ಹಿಗೂ ಉಂಟೇ
#(ಸೈಕಾಲಾಜಿಕಲ್ ಥ್ರಿಲ್ಲರ್)ಸೈಕಾಲಾಜಿಕಲ್ ಥ್ರಿಲ್ಲರ್)
ಅದೊಂದು ಸುಂದರವಾದ ಚರ್ಚ್ ಸೂರ್ಯನ ಕಿರಣಗಳು ಚರ್ಚ ನ ಪೂರ್ವ ದಿಕ್ಕಿನಲ್ಲಿದ್ದ ದೊಡ್ಡ ದೊಡ್ಡ ಕಿಟಕಿಗಳ ಸರಳುಗಳನ್ನು ನುಸುಳಿ ಒಳ ಬಂದು ಒಳಾಂಗಣದಲ್ಲಿ ಬೆಳಕುಚೆಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುವಂತೆ ಮಾಡುತ್ತಿದ್ದವು ಅದೊಂದು ಸುಂದರವಾದ ಚರ್ಚ್ ಸೂರ್ಯನ ಕಿರಣಗಳು ಚರ್ಚ ನ ಪೂರ್ವ ದಿಕ್ಕಿನಲ್ಲಿದ್ದ ದೊಡ್ಡ ದೊಡ್ಡ ಕಿಟಕಿಗಳ ಸರಳುಗಳನ್ನು ನುಸುಳಿ ಒಳ ಬಂದು ಒಳಾಂಗಣದಲ್ಲಿ ಬೆಳಕುಚೆಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುವಂತೆ ಮಾಡುತ್ತಿದ್ದವು
ಚರ್ಚ್ ನ ಹೊರಬಾಗದಲ್ಲಿ ಆಗತಾನೆ ಬಿಸಿಲು ತನ್ನ ತಾಪವನ್ನು ಹೆಚ್ಚಿಸಿಕೊಳ್ಳುತ್ತಿತ್ತು ಒಳಾಂಗಣದಲ್ಲಿ ನೂರಾರು ಜನರು ಪ್ರಾರ್ಥಿಸಲು ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು ಚರ್ಚ್ ನ ಒಳಾಂಗಣದಲ್ಲಿನ ಶಾಂತಿ ಹಾಗೂ ಸ್ವಚ್ಚತೆಯು ಅಲ್ಲಿದ್ದ ಜನರ ಭಕ್ತಿಯ ಭಾವವನ್ನು ಹೆಚ್ಚಿಸುತ್ತಿತ್ತು ಆದಿನ ಜೀಸಸ್ ಹಿಂದೆಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸುತ್ತಾ ತನ್ನ ಕಣ್ಣಂಚಿನಿಂದ ಪ್ರೀತಿ ಮತ್ತು ಕರುಣೆಯನ್ನು ಪ್ರಸಾದವನ್ನು ಹಂಚುತ್ತಿದ್ದನು
ಚರ್ಚಿನ ಪಾದ್ರಿಯು ಭಕ್ತಿಪೂರ್ವಕವಾಗಿ ಜೀಸಸ್ ಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದನು ಅಲ್ಲಿದ್ದ ಜನರೆಲ್ಲರೂ ಏಕಾಗ್ರತೆಯಿಂದ ಪ್ರಾದ್ರಿಯ ಪ್ರಾರ್ಥನೆಯನ್ನು ಆಲಿಸುತ್ತಾ ಜೀಸಸ್ ನ ಮುಖವನ್ನು ನೋಡುತ್ತಾ ಅವನ ಕಣ್ಣಂಚಿನಲ್ಲಿದ್ದ ಕರುಣೆಯನ್ನು ಕಂಡು ಭಾವಪರವಷರಾಗಿದ್ದರು
ಶುಭ್ರವಾದ ಬಿಳೀ ಬಣ್ಣದ ಬಟ್ಟೆಯನ್ನು ಧರಿಸಿದ್ದ ಸುಂದರವಾದ ತರುಣಿಯೊಬ್ಬಳು ತನ್ನ ಕೋಮಲವಾದ ಕೈಗಳನ್ನು ಚಾಚಿ ಜೀಸಸ್ ನನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ ಜೀಸಸ್ ನ ಮುಖವನ್ನೇ ತದೇಕ ಚಿತ್ತದಿಂದ ನೋಡುತ್ತಾ ಮಘ್ನಳಾಗಿದ್ದಳು
ದೂರದಿಂದ ಕೇಳಿಬರುತ್ತಿದ್ದ ಒಂದು ರೀಯ ಕೋಲಾಹಲದ ಶಬ್ಧವು ಆ ಸುಂದರ ತರುಣಿಯ ಏಕಾಗ್ರತೆಗೆ ಭಂಗ ತರುತ್ತಿತ್ತು –ಕೆಲವೇ ನಿಮಿಷಗಳಲ್ಲಿ ಆ ಕೋಲಾಹಲದ ಶಬ್ಧವು ಚರ್ಚ ಗೆ ಹತ್ತಿರವಾಗುತ್ತಿತ್ತು ಚರ್ಚ್ ನೊಳಗಿದ್ದ ಪ್ರಶಾಂತ ಹಾಗೂ ಭಕ್ತಿ ಪೂರ್ವಕ ವಾತಾವರಣವು ಚದುರಿದಂತಾಯ್ತು -
