ್ಲಿದ್ದ ಸುಂದರಿಯೂ ಸುಂದರಿಯಂತೆಯೇ ಇದ್ದಳು..

ಅವನು ಮಾತ್ರ ಭಯದಿಂದ ನಡುಗುತ್ತಿದ್ದ..

ಕೆಲವು ಜನರು ಆ ಸಣಕಲು ಅಸಾಮಿಯನ್ನು ಬೈಯ್ಯಲಾರಂಭಿಸಿದರು ..

ಯಾಕ್ರೀ ..ನೀವು    ಜರ್ನಿ ಟೈಮ್ ನಲ್ಲಿ ..ಈ ತರಹ  ಪ್ಯಾಸೆಂಜರ್ ಗಳಿಗೆ  ಗೆಲ್ಲಾ ಕಿರಿ ಕಿರಿ ಮಾಡ್ತೀರಾ...

ಸ್ವಲ್ಪ ಕಡಿಮೇನೇ ಕುಡಿದು ಬಂದಿದ್ರೇ ಆಗ್ತಿರ್ಲಿಲ್ವಾ...?

ಮಧ್ಯವನ್ನು ಕುಡಿದಿದ್ದ ಸಣಕಲು ವ್ಯಕ್ತಿಯು ಏನೂ ಹೇಳಲಾದೆ ಸುಮ್ಮನೇ ಕುಳಿತಿದ್ದನು

ಬಸ್ಸು ಚಲಿಸುತ್ತಲೇ ಇತ್ತು 

ಇನ್ನೇನು ಹಿರಿಯೂರು ಸಮೀಪಿಸುವುದರಲ್ಲಿತ್ತು ..

ಒಂದುರೀತಿಯ ಕೆಟ್ಟ ವಾಸನೆಯು ಬಸ್ಸಿನ ತುಂಬೆಲ್ಲಾ ಆವರಿಸಿತು ಅದು ಕೊಳೆತ ಶವದಷ್ಟು ಕೆಟ್ಟವಾಸನೆ ..

ಅಂತಹಾ ವಾಸನೆಯ ಅನುಭವವೂ ಯಾರಿಗೂ ಎಂದೂ ಆಗಿರಲಿಲ್ಲ..



ಎಲ್ಲರೂ ಮೂಗು ಮುಚ್ಚಿಕೊಂಡರು .

ಆದರೇ ಆ ಸುಂದರಿಯರು ಮಾತ್ರ ಏನೂ ಆಗಿಲ್ಲವೆಂಬಂತೇ ಸುಮ್ಮನೇ ಇದ್ದರು...

ಆ ವಾಸನೆಯು ಎಲ್ಲಿಂದ ಬರುತ್ತಿದೆ ಎಂಬುದೂ ಯಾರಿಗೂ ತಿಳಿಯಲಿಲ್ಲ

ಸುಮ್ಮನೆ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು

ಎಲ್ಲರಲ್ಲೂ ಒಂದುರೀತಿಯ ದುಗುಡ  ಆತಂಕ..ಆಶ್ಚರ್ಯ

ಮನಸಿನಲ್ಲಿ ಒಂದು ರೀತಿಯ ದುಗುಡವಾದಂತೆ ಅನುಭವವಾಯ್ತು.. 

 ಕಿಟಕಿಯ ಪಕ್ಕದಲ್ಲಿ  ಕುಳಿತಿದ್ದವರರಲ್ಲಿ ಕೆಲವರು  ಕಿಟಕಿಯ ಗ್ಲಾಸ್ ಸರಿಸಿ ಹೊರಗೆ‌ ನೋಡಿದರು

ರಸ್ತೆ ಬದಿಯ ಕೆಲವು ಅಂಗಡಿಗಳು ತೆರೆದಿದ್ದವು...





ಅವುಗಳ ಮುಂದೆ ಕೆಲವು ಜನರು ಚಹಾ ಕುಡಿಯುತ್ತಾ ಧೂಮಪಾನ ಮಾಡುತ್ತಿದ್ದ ದೃಶ್ಯಗಳು  ಅರೆ ಕತ್ತಲಿನಲ್ಲಿ ಅಸ್ವಷ್ಟವಾಗಿ ಕಾಣಿಸುತ್ತಿದ್ದವು..





ಕೆಲವು ಅಂಗಡಿಗಳನ್ನು ಮಂದ ಬೆಳಕಿನ ಸೀರಿಯಲ್ ಸಟ್ ಗಳಿಂದ ಅಲಂಕರಿಸಲಾಗಿತ್ತು..

ಅದು   ನ್ಯಾಷಿನಲ್ ಹೈವೆ ಆದುದರಿಂದ ರಾತ್ರಿಯೆಲ್ಲ ಕೆಲವು ಪೆಟ್ಟಿ ಅಂಗಡಿಗಳು ರಸ್ತೆ ಬದಿಯ ಸಣ್ಣ ಪುಟ್ಟ ಹೋಟೆಲ್ ಗಳು ಡಾಬಾಗಳು ಹಗಲಿನಂತೆಯೇ ಚಾಲ್ತಿಯಲ್ಲಿರುತ್ತಿದ್ದವು

ಸ್ವಲ್ಪ ಸಮಯದ ನಂತರ ಆ ಕೆಟ್ಟ ವಾಸನೆಯು ಕಡಿಮೆ ಆದಂತಾಯ್ತು ..

ಕೆಲವು ಪ್ರಯಾಣಿಕರು ಬಸ್ಸಿನ ಕಿಟಕಿ ಗಾಜುಗಳನ್ನು ಕ್ಲೋಸ್ ಮಾಡಿ..ನಿದ್ದೆಯ ಜೊಂಪಿಗೆ  ಜಾರ ಬಯಸಿದರು

ಹಿರಿಯೂರು ಬಸ್ ಸ್ಟಾಂಡ್ ಬಂತು ..

ಆದರೇ ಅಲ್ಲಿ ಯಾರೂ ಈ ಬಸ್ಸಿಗೆ ಹತ್ತಲೂ ಇಲ್ಲಾ ಇಳಿಯಲೂ ಇಲ್ಲ.

ಮತ್ತೆ ಬಸ್ಸು ಹೊರಟಿತು..

ಕೆಲ ತಿಂಗಳುಗಳ ಹಿಂದೆ ಕೆಲವು ಮಹಿಳೆಯರನ್ನು ಮುಂಬೈನಿಂದ..ಬೆಂಗಳೂರಿಗೆ ವಾಹನವೊಂದರಲ್ಲಿ ಕರೆ ತರುತ್ತಿದ್ದರು ..

 ಈ ಮಹಿಳೆಯರು ಕೆಂಪು ಹಾಗೂ ಬಿಳಿ  ಬಣ್ಣದ .ಸುಂದರಿಯರಾಗಿದ್ದರು



ಅವರಲ್ಲಿ ಕೆಲವು ಸುಂದರಿಯರು ತೆಳು ಮತ್ತು ಉದ್ದವಾದ ನಡುವನ್ನು ಹೊಂದಿದ್ದರು  ಮತ್ತೆ ಕೆಲವರು  ಆಕರ್ಷಕ ವಾಗಿರುವ ದಪ್ಪ ಮತ್ತು  ಚೂಪು ತುದಿಯ   ಸ್ಥನಗಳ  ಮೋಹಕ ಮೈಮಾಟದವರಾಗಿದ್ದರು  ಪುರುಷರನ್ನು ಆಕರ್ಷಿಸಲೆಂದೇ ತಮ್ಮ ಆಕರ್ಷಕ ಒಳ ಉಡುಪುಗಳು ಕಾಣಿಸುವಂತಹಾ ಟ್ರಾನ್ಸ್ಪರೆಂಟ್ ಬಟ್ಟೆಗಳನ್ನು ಧರಿಸಿಕೊಳ್ಳುತ್ತಿದ್ದರು   



ಈ ಸುಂದರ ಮಹಿಳೆಯರನ್ನು ಬೆಂಗಳೂರಿನ ಕೆಲವು

ಲೈವ್ ಬ್ಯಾಂಡ್ ಗಳಲ್ಲಿ ಡ್ಯಾನ್ಸ್ ಮಾಡಲು ಹಾಗೂ

ಮಸಾಜ್ ಪಾರ್ಲರ್ ಗಳಲ್ಲಿ .ಕೆಲಸ ಮಾಡಲು  ಮತ್ತು ಕೆಲವು ವಿ ಐ ಪಿ ಗಳಿಗೆ ಎಸ್ಕಾರ್ಟ್ ಗಳಲ್ಲಿ ಸೆಕ್ಸ್ ಸರ್ವೀಸ್ ನೀಡಲು ಈ ಸುಂದರಿಯರನ್ನು ಕರೆತರುತ್ತಿದ್ದರು...





ಇಂತಹಾ ವಿಷಯಗಳಲ್ಲಿ ಈ ಸುಂದರಿಯರು ಪಳಗಿದವರಾಗಿದ್ದರು .ಹೀಗೆ ಕರೆ ತರುವಾಗ

ಹಿರಿಯೂರು ಸಿರಾ ನಡುವೆ ..ಮದ್ಯರಾತ್ರಿಯ ಸಮಯದಲ್ಲಿ..

ಆ ವಾಹನ ಮತ್ತು ಲಾರಿ ನಡುವೆ ಅಪಘಾತವಾಗಿ ವಾಹನದಲ್ಲಿದ್ದಾ ಆ ಹತ್ತೂ ಜನ ಮಹಿಳೆಯರೂ ಸತ್ತುಹೋಗಿದ್ದರು..

ವಾಹನವು ಗುರುತು ಸಿಕ್ಕದಂತೆ ಜಜ್ಜಿ ಹೋಗಿತ್ತು...

ಆ ಮಹಿಳೆಯರ ದೇಹಗಳು ಕಲಸಿದ ಮಾಂಸದ ಮುದ್ದೆಗಳಾಗಿದ್ದವು...

ಆ ಅಪಘಾತವನ್ನು ಹತ್ತಿರದಿಂದ . ನೋಡಿದ್ದ. ರಸ್ತೆ ಬದಿಯ ಜನರಿಗೆ .. ವಾರಗಳ ಕಾಲ ಊಟವನ್ನು ಮಾಡಲು ಸಹಾ ಹೊಗ್ಗುತ್ತಿರಲಿಲ್ಲ

ಈ ಅಪಘಾತದ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಸಾರವಾಗಿತ್ತು.....

ಅಪಘಾತದಲ್ಲಿ ಮೃತರಾದ. ಆ ಹತ್ತು ಜನ ಮಹಿಳೆಯರು ದೆವ್ವವಾಗಿ ಅದೇ ರಸ್ತೆಯಲ್ಲಿ ಜನರನ್ನು ಪೀಡಿಸುತ್ತಿರುತ್ತಾರೆಂಬ ಸುದ್ದಿಯು ಅಪಘಾತವಾದ ಒಂದೆರಡು ವಾರಗಳಲ್ಲೇ ಹಬ್ಬಿತ್ತು

ರಸ್ತೆಬದಿಯ ಡಾಬಾಗಳು ಹಾಗೂ ಅಂಗಡಿಗಳು

ಮತ್ತು ಅಕ್ಕ ಪಕ್ಕದ ಹಳ್ಳಿಗಳ ಜನರು ಪರಸ್ಪರ

ಆ ಮಹಿಳೆಯರ. ದೆವ್ವಗಳ ಬಗ್ಗೆ ಭಯದಿಂದ ಮಾತನಾಡಿಕೊಳ್ಳುತ್ತಿದ್ದರು

ರಸ್ತೆ ಬದಿಯ ಕೆಲವು ನೈಟ್ ಡಾಬಾಗಳ .. ಜನರು ನಾವು ಕಣ್ಣಾರೆ ಕಂಡಿದ್ದೇವೆಂದು ಈಗಲೂ ಹೇಳುತ್ತಾರೆ-




ಹಿರಿಯೂರು ಟಿ ಬಿ ಸರ್ಕಲ್ ನ ನಂತರ ಬರುವ ರಸ್ತೆ ಬದಿಯ. ನೈಟ್ ಡಾಬಾವೊಂದರ ಮುಂದಿರುವ ಬೀಡಾ ಸ್ಟಾಲಿನ ಬಸಂತ ಹೇಳುವುದನ್ನು ಕೇಳಿದರೆ ಎಂತವರಿಗೂ ಸಹಾ ಎದೆ ಜಲ್ಲ್ ಎನ್ನುತ್ತದೆ

ಹಾಗೂ ಅವನು ಹೇಳಿದ್ದನ್ನು ನಂಬಲೋ ಬಿಡಲೋ ಎಂಬಂತಹಾ ಗೊಂದಲವೂ ಮೂಡುತ್ತದೆ...