ಪ್ರಾರ್ಥಿಸಲು ಬಂದಿದ್ದ ಜನರ ಏಕಾಗ್ರತೆಯು ಬೇರೆಡೆತಿರುಗಿತು ಅವರು ಚರ್ಚ್ ನ ಹೊರಗೆ ನೋಡಿದರು – ನೂರಾರು ಜನ ಸೈನಿಕರು ಅವರು ಗಡ್ಡದಾರಿಗಳಾಗಿದ್ದಾರೆ ಹಾಗೂ ಪೇಟವನ್ನು ದರಿಸಿದ್ದಾರೆ ಕೆಂಪು ಬಣ್ಣದ ವಸ್ತ್ರಗಳನ್ನು ದರಿಸಿದ್ದಾರೆ ಕೈ ಯಲ್ಲಿ ಉದ್ದವಾದ ಖಡ್ಗವನ್ನು ಹಿಡಿದಿದ್ದಾರೆ ಅವರೆಲ್ಲರೂ ಬಹಳ ಉದ್ರಿಕ್ತರಾಗಿದ್ದಾರೆ ಹಾಗೂ ಚರ್ಚ್ ನತ್ತಾ ದಾವಿಸಿ ಬರುತ್ತಿದ್ದಾರೆ – ಜೀಸಸ್ ನ ಕಣ್ಣು ಗಳನ್ನು ನೋಡುತ್ತಾ ಅವನಲ್ಲಿಯೇ ಲೀನವಾಗಿದ್ದ
ಆ ಸುಂದರ ತರುಣಿಯು ಹೊರಗಿನ ಭಯಾನಕ ಕೋಲಾಹಲದ ಶಬ್ಧದಿಂದ ವಿಚಲಿತಳಾಗಿ ಕಿಟಕಿಯ ಮೂಲಕ ಹೊರಗಡೆ ನೋಡಿದಳು ಅವಳು ಭಯದಿಂದ ತತ್ತರಿಸಿದಳು ನೋಡುನೋಡುತ್ತಲೇ ಉದ್ರಿಕ್ತ ಸೈನಿಕರು ಚರ್ಚ್ ನ ಒಳಗೆ ನುಗ್ಗಿ ಬಂದರು ಅವರು ತಮ್ಮ ಖಡ್ಗ ಗಳನ್ನು ಜಳಪಿಸುತ್ತಿದ್ದರು –ಚರ್ಚ್ ನ ಪಾದ್ರಿಯು ಅವರನ್ನು ತಡೆಯಲು ಮುಂದಾರು ಗಡ್ಡದೊಳಗೆ ಮುಖವನ್ನು ಮುಚ್ಚಿಕೊಂಡಂತಿದ್ದ ಪೇಟದಾರಿ ಸೈನಿಕನೊಬ್ಬ ತನ್ನ ಹರಿತವಾದ ಖಡ್ಗವನ್ನು ಎತ್ತಿ ಒಂದೇ ಏಟಿಗೆ ಪಾದ್ರಿಯ ರುಂಡವನ್ನು ನೆಲಕ್ಕುರುಳಿಸಿದನು ಚರ್ಚ ನಲ್ಲಿದ್ದ ಜನರೆಲ್ಲರೂ ಭಯದಿಂದ ಕೂಗಲಾರಂಬಿಸಿದರು ಹಾಗೂ ನಮಗೆ ಏನೂ ಮಾಡಬೇಡಿ ನಾವು ಯಾವುದೇ ತಪ್ಪು ಮಾಡಿಲ್ಲವೆಂದು ಸೈನಿಕರಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದರು ಚರ್ಚ್ ನ ತುಂಬೆಲ್ಲಾ ಅರ್ಥನಾದ ಚೀತ್ಕಾರಗಳು ಕೋಲಾಹಲದ ಭಯಾನಕ ಕಿರುಚಾಟಗಳೇ ತುಂಬಿದ್ದವು ಮಕ್ಕಳು ಭಯದಿಂದ ಅಳಲಾರಂಬಿಸಿದರು ವೃದ್ದರು ಕುಸಿದು ನೆಲಕ್ಕುರುಳಿದರು – ಆ ಸೈನಿಕರು ಯಾರ ಮನವಿಯನ್ನೂ ಕಿವಿಯಮೇಲೆ ಹಾಕಿಕೊಳ್ಳಲಿಲ್ಲ ಸಿಕ್ಕ ಸಿಕ್ಕವರನ್ನು ತಮ್ಮ ಚೂಪಾದ ಖಡ್ಗಳಿಂದ ಚುಚ್ಚಿ ಕೊಂದರು ಚರ್ಚ್ ನ ಒಳಾಂಗಣವೂ ರಕ್ತದಿಂದ ತೋಯ್ದುಹೋಯ್ತು ಚರ್ಚ್ ನೊಳಗಿದ್ದವರಲ್ಲಿ ಹೆಚ್ಚಿನವರು ಹತ್ಯೆಯಾಗಿದ್ದರು ಇನ್ನೂ ಕೆಲವರು ಜೀವಬಿಡುವ ನೋವಿನಲ್ಲಿ ನರಳುತ್ತಿದ್ದರು ಮತ್ತೆ ಕೆಲವರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದರು ಇದನ್ನು ಕಂಡು ದಿಘ್ರಾಂತಳಾಗಿ ಓಡಲು ಪ್ರಯತ್ನಿಸುತ್ತಿದ್ದ ಆ ಸುಂದರ ತರುಣಿಯನ್ನು ಎದಿರುಗೊಂಡ ಸೈನಿಕನೊಬ್ಬ ತನ್ನ ಉದ್ದವಾದ ಖಡ್ಗದಿಂದ ಇರಿದನು ಅವಳು ಧರಿಸಿದ್ದ ಶುಭ್ರ ಬಿಳೀ ಬಣ್ಣದ ವಸ್ತ್ರಗಳು ಅವಳದೇ ರಕ್ತದಿಂದ ತೋಯ್ದು ತೊಪ್ಪೆಯಾದವು ಅವಳು ನೆಲದಮೇಲೆ ಬಿದ್ದು ಗೋಳಾಡುತ್ತಾ ಪ್ರಾಣ ಬಿಟ್ಟಳು -
ಜಗತ್ತಿನ ಎಲ್ಲಾ ಭಾಷೆಗಳಲ್ಲೂ ದಾಖಲಾಗಿರುವ ಮೇಲಿನ ಘಟನೆಯೂ ಇಂಗ್ಲೇಂಡ್ ನಲ್ಲಿನ ಬಾಲಕಿಯೊಬ್ಬಳು ಕಂಡಿದ್ದ ಒಂದು ಕನಸಾಗಿದೆ
ಈ ಕನಸು ಕಂಡಿದ್ದ ಆ ಬಾಲಕಿ ಯಾರು. . ?