ನೈಟ್ ಲಾರಿ ಡ್ರೈವ್ ಮಾಡುವ. ಪಂಜಾಬಿನ ಲಾರಿಗಳ ಡ್ರೈವರ್ ಗಳಾಗಿರುವ ಸರ್ಧಾರ್ ಜಿ  ಗಳು ಈ ಡಾಬಾದ ಹೆಚ್ಚು ಗಿರಾಖಿಗಳಾಗಿದ್ದರು



ಈ ಸರ್ಧಾರ್ ಜಿ ಗಳು    ತಾವೂ ಮತ್ತು ತಮ್ಮ ವಾಹನಗಳನ್ನು  ರಸ್ಥೆಗಳ ಬದಿಯಲ್ಲಿ  ಪೀಡಿಸುವ ಹಾಗೂ ವಾಹನದ ಹಿಂದೆ ಬಂದು ಮೇಲೇರುವಂತಹಾ   ಭೂತ ಪಿಶಾಚಿಗಳು ಮತ್ತು  ದುಷ್ಟ ಶಕ್ತಿಗಳಿಂದ ಕಾಪಾಡಿಕೊಳ್ಳಲು    ಬೃಹತ್ ಲಾರಿಗಳ ಹಿಂಬದಿಯಲ್ಲಿ  ಹರಿದ  ಅಥವಾ ಹಳೆಯ ಚಪ್ಪಲಿಗಳನ್ನು ಕಟ್ಟಿ ಜೋತು ಬಿಟ್ಟಿರುತ್ತಿದ್ದರು 



ಹೀಗೆ ಲಾಂಗ್ ಡ್ರೈವ್ ಮಾಡುವಂತಹಾ ಚಾಲಕರು ಮದ್ಯರಾತ್ರಿಯ ನಂತರವೇ ತಮಗೆ ಅನುಕೂಲವೆನಿಸಿದ  ಡಾಬಾಗಳ ಪಕ್ಕದಲ್ಲಿ    ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು ಹಾಗೂ   ಊಟದ ನಂತರ ಒಂದು ಪಾನ್  ಬೀಡಾ ಜಿಗಿದು  ಒಂದು ಸ್ಮೋಕ್ ಮಾಡಿದ ನಂತರ   ಕೆಲ ಕಾಲ ವಿಶ್ರಮಿಸಿಕೊಂಡು   ಪುನಃ ಒಂದು ದೊಡ್ಡ ಗ್ಲಾಸ್ ನಲ್ಲಿ ಮಸಾಲೆ ಚಹಾ ಕುಡಿದು  ಪಯಣವನ್ನು ಮುಂದುವರೆಸುತ್ತಿದ್ದರು 

ಹೀಗಾಗಿ  ರಸ್ತೆ ಬದಿಗಳ ಡಾಬಾಗಳಲ್ಲಿನ  ಹೆಚ್ಚು ವ್ಯಾಪಾರ ರಾತ್ರಿ ಹತ್ತರ ನಂತರ ಬೆಳಿಗಿನ ನಾಲ್ಕರ ವರೆವಿಗೂ ನೆಡೆಯುತ್ತಿತ್ತು...

ಹಿರಿಯೂರಿನ ಟಿ ಬಿ ಸರ್ಕಲ್ ನಿಂದ ಸ್ವಲ್ಪ ದೂರವಿರುವ   ಡಾಬಾದ ಮುಂದಿದ್ದ .ಬೀಡಾ ಅಂಗಡಿ ಬಸಂತ ನಿಗೆ ರಾತ್ರಿಯ ವ್ಯಾಪಾರವೇ ಹೆಚ್ಚು ಹೀಗಾಗಿ ಅವನು ಅವನಿಗಿಷ್ಟವಾದ ಹಳೆಯ ಹಿಂದಿ ಸಿನಿಮಾಗಳ  ಹಾಡುಗಳನ್ನು ಕೇಳುತ್ತಾ ರಾತ್ರಿಯಿಡೀ ಬೀಡಾ ವ್ಯಾಪಾರ ಮಾಡುತ್ತಿದ್ದ 

ಆದೊಂದುದಿನ ಹುಣ್ಣಿಮೆಯ ರಾತ್ರಿ ..

ಸಮಯ ಸರಿ ಸುಮಾರು ಒಂದು ಗಂಟೆ. 

ಬಸಂತನಿಗೆ ಹಾಗೆಯೇ ನಿದ್ದೆಯ ಜೊಂಪು ಹತ್ತಿತ್ತು...

ಸುಮದುರವಾಗಿ ಕೇಳುತ್ತಿದ್ದ ..

ಹಿಂದಿ ಹಳೆ ಸಿನಿಮಾದ ಹಾಡು ಅವನ ಒಂದು ರೀತಿಯ ಮಂಪರಲ್ಲಿ ತೇಲಿಸುತ್ತಿತ್ತು .

ಕೆಲ ಸಮಯದ ನಂತರ..

ತನ್ನ ಮುಂದೆ ಕಾಲ್ಘೆಜ್ಜೆ ಸಪ್ಪಳವು ಕೇಳಿಸಿದಂತಾಯ್ತು...

ಆಶ್ಚರ್ಯದಿಂದ. ಕಣ್ಣು ಬಿಟ್ಟ..ನೋಡಿದ

ಐದಾರು ಸುಂದರ ಮಹಿಳೆಯರು ತೆಳುವಾದ ಬಿಳಿ ಮತ್ತು ತಿಳಿ ಹಳದಿ  ಬಣ್ಣದ ಸೀರೆಯುಟ್ಟು ಬೀಡಾ ಅಂಗಡಿಯ ಮುಂದೆ‌

ನರ್ತಿಸುತ್ತಿದ್ದರು...ಕೆಲವು ಸುಂದರಿಯರು ಗಾಳಿಯಲ್ಲಿ ತೇಲುತ್ತಿದ್ದರು ಅವರು ಮೀನಿನಂತೆ ಗಾಳಿಯಲ್ಲಿ ಈಜುತ್ತಾ ನರ್ತಿಸುತ್ತಿದ್ದರು 

ಬಸಂತನ ಅಂಗಡಿಯೊಳಗಿದ್ದ.  ಬ್ಲೂಟೂತ್ ಸ್ಪೀಕರ್ಸ್ ನಿಂದ ಮಾದಕ ಹಿಂದಿ ಹಾಡೊಂದು ಹಾಡು ಇಂಪಾಗಿ ಕೇಳಿಬರುತ್ತಿತ್ತು ...

ಆ ಸುಂದರಿಯರನ್ನು ಕಂಡ ಅವನು‌ ನಿಬ್ಬೆರಗಾದ

ಅವನು ತನ್ನ ಕಣ್ಣುಗಳನ್ನು ಕೈಗಳಿಂದ ಹೊರೆಸಿಕೊಂಡು ನೋಡಿದ..

ಆ ಸುಂದರಿಯರು ಉಟ್ಟಿದ್ದ ಸೀರೆಯ ಬಣ್ಣಗಳು ಬದಲಾದಂತೆ ಕಂಡಿತು

ಆ ಬೆಳದಿಂಗಳ ರಾತ್ರಿಯಲ್ಲಿ ಗಾಳಿಯಲ್ಲಿ ತೇಲುತ್ತಿದ್ದ ಸುಂದರ ಮಹಿಳೆಯರನ್ನು ನೋಡಿ ಅವನು ಭಯದಿಂದ ಬೆವತು ಹೋಗಿದ್ದ

ಈ ಘಟನೆ ನೆಡೆದುದರ ಬಗ್ಗೆ

ಅವನ ಊರತುಂಬ ಹೇಳಿಕೊಂಡಿದ್ದಾನೆ...

ಆಕ್ಚೂಲಿ ಆ ಬಸಂತನಿಗೆ ..

ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ

#ಜಿನತ್ ಅಮನ್ ಅಂದ್ರೇ ಬಹಳ ಇಷ್ಟ...

ಹೀಗಾಗಿ ಅವನು ಅವಳ ಹಾಡು ಹೆಚ್ಚಾಗಿ ಕೇಳುತ್ತಿದ್ದ

ಇಂತಹಾ ಹತ್ತಾರು ಘಟನೆಗಳನ್ನು ಕಣ್ಣಿಗೆ ಕಟ್ಡಿದಂತೆ ಹೇಳುವ ಜನರು ಆ ರೋಡಿನ ಅಕ್ಕ ಪಕ್ಕ ಬಹಳಿಷ್ಟಿದ್ದಾರೆ.

ಮದ್ಯರಾತ್ರಿ ಹನ್ನೆರಡರಿಂದ ಮುಂಜಾನ ಮೂರುಗಂಟೆಯ ವರೆವಿಗೂ...ಆ ಸುಂದರಿಯರ ಆತ್ಮಗಳು ರಸ್ತೆ ಬದಿಯಲ್ಲಿ ಹಲವು ವೇಷಗಳೊಂದಿಗೆ ಸುತ್ತುತ್ತವೆಂದು ಹಾಗೂ ಗುಂಪಾಗಿ ಮತ್ತು ಸಿಂಗಲ್ಲಾಗಿಯೂ ಸಹಾ ಅಟ್ಯಾಕ್ ಮಾಡುತ್ತಾರೆಂದು ಹೇಳುವವರಿದ್ದಾರೆ...



ಅಮವಾಸೆ ಹಾಗೂ ಹುಣ್ಣಿಮೆಯ ರಾತ್ರಿಗಳಲ್ಲಿ ರಸ್ತೆ ಬದಿಯ ಬೃಹತ್ ಗಾತ್ರದ ಮರಗಳ ಕೊಂಬೆಗಳ ಮೇಲೆ ಬಿಳೀ ಹಾಗೂ ಅಚ್ಚ ಕೆಂಪು ಬಣ್ಣದ ಪ್ರೇತಗಳಂತೆ ಜೋತಾಡುತ್ತಿರುವುದನ್ನು ಕಣ್ಣಾರೆ ಕಂಡಿರುವವರು ಇದ್ದಾರೆ 



ಆದುದರಿಂದಲೇ ಈಗಲೂ ಸಹಾ ದ್ವಿಚಕ್ರ ವಾಹನಗಳನ್ನು ಅಲ್ಲಿ ರಾತ್ರಿಯವೇಳೆಯಲ್ಲಿ ಓಡಿಸಲು ಭಯಪಡುತ್ತಾರೆ.



ಅಪಘಾತಗಳಂತೂ  ಆ ರಸ್ತೆಯಲ್ಲಿ ಸರ್ವೇ ಸಾಮಾನ್ಯವೆ....

ಹಿರಿಯೂರು ಬಸ್ ಸ್ಟಾಂಡ್ ನಿಂದ ಹೊರಟ ಬಸ್ಸು.

ಹಿರಿಯೂರಿನ ಟಿ ಬಿ ಸರ್ಕಲ್ ನಿಂದ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು..

ಕೆಲವೇ ನಿಮಿಷಗಳಲ್ಲಿ

ಮತ್ತೆ ಬಸ್ಸಿನ ತುಂಬೆಲ್ಲಾ ಘಮ ಘಮಿಸುವ ಮಲ್ಲಿಗೆ ಹೂಗಳ ಪರಿಮಳವು ಆವರಿಸಿತು ...

ಸುಂದರಿಯರು ಪಕ್ಕದ್ದಲ್ಲಿದ್ದ ಗಂಡಸರ ತೊಡೆಗಳನ್ನು ಸವರಲಾರಂಬಿಸಿದರು ..ಹಾಗು ಅವರ ಬುಜದ ಮೇಲೆ ತಲೆ ಇಟ್ಟರು....

ಕೆಲ ಸುಂದರಿಯರ ಬಿಸಿ ಉಸಿರಿನಿಂದ ..ಸಿಂಗಲ್ ಆಗಿದ್ದ ಗಂಡಸರು ಕಾಮ ಪ್ರಚೋದಿತರಾದರೂ ...ತಾತ್ಕಾಲಿಕ‌ ಭಾಂದವ್ಯ ಬೆಸೆದುಕೊಳ್ಳಲು ಹವಣಿಸಿದರು ಕೆಲವು ಪುರುಷರು ಆ ಮದ್ಯ ರಾತ್ರಿಯ  ಮೋಡ ಕವಿದಿದ್ದ  ವಾತಾವರಣದಲ್ಲಿ  ಸುಂದರಿಯರ ಮೈಕಟ್ಟು ನೋಡಿ ಉನ್ಮಾದಗೊಂಡರು   ಆ ಸುಂದರಿಯರ  ದಪ್ಪ ತೊಡೆಗಳ ಮೇಲೆ ಕೈ ಹಾಕಿ ಒತ್ತಬಯಸಿದರು

ಸುಂದರಿಯರು ದರಿಸಿದ್ದ ಬಟ್ಟೆಯಿಂದ ಹೊರಸೂಸುತ್ತಿದ್ದ KS ಪರ್ಪ್ಯೂಮಿನ ಪರಿಮಳವನ್ನು. ಪೀಲ್ ಮಾಡಿ

ಟೆಮ್ಟ್ ಆದರು ...

ತಮ್ಮ ಪಕ್ಕ ಕುಳಿತಿದ್ದ ಸುಂದರಿಯರನ್ನು ಕಾಮುಕ ದೃಷ್ಟಿಯಿಂದ ನೋಡಲಾರಂಬಿಸಿದರು..

ಒಬ್ಬನ ಪಕ್ಕದಲ್ಲಿ ಕುಳೀತಿದ್ದ ಸುಂದರಿಯೊಬ್ಬಳು ತನ್ನ ಕೆಂಪು ತುಟಿಗಳನ್ನು ನಾಲಿಗೆಯಿಂದ ಸವರಿಕೊಂಡಳು ..

ಅವನ ಕೈಗಳು ನಿಯಂತ್ರಣ ಕಳೆದುಕೊಳ್ಳುತ್ತಿದ್ದವು .