ಇಂಗ್ಲೇಂಡಿನಲ್ಲಿ ವಿಕ್ಟೋರಿಯಾ ರಾಣಿ ಸಿಂಹಾಸನವೇರಿದ ಕೆಲವೇ ದಿನಗಳ ನಂತರ 1837 ರ ಮೇ ತಿಂಗಳಿನಲ್ಲಿ ಐದು ವರ್ಷದ ಆನಾ ಸೈಡ್ ಎಂಬ ಹೆಸರಿನ ಬಾಲಕಿಯೊಬ್ಬಳು ಕಂಡಿದ್ದ ಈ ಕನಸಿನ ವಿವರವು ಜಗತ್ತಿನ ಸ್ವಪ್ನ ವಿಶ್ಲೇಷಕರೆಲ್ಲರ ಗಮನವನ್ನು ತನ್ನೆಡೆಗೆ ಸೆಳೆದಿದೆ ಹಾಗೂ ಅವರೆಲ್ಲರಿಂದ ವಿಶ್ಲೇಷಣೆಗೆ ಒಳಗಾಗಿದ್ದು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಈ ವಿವರವು ದಾಖಲಾಗಿರುತ್ತದೆ -
ಇಂತಹಾ ವಿಚಿತ್ರವಾದಂತಹಾ ಕನಸನ್ನು ಕಂಡ ದಿನ ಭಯದಿಂದ ಚಿಟ್ಟನೆ ಚೀರಿದ್ದಳು ಐದು ವರ್ಷದ ಬಾಲಕಿ ಆನಾ ಮಗಳ ಚೀರಾಟವನ್ನು ಕೇಳಿದ ತಾಯಿ ಗಾಬರಿಯಾಗಿ ಏನಾಯ್ತೆಂದು ಕೇಳಿದಾಗ ಏನನ್ನೂ ಹೇಳಲಾಗದೆ ತಾಯಿಯ ತೊಡೆಯಮೇಲೆ ಭಯದಿಂದ ನಡುಗುತ್ತಾ ಮಲಗಿದ್ದಳು –
ಯಾವುದೋ ಭಯದಿಂದ ಅಥವಾ ಕಥೆಯ ನೆನಪಿನಿಂದ ಮಗು ಬೆದರಿರ ಬಹುದೆಂದು ಆನಾಳ ತಂದೆ ತಾಯಿಯೂ ಆ ದಿನ ಸುಮ್ಮ ನಾಗಿದ್ದಳು ಆದರೇ ಆನಾ ಕಂಡಿದ್ದ ಈ ಕನಸು ಅದೊಂದೇ ದಿನಕ್ಕೆ ಕೊನೆಯಾಗಿರಲಿಲ್ಲ ಕೆಲ ದಿನಗಳ ನಂತರ ಅದೇ ಕನಸು ಪುನರಾವರ್ತನೆಯಾಗಿತ್ತು ಆ ದಿನವೂ ಆನಾ ಭಯದಿಂದ ಚೀರೀದ್ದಳು ಆನಾಳ ಭಯವನ್ನು ಗಂಭೀರವಾಗಿ ಪರಿಗಣಿಸಿದ ಅವಳ ಪೋಷಕರು ಚೀರಾಡಿದ ಕಾರಣವನ್ನು ಮಗಳಿಂದ ಕೇಳಿ ತಿಳಿದರು ಮಗಳ ಭಯದ ಕಾರಣವು ಒಂದು ವಿಚಿತ್ರ ಕನಸೆಂಬುದನ್ನು ತಿಳಿದು ಪೋಷಕರೂ ಸಹಾ ಸ್ವಲ್ಪ ಗೊಂದಲಕ್ಕೀಡಾಗಿದ್ದರು ಮತ್ತೊಂದು ದಿನ ಅದೇ ಕನಸು ಆನಾಳಿಗೆ ಮರುಕಳಿಸಿತು-
ಪೋಷಕರು ಮಗಳೊಂದಿಗೆ ಮನೋ ವೈದ್ಯರನ್ನು ಬೇಟಿ ಮಾಡಿದರು ಬಾಲಕಿ ಆನಾಳೊಂದಿಗೆ ಪ್ರೀತಿಯಿಂದ ಸಮಾಲೋಚಿಸಿದ ಮನೋ ವೈದ್ಯರು – ಅವಳು ಕಂಡ ಕನಸಿನ ವಿವರಗಳನ್ನು ಒಂದೆಡೆ ದಾಖಲಿಸಿಕೊಂಡರು ಹಾಗೂ ಪೋಷಕರೊಂದಿಗೆ ಹೆಚ್ಚು ಕಾಲ ಕಳೆಯುವಂತೆ ಹಾಗೂ ಕೆಲ ದಿಗಳು ಪೋಷಕರ ನಡುವೆಯೇ ಮಲಗುವಂತೆ ಸಲಹೆಯನ್ನು ನೀಡಿ ಕಳುಹಿಸಿದ್ದರು-
ದಿನಗಳು ವರ್ಷಗಳೂ ಕಳೆದವು ಆನಾ ವಿದ್ಯಾವಂತ ವಿಚಾರವಂತಳಾಗಿ ಬೆಳೆದು ಸುಂದರ ತರುಣಿಯಾದಳೂ ಆದರೇ ಆ ಕನಸು ಮಾತ್ರ ಅವಳಿಗೆ ಆಗಾಗ್ಗೆ ಮರುಕಳಿಸುತ್ತಲಿತ್ತು ಈಗ ಅವಳಿಗೆ ಆ ಕನಸಿನ ಬಗ್ಗೆ ಹೆಚ್ಚು ಭಯವಿರಲಿಲ್ಲ ಆದರೇ ಒಂದು ರೀತಿಯ ಕುತೂಹಲ ಇದೇ ಕನಸು ಪದೇ ಪದೇ ಏಕೆ ಮರುಕಳಿಸುತ್ತಿದೇ ಎಂಬ ಪ್ರಶ್ನೆಯೂ ಅವಳಲ್ಲಿ ಕಾಡುತ್ತಲಿತ್ತು