ಅವಳ ಬುಜದ ಮೇಲೆ ಕೈ ಹಾಕಿದ

ಅವಳು ಇದ್ದಕ್ಕಿದ್ದಂತೆಯೇ ಬಾಯಿಂದ ನಾಲಿಗೆಯನ್ನು ಹೊರತೆಗೆದಳು ...

.

ಇವನು ನೋಡಿದ ....

ಅವಳ ನಾಲಿಗೆಯು  ನೀಲಿ ಬಣ್ಣದಿಂದ ಕೂಡಿತ್ತು ಹಾಗೂ ಮನುಷ್ಯರ ನಾಲಿಗೆಗಿಂತ ಮೂರು ಪಟ್ಟು ಉದ್ದವಿತ್ತು ..ಕೆಲವು ಕೂದಲುಗಳು ಸಹಾ ನಾಲಿಗೆಯ ಮೇಲೆ ಬೆಳೆದಂತಿದ್ದವು..ಇಂತಹಾ ವಿಚಿತ್ರ ಹಾಗೂ ವಿರೂಪಿನ ನಾಲಿಗೆಯನ್ನು  ಕಂಡ ಅವನು ಭಯಗೊಂಡ ..

ವಿಷಯವನ್ನು ಯಾರಿಗೂ ತಿಳಿಸದೇ ಗಪ್ ಚಿಪ್ ಆಗಿ ಕಿಟುಕಿಯ ಪಕ್ಕ ಸರಿದು ಕುಳಿತು...ನಡುಗುತ್ತಾ ಕುಲ ದೇವರುಗಳ ನೆನಪಿನ ಮೊರೆಹೋದ

ಬಸ್ಸಿನಲ್ಲಿದ್ದ ಇನ್ನೂ ಕೆಲವೂ ಮಹಿಳೆಯರು ತಮ್ಮ ಗಂಡಂದಿರ ಕಡೆ ದೃಷ್ಟಿನೆಟ್ಟು ನೋಡುತ್ತಿದ್ದರು ....

ಬಸ್ಸು ವೇಗವಾಗಿಯೇ ಚಲಿಸುತ್ತಿತ್ತು..

ಇನ್ನೇನು  ಐಮಂಗಳ ...ಹತ್ತಿರ ಬಸ್ಸುಚಲಿಸುತ್ತಿತ್ತು...

(ರಸ್ತೆ ಬದಿಯಲ್ಲಿ ಬರುವಂತಹಾ ಒಂದು  ಗ್ರಾಮವೇ ಐಮಂಗಳ)...

ಇದ್ದಕ್ಕಿದ್ದಂತೇ ಬಸ್ಸಿನಲ್ಲಿ ತಾಯಿಯ ತೊಡೆಯ ಮೇಲೆ ಹುದುಗಿದ್ದ ಮಗುವೊಂದು ಜೋರಾಗಿ ಅಳಲಾರಂಬಿಸಿತು

ಎಲ್ಲರೂ ಆ ಮಗುವುನ ತಾಯಿಯ ಕಡೆ ನೋಡುತ್ತಾ ನೋಡಮ್ಮ ಮಗುವಿಗೇ ಏನಾಗಿದೇ ಎಂದು ಕೂಗಲಾರಂಬಿಸಿದರು ...

ಮಗುವಿನ ಅಳುವಿನ ಶಭ್ದವು ವಿಕೃತವಾಗಿತ್ತು ..

ಭಯಾನಕ ವಾಗಿತ್ತು ತನ್ನ ಮಗು ಆರೀತಿ ಅಳುವುದನ್ನು ಆ ತಾಯಿಯೂ ಎಂದೂ ನೋಡಿರಲಿಲ್ಲ..

ಹಿಂದಿನ ಸೀಟಿನ ಮತ್ತೊಬ್ಬ ಗಂಡಸು ಪಕ್ಕದಲ್ಲಿದ್ದ ಸುಂದರಿಯತ್ತವಾಲಿದ

ಅವಳ ಬುಜದ ಮೆಲೇ ತಲೆ ಇಟ್ಟು ಅವಳ ತಲೆ ಕೂದಲು ಘಮ ಘಮ ಸುವಾಸನೆ ಬರುತ್ತಿತ್ತು ..ಅವನ ಮನಸ್ಸು ಉಲ್ಲಾಸವನ್ನು ಅನುಭವಿಸಿತು 

ಅದೇ ಖುಷಿಯಲ್ಲಿ ಅವಳ ಮುಖ ನೋಡಿದ 

ಅದು ಶವದ ಮುಖದತರಹಾ ಹೊಣಗಿ ಹೋಗಿತ್ತು ಬೆಳ್ಳಗೇ ಬಿರುಚಿಕೊಂಡಿತ್ತೂ ..ತುಟಿಗಳ ಮೇಲೆ ಹಳದಿ ಬಣ್ಣದ ದ್ರವ ಹರಿಯುತ್ತಿತ್ತು..

ಅವನೂ ಸಹಾ ಭಯದಿಂದ ಚೀರಿದ ಅದನ್ನು ಕಂಡ

ಎಲ್ಲರೂ ಭಯದಿಂದ ನಡುಗಲಾರಂಬಿಸಿದರು ..

ಅಳುತ್ತಿದ್ದ ಮಗುವಿನ ಮುಖವು ಬೆಳ್ಳನೇ ಬಿಳಿಚಿಕೊಂಡಿತ್ತು ಮಗುವಿನ ತಾಯಿಯೂ ದಿಗ್ಬ್ರಾಂತಳಾದಳು....

ಮಗುವಿಗೇ ನೀರು ಕುಡಿಸಿದಳು...

ಬಸ್ಸು ಓಡುತ್ತಲೇ ಇತ್ತು 

ಇದ್ದಕಿದ್ದಂತೆಯೇ

ಆ ಸುಂದರಿಯರು ಎದ್ದು ಕುಣಿಯಲಾರಂಬಿಸಿದರು...

ಅದೂ ಭಯಾನಕ ಕುಣಿತ ಅವರ ಕುಣಿತವನ್ನು ನೋಡಿ ಬಸ್ಸಿನಲ್ಲಿದ್ದವರಿಗೆಲ್ಲಾ....

ಇಲ್ಲಿ ಏನೋ ವಿಚಿತ್ರವಿದೆಯೆನಿಸಿತು ಹಾಗೂ ನಾವು ಅಪಾಯದಲ್ಲಿದ್ದೆಂದು ಎಲ್ಲರಿಗೂ ಭಾಸವಾಯ್ತು..

ಓ ಇವರು ಹೆಂಗಸರಲ್ಲಾ.....ದೆವ್ವಗಳು  ಇವರು ಪಿಶಾಚಿಗಳು 

ಈ ದಿನ ನಮಗೇನೋ ಕಾಯ್ದಿದೆಯೆಂದು ..ಭಯದಿಂದ ಬಸ್ಸು ನಿಲ್ಲಿಸುವಂತೆ ಜನರೆಲ್ಲರೂ ಕಿರುಚಿಕೊಂಡರು ..

ಆ ಕಿರುಚಾಟದಿಂದ ಡ್ರೈವರ್ ಇನ್ನೂ ಭಯಗ್ರಸ್ಥನಾದ    ಬ್ರೇಕಿನ ಮೇಲೇ ಕಾಲಿಟ್ಟು ಒತ್ತಿದ್ದ

ಓ ಮೈ ಗಾಡ್ ಬಸ್ಸಿನ ಬ್ರೇಕ್ ಪೇಲ್ ಆಗಿದೇ

ಬಸ್ಸು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ....

ಈ ವಿಷಯ ಬಸ್ಸಿನಲ್ಲಿದ್ದವರಿಗೆಲ್ಲಾ ತಿಳಿಯಿತು ಅವರ ಭಯ ಇನ್ನೂ ಹೆಚ್ಚಾಯ್ತು... ...

ಡ್ರೈವರ್...ತನ್ನ. ಮುಂದಿಟ್ಟುಕೊಂಡಿದ್ದ .

ನಾಯಕನಹಟ್ಟಿ ತಿಪ್ಪೇಸ್ವಾಮಿಯ ಪೋಟೋಕೆ ತನ್ನ ಕೈಚಾಚಿ ನಮಸ್ಕರಿಸಿದ,,,,

ಜನರೆಲ್ಲರೂ ಮನೆದೇವರುಗಳ ಜಪಮಾಡಿದರು..

ಸುಂದರಿಯರು ಕೂಗಾಟ ಕಿರುಚಾಟ ಹೆಚ್ಚಾಯ್ತು..

ಅವರು ಬಯಂಕರ ರೂಪಿನಿಂದ ಗೋಚರಿಸಿದರು ಈ ವಿಚಿತ್ರವನ್ನು ನೋಡಿದ ಕಂಡಕ್ಟರ್ ಪ್ರಜ್ಣೆ ತಪ್ಪಿ ಬಿದ್ದಿದ್ದ..

ಸುಂದರಿಯರು ಕೆಲ ಪುರುಷರ ವೃಷಣಗಳನ್ನು ಹಿಂಡಲಾರಂಬಿಸಿದರೂ ..

ವಿಚಿತ್ರ ರೂಪಗಳಿಂದ ಕಂಗೊಳಿಸ ತೊಡಗಿದರು ...

ಅವರು ಉಟ್ಟಿದ್ದ   ಸೀರೆಗಳ ಬಣ್ಣಗಳು ಬದಲಾಗುತ್ತಿದ್ದವು..ಸೆರಗು ಜಾರಿ ಸ್ಥನಗಳ ಮುಂದೆ ಬಂದಂತೆ ಕಾಣಿಸುತ್ತಿತ್ತು ಹಾಗೂ 

ಕೆಲವು ಸುಂದರಿಯರು  ಅರೆ ನಗ್ನ ವಾಗಿ ನರ್ತಿಸುತ್ತಿರುವಂತೆ  ತೋಚುತ್ತಿತ್ತು.. ಕೆಲವು ಜನರು ಸುಂದರಿಯರ ಪಾದಗಳನ್ನು ನೋಡಿದರು ಅವು ಸಾಮಾನ್ಯ ಮಹಿಳೆಯ ಪಾದಗಳಂತಿರಲಿಲ್ಲ - ಅವರ ಪಾದಗಳು ಹಿಂದು ಮುಂದಾಗಿದ್ದವು -ಪಾದಗಳ ಬೆರುಳುಗಳ   ಉಗುರುಗಳು ಚೂಪಾದ  ಚಾಕುವಿನಂತೆ ಮುಂದೆ ಚಾಚಿದ್ದವು ಮತ್ತೆ ಕೆಲವು ಸುಂದರಿಯರ ಕಾಲ್ಬೆರುಳುಗಳ ಉಗುರುಗಳು ಸುರುಳಿಯಂತೆ ಸುತ್ತಿಕೊಂಡಿದ್ದವು - ಅವರ ಕಾಲ್ಬೆರಳುಗಳು ಗಿರುಚಿಕೊಂಡಿದ್ದವು ಕೆಲವರ ಪಾದಗಳು ಎರಡು ಅಡಿಗಳಷ್ಟು ಉದ್ದವಿದ್ದವು- 



ನೋಡು ನೋಡುತ್ತಲೇ  ನರ್ತಿಸುತ್ತಿದ್ದ ಒಬ್ಬಳು    ಸುಂದರಿಯ ದೇಹವು ಕೊಳೆತಂತಾಗಿ ಮೈಮೇಲಿನ ಮಾಂಸ ಖಂಡವು ಕಳಚಿ ಬೀಳಲಾರಂಭಿಸಿತು - ಆದರೂ ಅವಳು ನರ್ತಿಸುತ್ತಲಿದ್ದಳು ಕೆಲವೇ ಸಮಯದಲ್ಲಿ ಅವಳೊಂದು ಅಸ್ಥಿ ಪಂಜರದಂತಾದಳು ಆದರೂ ನೃತ್ಯವನ್ನು ನಿಲ್ಲಿಸಲಿಲ್ಲ- 



ಈ ರೋಚಕ ಭಯಾನಕ ರೂಪಗಳ  ನೃತ್ಯವನ್ನು ಕಂಡ ಪ್ರಯಾಣಿಕರುಗಳಿಗೆ ನಿಜವಾದ ಭೂತ  ಪಿಶಾಚಿಗಳ ಭಯವೆಂದರೇನೆಂಬ ಅನುಭವವಾಯ್ತು ಈ ದೃಶ್ಯ ಗಳನ್ನು ಕಂಡ  ಕೆಲವು ಪ್ರಯಾಣಿಕ ಮಹಿಳೆಯರು ಭಯದಿಂದ ತಮ್ಮ ಮಾಂಗಲ್ಯವನ್ನು ಎದೆಗವಚಿಕೊಂಡರು....

ಬಸ್ಸಿನ ವೇಗ ಮೊದಲಿಗಿಂತಲೂ ಹೆಚ್ಚಾಯ್ತು....

ರಸ್ತೆಯ ಬದಿಯಲ್ಲಿ ನೂರಾರೂ ವಾಹನಗಳು ಸುಯ್ಯ್ ಎಂದು ಹೋಗುತ್ತಿದ್ದವು ..