ಪೋಷಕರಿಗೂ ಸಹಾ ಮಗಳನ್ನು ಕಾಡುತ್ತಿದ್ದ ಕನಸು ಒಂದು ಬಿಡಿಸಲಾಗದ ಒಗಟಿನಂತಾಗಿತ್ತು ಯಾವ ವೈದ್ಯನಿಂದಲೂ ಆನಾ ಕನಸಿಗೆ ಪರಿಹಾರವನ್ನು ಸೂಚಿಸಲು ಸಾಧ್ಯವಾಗಿರಲಿಲ್ಲ- ಆನಾ ತನ್ನ ವೈದ್ಯಕೀಯ ವ್ಯಾಸಂಗವನ್ನು ಮಾಡುತ್ತಿದ್ದಾಗ ಈಸ್ಟ್ ಇಂಡಿಯಾ ಕಂಪನಿಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಒಬ್ಬ ಸುಂದರ ತರುಣನ ಜೊತೆ ಸ್ನೇಹವಾಗಿ ಪ್ರೇಮಾಂಕುರವಾಗಿತ್ತು ವಿಷಯವನ್ನು ತಿಳಿದ ಆನಾಳಪೋಷಕರು ಮಗಳಿಗೆ ಮದುವೆ ಮಾಡಿದರೇ ಅವಳನ್ನು ಕಾಡುತ್ತಿದ್ದ ಕನಸಿಗೊಂದು ಪರಿಹಾರವಾಗಬಹುದೆಂದು ಭಾವಿಸಿದರು ಆನಾ ಪ್ರೀತಿಸಿದ್ದ ಯುವಕನೂ ಅವನ ಪೋಷಕರಿಗೆ ತಮ್ಮ ಪ್ರೀತಿಯ ವಿಷಯ ತಿಳಿಸಿದಾಗ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಅವರೀರ್ವರ ವಿವಾಹವು ವಿಜ್ರಂಭಣೆಯಿಂದ ನೆಡೆದೋಯ್ತು- ಆನಾ ತನ್ನ ಗೆ ಕಾಡುವ ಕನಸಿನ ಬಗ್ಗೆ ತನ್ನ ಪತಿಯೊಡನೆ ಹೇಳಿಕೊಂಡಾಗ ಇದೊಂದು ಹಾಸ್ಯಾಸ್ಪದ ವಿಷಯವೆಂದು ಅವನು ನಕ್ಕಿದ್ದನು- ಆನಾಳೂ ಸಹಾ ವೈದ್ಯಕೀಯ ವ್ಯಾಸಂಗವನ್ನು ಮುಗಿಸಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ವೈದ್ಯಕೀಯ ಸೇವೆಗೆ ಸೇರಿಕೊಂಡಳು ದಂಪತಿಗಳಿಬ್ಬರನ್ನೂ ಕಂಪನಿಯೂ ಇಂಡಿಯಾಕ್ಕೆ ವರ್ಗ ಮಾಡಿತ್ತು- ಆದುದರಿಂದಾ ಅವರಿಬ್ಬರೂ 1855 ರಲ್ಲಿ ಇಂಗ್ಲೇಂಡ್ ನಿಂದ ಕೊಲ್ಕತ್ತಾಕೆ ಬಂದರು
ಇಂಡಿಯಾದಲ್ಲಿ ಆನಾ ದಂಪತಿಗಳು
ಕೊಲ್ಕತ್ತಾದ ದಾರಿಯಲ್ಲಿನ ಅಕ್ಕ ಪಕ್ಕದ ದೃಷ್ಯಗಳು ಹಾಗೂ ಅಲ್ಲಲ್ಲೀ ಓಡಾಡುತ್ತಿದ್ದ ಪೇಟಾದಾರೀ ಸೈನಿಕರುಗಳನ್ನು ನೋಡಿದ ಆನಾ ಹಗಲಿನಲ್ಲಿಯೇ ಅವಳನ್ನು ಕಾಡುತ್ತಿದ್ದ ಕನಸನ್ನು ಪದೇ ಪದೇ ಸ್ಮರಿಸಿಕೊಳ್ಳಲಾರಂಬಿಸಿದಳು ಏಕೆಂದರೇ ಆ ಎಲ್ಲಾ ದೃಷ್ಯಗಳು ಹಾಗೂ ಓಡಾಡುತ್ತಿದ್ದ ಸೈನಿಕರ ವೇಷಭೂಷಣಗಳು ಅವಳನ್ನು ಕಾಡುತ್ತಿದ್ದ ಕನಸಿನಲ್ಲಿರುವಂತೇಯೇ ಇದ್ದವು. ಇಂಡಿಯಾಕೆ ಬಂದಂದಿನಿಂದಲೂ ಆನಾಳ ಮನಃಸ್ಥಿತಿ ಅಷ್ಟೊಂದು ಅರಾಮದಾಯಕವಾಗಿರಲಿಲ್ಲ .