ಕಿಟಕಿಯಿಂದ ಹೊರ ನೋಡಿದಾಗ ದೂರದ ಗುಡ್ಡದ ಮೇಲೆ ತನ್ನ  ಉದ್ದವಾದಂತಹಾ ರೆಕ್ಕೆಗಳನ್ನು ಚಾಚಿ ತಿರುಗುತ್ತಿರುವ ಗಾಳಿವಿದ್ಯುತ್ ಪ್ಯಾನುಗಳು ಗುಡ್ಡದ ಮೇಲೆ ಯಾರೋ ಉದ್ದವಾದ ಬಿಳೀ ಬಣ್ಣದ ವ್ಯಕ್ತಿಗಳು ನಿಂತಿರುವಂತೆ  ಕಾಣಿಸುತ್ತಿದ್ದವು- 

ಬಸ್ಸಿನಲ್ಲಿದ್ದವರು ಎಷ್ಟು ಕಿರುಚಿದರೂ ಅದು ಯಾರಿಗೂ ಕೇಳುತ್ತಿರಲಿಲ್ಲ ..

ಬಸ್ಸಿನ ವೇಗವೂ ಡ್ರೈವರ್ ನ ನಿಯಂತ್ರಣ ತಪ್ಪಿತು ...

ಅವನು ನಿರ್ಧರಿಸಿಯೇ ಬಿಟ್ಟ ಈವತ್ತು ಆಗಬಾರದ್ದು ಆಗುತ್ತದೆ .....

ಭಯ ಮಡುಗಟ್ಟಿತು

ಇನ್ನೇನು ಚಿತ್ರದುರ್ಗ ಬೈಪಾಸ್ ,,ರಸ್ತೆ

ಬಸ್ಸಿನತುಂಬೆಲ್ಲಾ ಬರೀ ಕಿರುಚಾಟ ಚಿತ್ರದುರ್ಗ ಟೌನ್ ನ ಕಡೆ ಬಸ್ಸನು ತಿರುಗಿಸಿಯೇ ಬಿಟ್ಟ ...

ಬ್ರೇಕ್ ನ ಮೇಲೇ ಕಾಲನ್ನು ಭಲವಾಗಿ ಒತ್ತಿದ ..

ಏನಾಶ್ಚರ್ಯ ಬಸ್ಸು ನಿಂತಿತು....

ನೀರವ ಮೌನ ಎಲ್ಲರೂ ಮುಖ ಪರಸ್ಪರ ಮುಖ ನೋಡಿಕೊಂಡರು ಹೋದ ಜೀವ ಮತ್ತೆ ಬಂದಂತಹಾ ಅನುಭವ..

ಎಲ್ಲರ ಮುಖವು ಬೆವರಿನಿಂದ ತೊಯ್ದು ಹೋಗಿತ್ತು..

ಬಸ್ಸು ನಿಲ್ಲುತ್ತಿದ್ದಂತೆಯೇ ..

ಆ ಸುಂದರಿಯರು ಇಳಿದು ಅಗೋಚರವಾದರು ..

ಬಸ್ಸಿನಲ್ಲಿದ್ದ ಜನರು ದಡ ದಡನೇ ಇಳಿದು ದಿಕ್ಕಾಪಾಲಾಗಿ ಓಡಿ ಹೋದರು....

ದೊಡ್ಡ ಗಾತ್ರದ ಮಳೆಹನಿಯು ಆರಂಭವಾಗುತ್ತಿತ್ತು.....

ಎಲ್ಲರಿಗಿಂತ ಕೊನೆಯಲ್ಲಿ ಇಳಿಯುತ್ತಿದ್ದ

ಆ  ಉದ್ದವಾದ ಕೂದಲು ಬಿಟ್ಟಿದ್ದ  ಚೂಪುಗಡ್ಡದ ಅಸಾಮಿಯೂ

ಕ್ಯಾರಿಯರ್ ನಲ್ಲಿದ್ದ ತನ್ನ ರಟ್ಟಿನ ಪೆಟ್ಟಿಗೆಯನ್ನು ಜೋಡಿಸಿಕೊಳ್ಳುತ್ತಿದ್ದ..

ಅದರೊಳಗೆ ಚಿಕ್ಕ ಚಿಕ್ಕ ಪೊಟ್ಟಣಗಳಿದ್ದವು.

#ಅವನೊಬ್ಬ ಡ್ರಗ್ಸ್ ಸ್ಮೊಗ್ಲರ್



ಯಾರಿಗೂ ಅನುಮಾನ ಬಾರದಿರಲೆಂದೇ ಅವನು ಒಬ್ಬ ಸಾಮಾನ್ಯ ಪ್ರಯಾಣಿಕನಂತೆ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ   ಆ ಪೆಟ್ಟಿಗೆಯಲ್ಲಿ ಅವನು ಸಾಮಾನ್ಯ ಸರುಕುಗಳಂತೆ ಮಾಧಕ ದ್ರವ್ಯಗಳನ್ನು ಸಾಗಿಸುತ್ತಿದ್ದ.

ಅವುಗಳಲ್ಲು ಕೆಲ ಪೊಟ್ಟಣಗಳು ಹೊಡೆದು ಹೋಗಿದ್ದವು.

ಆ ಪೊಟ್ಟಣಗಳಿಂದ ಬಿಳಿ ಹಾಗೂ ಕಂದು ಬಣ್ಣದ ಪುಡಿಯು ಹೊರ ಬಂದಿತ್ತು ಅ ಬಾಕ್ಸಿನಲ್ಲಿದ್ದ ಎಲ್ಲಾ ಪೊಟ್ಟಣಗಳಲ್ಲಿ .ಮಾದಕ ದ್ರವ್ಯಗಳಿದ್ದವು ..

ಅ ಪೊಟ್ಟಣಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು ..

ಅವುಗಳು ಅಸಾದಾರಣ ಮಾದಕ ದ್ರವ್ಯಗಳಾಗಿದ್ದವು..

ಅದರ ಸ್ಮೆಲ್ ತಾಕಿದರೇ ಸಾಕು ವಿಚಿತ್ರ ಅನುಭವಗಳಾಗುತ್ತಿದ್ದವು..

ವಿಚಿತ್ರ ಬಗೆಯ ವಾಸನೆಗಳ ಅನುಭವವನ್ನು ಮೂಡಿಸುವ ಶಕ್ತಿ ಅವುಗಳಿಗಿತ್ತು.

ಅದೂ ಅಲ್ಲದೇ ವಿಚಿತ್ರ ಭ್ರಮೆಗಳನ್ನು ಸೃಷ್ಟಿಮಾಡಿ..

ಮನುಷ್ಯನನ್ನು ವಾಸ್ತವದ ಪ್ರಜ್ಣೆಯಿಂದ ದೂರ ಕೊಂಡೊಯ್ಯುವಂತಹಾ ಮಾಧಕ ದ್ರವ್ಯಗಳೇ ಅವುಗಳಾಗಿದ್ದವು....

ಅವುಗಳು ವಿಬಿನ್ನ ಹಾಗೂ ಒಂದೇರೀತಿಯ ಭ್ರಮೆ ಮೂಡಿಸುವ ಶಕ್ತಿ ಹೊಂದಿದ್ದವು..

ವ್ಯಕ್ತಿ ಯಾವ ಆಲೋಚನೆಯನ್ನು ಹೊಂದಿರುತ್ತಾನೋ ಅದೇ ಆಲೋಚನೆಗಳನ್ನು ಗಟ್ಟಿಗೊಳಿಸಿ..

ಅವುಗಳಿಂದ ವಿಭ್ರಮೆಗಳನ್ನು ಹೊಂದಲು ಕೆಲ ವ್ಯಸನಿಗಳು ಆ ಡ್ರಗ್ಸ್ ಬಳಸುತ್ತಿದ್ದರು..   ಚಿತ್ರದುರ್ಗದ  ಲಾಡ್ಜ್ ಗಳ ಲ್ಲಿ ಡ್ರಗ್ಸ್ ದಂಧೆ ಹಲವು ಜನರ ಬಂದನ ಮುಂತಾದ ಸುದ್ದಿಗಳು ಹಲವು ಮಾಧ್ಯಮಗಳಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದನ್ನು ನೆನಪಿಸಿಕೊಳ್ಳ ಬಹುದು



ಬಹುಶಃ  ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  ಚೂಪು ಗಡ್ಡದ  ದಡೂತಿ  ಅಸಾಮಿಯೇ  ಆ ಮಾಧಕ ವಸ್ಥುಗಳನ್ನು ಪೂರೈಸಿದ್ದಿರಬಹುದು 

ಬಸ್ಸು ಇಳಿದ ಕೂಡಲೇ ದಡೂತಿ ಅಸಾಮಿ ತನ್ನ ಬ್ಯಾಗಿನೊಂದಿಗೇ ಕತ್ತಲೆಯಲ್ಲಿ ಗಲ್ಲಿಯೊಂದರಲ್ಲಿ ಮರೆಯಾದ.....

ಬಸ್ಸಿನ ಪಕ್ಕ ಬೀಡಿ ಸೇದುತ್ತಾ ನಿಂತಿದ್ದ ಪ್ರಯಾಣಿಕರಿಬ್ಬರು ...

ಈವತ್ತು ನಮ್ಮನ್ನು ದೇವರೇ ಕಾಪಾಡಿದ 

ಇಂತಹಾ ದೆವ್ವಗಳನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ..

ಅಂದು ಆಕ್ಸಿಡೆಂಟ್ ನಲ್ಲಿ ಸತ್ತಿದ್ದ ಆ ಕೆಟ್ಟ ಹೆಂಗಸರೇ ಇವರು ದೆವ್ವ ಪಿಶಾಚಿಗಳಾಗಿ ಅಲೆಯುತ್ತಿದ್ದಾರೆ.

ಎಂದು ಮಾತನ್ನಾಡಿಕೊಳ್ಳುತ್ತಿದ್ದರು...

ಬಸ್ಸಿನಿಂದ ಕೆಳಗಿಳಿದ

ಡ್ರೈವರ್ ಕಂಡಕ್ಟರ್ ನ ..ಮುಖ ನೋಡಿದ .. 

ಬೆವತು ನೀರಿಳಿದಿತ್ತು..

ಟೈಮ್ ಎಷ್ಟು ಎಂದು ಕೇಳಿದ ..

ಕಂಡಕ್ಟರ್ ತನ್ನ ಶರ್ಟಿನ ತೋಳು ಸರಿಸಿ ವಾಚ್ ನೋಡಿ ಹೇಳಿದ

#ಎರಡುಗಂಟೆ..

. . . . . . .

 

 



.............ಸಶೇಷ.............................‌‌‌‌‌

ಧನ್ಯವಾದಗಳು


ಟಿ ಎಸ್ ಉಮೇಶ್ ತಡಸೂರು ಅವರಿಂದ ಇನ್ನಷ್ಟು ಪುಸ್ತಕಗಳು

1

ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು

27 June 2023
0
0
0

 ಅಘೋರಿಗಳ ಬೀಡಿನಲ್ಲಿ – ಮೂರುದಿನಗಳು     ಯುನಿವರ್ಸಿಟಿಯ ಆ ದಿನಗಳು  ಒಂದಾನೊಂದು ಕಾಲದಲ್ಲಿ ತತ್ವಶಾಸ್ತ್ರವನ್ನು ಓದುವುದು ಒಂದು ಪ್ರತಿಷ್ಟೆಯ ವಿಷಯವೆಂದು ಭಾವಿಸಲಾಗಿತ್ತು ದಿನಗಳು ಉರುಳಿದಂತೇ ಜೀವನ ನಿರ್ವಹಣೆಗೆ ಉಪಯೋಗವಾಗದ ವಿಷಯಗಳನ್ನು

2

ಮೈನವಿರೇಳಿಸುವ ಆ ಎರಡು ಗಂಟೆಗಳು

27 June 2023
0
0
0

U/A ಮೈ ನವಿರೇಳಿಸುವ ಆ ಎರಡು ಗಂಟೆಗಳು (@ NH 4 - SIRA TO CHITRADURGA)  ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ಹೋಗುವ ಬಸ್ಸು ಅರ್ಧ ಗಂಟೆ ತಡವಾಗಿ ಮಧ್ಯರಾತ್ರಿ ಹನ್ನೆರಡಕ್ಕೆ ಸಿರಾ ಬಸ್ ಸ್ಟಾಂಡಿಗೆ ಬಂದಿತ್ತು . ಅಂದು ಅಮವಾಸೆಯ ಕ

3

ಹೀಗೊಂದು ರೋಚಕ ಕನಸು ..

27 June 2023
0
0
0

ಹಿಗೂ ಉಂಟೇ #(ಸೈಕಾಲಾಜಿಕಲ್ ಥ್ರಿಲ್ಲರ್)ಸೈಕಾಲಾಜಿಕಲ್ ಥ್ರಿಲ್ಲರ್) ಅದೊಂದು ಸುಂದರವಾದ ಚರ್ಚ್ ಸೂರ್ಯನ ಕಿರಣಗಳು ಚರ್ಚ ನ ಪೂರ್ವ ದಿಕ್ಕಿನಲ್ಲಿದ್ದ  ದೊಡ್ಡ ದೊಡ್ಡ  ಕಿಟಕಿಗಳ ಸರಳುಗಳನ್ನು ನುಸುಳಿ ಒಳ ಬಂದು ಒಳಾಂಗಣದಲ್ಲಿ ಬೆಳಕುಚ

---

ಪುಸ್ತಕವನ್ನು ಓದಿ