ಒಮ್ಮೆ ಅಕಸ್ಮಿಕವಾಗಿ ತನ್ನತ್ತ ಕುದುರೆಯಮೇಲೆ ಬಂದ ಕೆಂಪು ವಸ್ತ್ರಗಳನ್ನು ದರಿಸಿದ್ದ ಹಾಗೂ ಪೆಟಾದಾರಿಯಾಗಿದ್ದ ಕೈನಲ್ಲಿ ಖಡ್ಗವನ್ನು ಹಿಡಿದಿದ್ದ ಸೈನಿಕನನ್ನು ಕಂಡು ಚಿಟ್ಟನೆ ಚೀರಿದ್ದಳು ಆಗ ಆನಾಳ ಪತಿಯು ಪೋಷಕರನ್ನು ಬಿಟ್ಟು ದೂರ ಬಂದಿದ್ದರಿಂದ ನಿನಗೆ ಈರೀತಿ ಆಗುತ್ತಿದೆ ಕೆಲ ಕಾಲ ಆರಾಮವಾಗಿ ವಿಶ್ರಮಿಸು ಎಲ್ಲವೂ ಸರಿಹೋಗುತ್ತದೆಂದು ಹೇಳಿ ಸಮಾದಾನ ಪಡಿಸಿದ್ದ ದಿನಗಳು ಕಳೆದವು ಆನಾ ತನ್ನ ಪತಿಯ ಪ್ರೀತಿಯಲ್ಲಿ ತನ್ನ ಪೋಷಕರನ್ನು ಮರೆತು ಹಂತ ಹಂತ ವಾಗಿ ಇಂಡಿಯಾಕ್ಕೆ ಒಗ್ಗಿಕೊಂಡಳು
ಅವರು ತಂಗಿದ್ದ ಜಾಗದಲ್ಲಿ ಷಹಜಾನ್ ಪುರದ ಚರ್ಚ್ ಬಹಳ ಪ್ರಸಿದ್ದ ಚರ್ಚ್ ಆಗಿತ್ತು ಸಾಮಾನ್ಯವಾಗಿ ಪ್ರತಿಷ್ಟಿತ ಕ್ರಿಶ್ಚಿನ್ ಜನರು ಹಾಗೂ ಆಂಗ್ಲರು ತಮ್ಮ ಅನುಕೂಲಕ್ಕನುಗುಣವಾಗಿ ವಾರದಲ್ಲಿ ಒಮ್ಮೆಯಾದರೂ ಆ ಚರ್ಚ್ ಗೆ ಬಂದು ಪ್ರಾರ್ಥಿಸುತ್ತಿದ್ದರು- ಆನಾ ದಂಪತಿಗಳು ಸಹಾ ಬಾನುವಾರ ಷಹಜಾನ್ ಪುರದ ಚರ್ಚ್ ಗೆ ಬಂದು ಪ್ರಾರ್ಥನೆ ಸಲ್ಲಿಸಲು ತೀರ್ಮಾನಿಸಿದ್ದರು
ಷಹಜಾನ್ ಪುರದ ಆ ಚರ್ಚ್
ಆ ದಿನ ಬಾನುವಾರ 1857 ರ ಮೇ 31 ನೇ ತಾರೀಕು ಆನಾ ಮತ್ತು ಅವಳ ಗಂಡ ಷಹಜಾನ್ ಪುರದ ಚರ್ಚ್ ಗೆ ಬಂದಿದ್ದರು ಚರ್ಚ್ ಅನ್ನು ಕಂಡ ಆನಾ ಭಯದಿಂದ ಬೆವತುಹೋದಳು ಆ ಚರ್ಚ್ ತಾನು ಕನಸಿನಲ್ಲಿ ಕಂಡ ಚರ್ಚ್ ನಂತೆಯೇ ಇತ್ತು ಅವಳು ಚರ್ಚ್ ನೊಳಗೆ ಬರಲು ನಿರಾಕರಿಸಿದ್ದಳು ಆದರೂ ಅವಳೊಂದಿಗಿದ್ದ ಕೆಲ ಆಂಗ್ಲರು ಹಾಗೂ ಆನಾಳ ಗಂಡ ಇದೊಂದು ಭ್ರಾಂಥಿಯೆಂದು ಸಮಾದಾನ ಪಡಿಸಿ ಚರ್ಚ್ ನೊಳಗೆ ಕರೆದೊಯ್ದರು ಸಮಯ ಬೆಳಿಗ್ಗೆ 9-30 ಸೂರ್ಯನ ಕಿರಣಗಳು ಚರ್ಚ್ ನ ಕಿಟಕಿಗಳ ಮೂಲಕ ಒಳ ನುಸುಳುತ್ತಿದ್ದವು
ಷಹಜಾನ್ ಪುರದಲ್ಲಿದ್ದ ಆ ಸುಂದರವಾದ ಚರ್ಚ್ ನೋಡಲು ಬಹಳ ಸುಂದರವಾಗಿ ಹಾಗೂ ಮನಮೋಹಕವಾಗಿತ್ತು ಹೀಗಾಗಿ ಆ ಕಾಲದಲ್ಲಿ ಅದು ಹೆಚ್ಚು ಪ್ರಸಿದ್ದಿಯನ್ನು ಪಡೆದಿತ್ತು –
ಸೂರ್ಯನ ಕಿರಣಗಳು ಚರ್ಚ ನ ಪೂರ್ವ ದಿಕ್ಕಿನಲ್ಲಿದ್ದ ದೊಡ್ಡ ದೊಡ್ಡ ಕಿಟಕಿಗಳ ಸರಳುಗಳನ್ನು ನುಸುಳಿ ಒಳಬಂದು ಒಳಾಂಗಣದಲ್ಲಿ ಬೆಳಕು ಚೆಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುವಂತೆ ಮಾಡುತ್ತಿದ್ದವು ಚರ್ಚ್ ನ ಹೊರಬಾಗದಲ್ಲಿ ಆಗತಾನೆ ಬಿಸಿಲು ತನ್ನ ತಾಪವನ್ನು ಹೆಚ್ಚಿಸಿಕೊಳ್ಳುತ್ತಿತ್ತು ಒಳಾಂಗಣದಲ್ಲಿ ನೂರಾರು ಜನ ಆಂಗ್ಲರು ಪ್ರಾರ್ಥಿಸಲು ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು ಚರ್ಚ್ ನ ಒಳಾಂಗಣದಲ್ಲಿನ ಶಾಂತಿ ಹಾಗೂ ಸ್ವಚ್ಚತೆಯು ಅಲ್ಲಿದ್ದ ಜನರ ಭಕ್ತಿಯ ಭಾವವನ್ನು ಹೆಚ್ಚಿಸುತ್ತಿತ್ತು ಆದಿನ ಜೀಸಸ್ ಹಿಂದೆಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸುತ್ತಾ ತನ್ನ ಕಣ್ಣಂಚಿನಿಂದ ಪ್ರೀತಿ ಮತ್ತು ಕರುಣೆಯನ್ನು ಪ್ರಸಾದವನ್ನು ಹಂಚುತ್ತಿದ್ದನು
ಚರ್ಚಿನ ಪಾದ್ರಿಯು ಭಕ್ತಿಪೂರ್ವಕವಾಗಿ ಜೀಸಸ್ ಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದನು ಅಲ್ಲಿದ್ದ ಜನರೆಲ್ಲರೂ ಏಕಾಗ್ರತೆಯಿಂದ ಪ್ರಾದ್ರಿಯ ಪ್ರಾರ್ಥನೆಯನ್ನು ಆಲಿಸುತ್ತಾ ಜೀಸಸ್ ನ ಮುಖವನ್ನು ನೋಡುತ್ತಾ ಅವನ ಕಣ್ಣಂಚಿನಲ್ಲಿದ್ದ ಕರುಣೆಯನ್ನು ಕಂಡು ಭಾವ ಪರವಷರಾಗಿದ್ದರು
ಶುಭ್ರವಾದ ಬಿಳೀ ಬಣ್ಣದ ಬಟ್ಟೆಯನ್ನು ಧರಿಸಿದ್ದ ಆನಾ ತನ್ನ ಕೋಮಲವಾದ ಕೈಗಳನ್ನು ಚಾಚಿ ಜೀಸಸ್ ನನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ ಜೀಸಸ್ ನ ಮುಖವನ್ನೇ ತದೇಕ ಚಿತ್ತದಿಂದ ನೋಡುತ್ತಾ ಮಘ್ನಳಾಗಿದ್ದಳು
ದೂರದಿಂದ ಕೇಳಿಬರುತ್ತಿದ್ದ ಒಂದು ರೀಯ ಕೋಲಾಹಲದ ಶಬ್ಧವು ಆ ಸುಂದರ ತರುಣಿಯ ಏಕಾಗ್ರತೆಗೆ ಭಂಗ ತರುತ್ತಿತ್ತು –ಕೆಲವೇ ನಿಮಿಷಗಳಲ್ಲಿ ಆ ಕೋಲಾಹಲದ ಶಬ್ಧವು ಚರ್ಚ ಗೆ ಹತ್ತಿರವಾಗುತ್ತಿತ್ತು ಚರ್ಚ್ ನೊಳಗಿದ್ದ ಪ್ರಶಾಂತ ಹಾಗೂ ಭಕ್ತಿ ಪೂರ್ವಕ ವಾತಾವರಣವು ಚದುರಿದಂತಾಯ್ತು -
ಪ್ರಾರ್ಥಿಸಲು ಬಂದಿದ್ದ ಜನರ ಏಕಾಗ್ರತೆಯು ಬೇರೆಡೆತಿರುಗಿತು ಅವರು ಚರ್ಚ್ ನ ಹೊರಗೆ ನೋಡಿದರು – ನೂರಾರು ಜನ ಸೈನಿಕರು ಅವರು ಗಡ್ಡದಾರಿಗಳಾಗಿದ್ದಾರೆ ಹಾಗೂ ಪೇಟವನ್ನು ದರಿಸಿದ್ದಾರೆ ಕೆಂಪು ಬಣ್ಣದ ವಸ್ತ್ರಗಳನ್ನು ದರಿಸಿದ್ದಾರೆ ಕೈ ಯಲ್ಲಿ ಉದ್ದವಾದ ಖಡ್ಗವನ್ನು ಹಿಡಿದಿದ್ದಾರೆ ಅವರೆಲ್ಲರೂ ಬಹಳ ಉದ್ರಿಕ್ತರಾಗಿದ್ದಾರೆ ಹಾಗೂ ಚರ್ಚ್ ನತ್ತಾ ದಾವಿಸಿ ಬರುತ್ತಿದ್ದಾರೆ – ಜೀಸಸ್ ನ ಕಣ್ಣು ಗಳನ್ನು ನೋಡುತ್ತಾ ಅವನಲ್ಲಿಯೇ ಲೀನವಾಗಿದ್ದ ಆನಾ ಹೊರಗಿನ ಭಯಾನಕ ಕೋಲಾಹಲದ ಶಬ್ಧದಿಂದ ವಿಚಲಿತಳಾಗಿ ಕಿಟಕಿಯ ಮೂಲಕ ಹೊರಗಡೆ ನೋಡಿದಳು ಅವಳು ಭಯದಿಂದ ತತ್ತರಿಸಿದಳು ನೋಡುನೋಡುತ್ತಲೇ ಉದ್ರಿಕ್ತ ಸೈನಿಕರು ಚರ್ಚ್ ನ ಒಳಗೆ ನುಗ್ಗಿ ಬಂದರು ಅವರು ತಮ್ಮ ಖಡ್ಗ ಗಳನ್ನು ಜಳಪಿಸುತ್ತಿದ್ದರು –
ಚರ್ಚ್ ನ ಪಾದ್ರಿಯು ಅವರನ್ನು ತಡೆಯಲು ಮುಂದಾರು ಗಡ್ಡದೊಳಗೆ ಮುಖವನ್ನು ಮುಚ್ಚಿಕೊಂಡಂತಿದ್ದ ಪೇಟದಾರಿ ಸೈನಿಕನೊಬ್ಬ ತನ್ನ ಹರಿತವಾದ ಖಡ್ಗವನ್ನು ಎತ್ತಿ ಒಂದೇ ಏಟಿಗೆ ಪಾದ್ರಿಯ ರುಂಡವನ್ನು ನೆಲಕ್ಕುರುಳಿಸಿದನು ಚರ್ಚ ನಲ್ಲಿದ್ದ ಜನರೆಲ್ಲರೂ ಭಯದಿಂದ ಕೂಗಲಾರಂಬಿಸಿದರು ಹಾಗೂ ನಮಗೆ ಏನೂ ಮಾಡಬೇಡಿ ನಾವು ಯಾವುದೇ ತಪ್ಪು ಮಾಡಿಲ್ಲವೆಂದು ಸೈನಿಕರಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದರು ಚರ್ಚ್ ನ ತುಂಬೆಲ್ಲಾ ಅರ್ಥನಾದ ಚೀತ್ಕಾರಗಳು ಕೋಲಾಹಲದ ಭಯಾನಕ ಕಿರುಚಾಟಗಳೇ ತುಂಬಿದ್ದವು ಮಕ್ಕಳು ಭಯದಿಂದ ಅಳಲಾರಂಬಿಸಿದರು ವೃದ್ದರು ಕುಸಿದು ನೆಲಕ್ಕುರುಳಿದರು – ಆ ಸೈನಿಕರು ಯಾರ ಮನವಿಯನ್ನೂ ಕಿವಿಯಮೇಲೆ ಹಾಕಿಕೊಳ್ಳಲಿಲ್ಲ ಸಿಕ್ಕ ಸಿಕ್ಕವರನ್ನು ತಮ್ಮ ಚೂಪಾದ ಖಡ್ಗಳಿಂದ ಚುಚ್ಚಿ ಕೊಂದರು ಚರ್ಚ್ ನ ಒಳಾಂಗಣವೂ ರಕ್ತದಿಂದ ತೋಯ್ದುಹೋಯ್ತು ಚರ್ಚ್ ನೊಳಗಿದ್ದವರಲ್ಲಿ ಹೆಚ್ಚಿನವರು ಹತ್ಯೆಯಾಗಿದ್ದರು ಇನ್ನೂ ಕೆಲವರು ಜೀವಬಿಡುವ ನೋವಿನಲ್ಲಿ ನರಳುತ್ತಿದ್ದರು ಮತ್ತೆ ಕೆಲವರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದರು
ಇದನ್ನು ಕಂಡು ದಿಘ್ರಾಂತಳಾಗಿ ಓಡಲು ಪ್ರಯತ್ನಿಸುತ್ತಿದ್ದ ಆನಾಳನ್ನು ಎದಿರುಗೊಂಡ ಸೈನಿಕನೊಬ್ಬ ತನ್ನ ಉದ್ದವಾದ ಖಡ್ಗದಿಂದ ಇರಿದನು ಅವಳು ಧರಿಸಿದ್ದ ಶುಭ್ರ ಬಿಳೀ ಬಣ್ಣದ ವಸ್ತ್ರಗಳು ಅವಳದೇ ರಕ್ತದಿಂದ ತೋಯ್ದು ತೊಪ್ಪೆಯಾದವು ಅವಳು ನೆಲದಮೇಲೆ ಬಿದ್ದು ಗೋಳಾಡುತ್ತಾ ಪ್ರಾಣ ಬಿಟ್ಟಳು -ಆನಾಳ ಗಂಡನೂ ಎಲ್ಲೋ ಶವಗಳ ನಡುವೆ ಹುದುಗಿಹೋಗಿದ್ದನು
ಘಟನೆಯ ವರದಿ
ಈ ಘಟನೆ ಯಾವುದು ಹಾಗೂ ಯಾವಾಗ ಎಲ್ಲಿ ನೆಡೆದಿತ್ತೆಂಬುದರ ಅರಿವು ನಿಮಗೂ ಇರಬಹುದು ಈ ಘಟನೆಯೇ 1857 ರ ಮೇ 31 ರಂದು ಷಹಜಾನ್ ಪುರದಲ್ಲಿ ನೆಡೆದ ಸಿಪಾಯಿದಂಗೆಯ ಆರಂಬದ ದಿನ ಸಿಕ್ಕ ಸಿಕ್ಕ ಆಂಗ್ಲರನ್ನು ಕೊಲ್ಲಲೇ ಬೇಕೆಂದು ತೀರ್ಮಾನಿಸಿ ಬುಗಿಲೆದ್ದಿದ್ದ ಸೈನಿಕರು ಷಹಜಾನ್ ಪುರದ ಚರ್ಚ್ ನಿಂದ ತಮ್ಮ ದಂಗೆಗೆ ಚಾಲನೆ ನೀಡಿದ್ದರು ಈ ಘಟನೆಯು ಇಂಡಿಯಾದ ಇತಿಹಾಸದ ಪುಟದಲ್ಲಿ ಇಂದಿಗೂ ಒಂದು ಮೈ ಜುಮ್ಮೆನ್ನಿಸುವ ಸಂಗತಿಯಾಗಿ ದಾಖಲಾಗಿದೆ
ಆನಾ ಳ ಕನಸಿನ ವಿವರಗಳನ್ನು ವಿಶ್ಲೇಷಿಸಿದ್ದ ಕೆಲ ಮನೋವಿಜ್ಣಾನಿಗಳು ಕನಸುಗಳನ್ನು ಭವಿಷ್ಯದ ಸೂಚಕಗಳೆಂದು ಭಾವಿಸುವುದಾದರೇ ಇಂತಹಾ ಘಟನೆಯೂ ಇಂಗ್ಲೇಂಡ್ ನಲ್ಲಿ ಜರುಗಲು ಸಾದ್ಯವಿಲ್ಲ ಏಕೆಂದರೇ ಸೂರ್ಯನಕಿರಣಗಳು ಅಷ್ಟು ಪ್ರಕಾಶಮಾನವಾಗಿ ಸಾಮಾನ್ಯವಾಗಿ ಉಷ್ಣವಲಯದ ದೇಶಗಳಲ್ಲಿಮಾತ್ರ ಕಾಣಿಸಲು ಸಾಧ್ಯ ಹೀಗಾಗಿ ಇಂತಹಾ ಘಟನೆಯೂ ಏಷ್ಯಾ ಖಂಡದ ಯಾವುದೇ ಬಾಗದಲ್ಲಾದರೂ ಜರುಗಬಹುದೆಂದು ಹಾಗೂ ಸಾಮಾನ್ಯವಾಗಿ ಈ ಘಟನೆ ಸಂಭವಿಸುವ ಸಮಯವೂ ಉಷ್ಣ ವಲಯದ ದೇಶದ ಬೆಳಗಿನ 10 ಗಂಟೆಗೂ ಮೊದಲ ಸಮಯವಾಗಿರುತ್ತದೆಂದು ಊಹಿಸಿ ದಾಖಲಿಸಿದ್ದರು ಇನ್ನೂ ಕೆಲವರು ಸೈನಿಕರ ವೇಶ ಭೂಷಣಗಳನ್ನು ಆದರಿಸಿ ಈ ಘಟನೆ ಸಾಮಾನ್ಯವಾಗಿ ಇಂಡಿಯಾದಲ್ಲೇ ನೆಡೆಯಬಹುದೆಂದು ಊಹಿಸಿದ್ದರು ಸಿಪಾಯಿ ದಂಗೆ ನೆಡೆಯುವ 20 ವರ್ಷಗಳ ಮೊದಲೇ ಆನಾ ಆ ದಂಗೆಯ ಬಗ್ಗೆ ಹಾಗೂ ಅದೇ ದಂಗೆಯಲ್ಲಿ ತಾನೂ ಬಲಿಯಾಗುವ ಬಗ್ಗೆ ಕನಸು ಕಂಡಿದ್ದಳು- ಈ ವರದಿಯು ಜಗತ್ತಿನ ಎಲ್ಲಾ ದೇಶಗಳಲ್ಲೂ ಹಾಗೂ ಲಿಪಿಗಳಿರುವ ಎಲ್ಲಾ ಭಾಷೆಗಳಲ್ಲೂ ವಿಶೇಷವಾಗಿ ಮನೋರೋಗ ವಿಜ್ಣಾನ ಹಾಗೂ ಕನಸುಗಳ ವಿಶ್ಲೆಷಣೆಯ ವಿವರಗಳಿಗೆ ಸಂಬಂದಿಸಿದಂತೆ ಇಂದಿಗೂ ಒಂದು ಪ್ರಮುಖ ದಾಖಲೆಯಾಗಿರುತ್ತದೆ (ಈ ವಿವರವನ್ನು ನೀವು ಈಗಾಗಲೇ ಯಾವುದೇ ಭಾಷೆಯಲ್ಲಾದರೂ ಅಥವಾ ಪತ್ರಿಕೆಯಲ್ಲಾದರೂ ಓದಿರಲೂ ಬಹುದು)
ವಂದನೆಗಳೊಂದಿಗೆ